ಕರಾವಳಿ

ದ.ಕ.ಜಿಲ್ಲೆಯಲ್ಲಿ ದುಬೈಯಿಂದ ಬಂದವರು ಸೇರಿ 16 ಮಂದಿಗೆ ಕೊರೋನಾ ಪಾಸಿಟಿವ್ : ಆತಂಕದಲ್ಲಿ ಜಿಲ್ಲೆಯ ಜನತೆ

Pinterest LinkedIn Tumblr

ಮಂಗಳೂರು, ಮೇ 15: ದುಬೈಯಿಂದ ಮೇ 12ರಂದು ಮೊದಲ ವಿಮಾನದಲ್ಲಿ ಮಂಗಳೂರಿಗೆ ಆಗಮಿಸಿದ 15 ಮಂದಿ ಸೇರಿದಂತೆ ದ.ಕ ಜಿಲ್ಲೆಯಲ್ಲಿ ಇಂದು 16 ಕೊರೋನಾ ಪಾಸಿಟಿವ್ ಪತ್ತೆಯಾಗಿದೆ.

ದುಬೈನಿಂದ ಮಂಗಳೂರಿಗೆ ಆಗಮಿಸಿರುವ ಪ್ರಯಾಣಿಕರ ಪೈಕಿ ಬರೋಬ್ಬರಿ 15 ಮಂದಿಯಲ್ಲಿ ಸೋಂಕು ಇರುವುದು ದೃಢಪಟ್ಟಿರುವ ಬಗ್ಗೆ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದ್ದು, ಇದು ಇಡೀ ಜಿಲ್ಲೆಯನ್ನು ಬೆಚ್ಚಿಬೀಳುವಂತೆ ಮಾಡಿದೆ.

ಮೇ. 12 ರಂದು ವಿಶೇಷ ವಿಮಾನದ ಮೂಲಕ ಬಂದಿಳಿದ 176 ಮಂದಿ ಪೈಕಿ, ದ.ಕ ದ ಮೂಲದ 96 ಜನರ ಗಂಟಲಿನ ದ್ರವ ತೆಗೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ಪೈಕಿ 15 ಮಂದಿಗೆ ಕೊರೊನಾ ತಗುಲಿರುವುದು ಖಚಿತವಾಗಿದೆ. ಇದಲ್ಲದೆ ಫಸ್ಟ್ ನ್ಯೂರೋ ನಂಟು ಹೊಂದಿದ ಒಬ್ಬರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ವಿದೇಶದಲ್ಲಿದ್ದ 176 ಮಂದಿ ಭಾರತೀಯರು ಮೇ. 12 ರಂದು ವಿಶೇಷ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿದ್ದರು. ದ.ಕ ಜಿಲ್ಲಾಡಳಿತ ಇವರನ್ನು ಮನೆಗೆ ತೆರಳಲು ಹಾಗೂ ಯಾರನ್ನು ಸಂಪರ್ಕಿಸಿಲು ಬಿಡದೆ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ವೈದ್ಯಕೀಯ ತಪಾಸಣೆ ನಡೆಸಿ ಬಳಿಕ ಕ್ವಾರಂಟೈನ್ ಗೆ ಒಳಪಡಿಸಿತ್ತು.

ವಿದೇಶದಲ್ಲಿರುವ ಭಾರತೀಯರನ್ನು ತಾಯ್ನಾಡಿಗೆ ಕರೆತರಲು ಜಿಲ್ಲಾಡಳಿತವು ಅಗತ್ಯ ಸಿದ್ಧತೆಗಳನ್ನು ಮಾಡಿತ್ತು. ಯು.ಎ.ಇ ನಿಂದ ಮಂಗಳೂರಿಗೆ ವಿಶೇಷ ವಿಮಾನದಲ್ಲಿ 95 ಮಂದಿ ಪುರುಷರು, 38ಮಂದಿ ಗರ್ಭಿಣಿಯರು ಸೇರಿ ಮಹಿಳೆಯರು 81, ಒಟ್ಟು 176 ಪ್ರಯಾಣಿಕರು ಆಗಮಿಸಿದ್ದರು.

ಇವರಿಗೆ 17 ಹೋಟೆಲ್‍ಗಳು ಹಾಗೂ 12 ಹಾಸ್ಟೆಲ್ ಗಳಲ್ಲಿ ಇರಿಸಲು ವ್ಯವಸ್ಥೆ ಮಾಡಲಾಗಿತ್ತು. ಈ ಕ್ರಮದಿಂದ ಜಿಲ್ಲೆಯ ಜನರಿಗೆ ಕೊರೊನಾ ಹರಡುವ ಸಾಧ್ಯತೆ ಇರುವ ಕಡಿಮೆ ಇದೆ. ಜಿಲ್ಲೆಯ ಜನತೆ ಭಯ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.

ಮುಖ್ಯಂಶಗಳು :

ದ.ಕ ಜಿಲ್ಲೆಗೆ ಅಪ್ಪಳಿಸಿದ ದುಬೈ ಏರ್ ಲಿಫ್ಟ್ ಸುನಾಮಿ

ದ.ಕ ಜಿಲ್ಲೆಯಲ್ಲಿ ಇಂದು 16 ಕೊರೋನಾ ಪಾಸಿಟಿವ್ ಪತ್ತೆ

ಇಂದು ಒಟ್ಟು 12 ಪುರುಷರು ಮತ್ತು 4 ಮಹಿಳೆಯರಿಗೆ ಸೋಂಕು ದೃಢ

ದುಬೈನಿಂದ ವಾಪಾಸ್ ಆದ 15 ಜನರಿಗೆ ಕೊರೋನಾ ಪಾಸಿಟಿವ್

ಮೇ.12ರಂದು ದುಬೈನಿಂದ ಏರ್ ಲಿಫ್ಟ್ ಆಗಿದ್ದ ಮಂಗಳೂರಿಗರು

123 ಜನರ ಪೈಕಿ 15 ಜನರಿಗೆ ಕೊರೋನಾ ಪಾಸಿಟಿವ್ ಪತ್ತೆ

ಏರ್ ಲಿಫ್ಟ್ ಅಗಿದ್ದ 176 ಪ್ರಯಾಣಿಕರ ಪೈಕಿ 123 ಜನ ಮಂಗಳೂರಿಗರು

15 ದುಬೈ ರಿಟರ್ನ್ಸ್ ಮತ್ತು 1 ಬೇರೆ ಸಂಪರ್ಕದಿಂದ ಸೋಂಕು

ಸದ್ಯ ದ.ಕ ಜಿಲ್ಲೆಯ ಸಕ್ರಿಯ ಪ್ರಕರಣಗಳ ಸಂಖ್ಯೆ 29ಕ್ಕೆ ಏರಿಕೆ

ದ.ಕ ಜಿಲ್ಲೆಯಲ್ಲಿ ಈವರೆಗೆ ಪತ್ತೆಯಾದ ಪಾಸಿಟಿವ್ ಕೇಸ್ ಗಳ ಸಂಖ್ಯೆ 50ಕ್ಕೆ ಏರಿಕೆ

ದ.ಕ ಜಿಲ್ಲೆಯಲ್ಲಿ ಸೋಂಕಿಗೆ ಬಲಿಯಾದವರು 5 ಮಂದಿ

ಫಸ್ಟ್ ನ್ಯೂರೋ ಸಂಪರ್ಕದಿಂದ ಸೋಂಕು ತಗುಲಿ ಸಕ್ರಿಯ ಪ್ರಕರಣ 13

Comments are closed.