ಕರಾವಳಿ

ಬ್ರೇಕಿಂಗ್ ನ್ಯೂಸ್ : ದುಬೈಯಿಂದ ಮಂಗಳೂರಿಗೆ ಬಂದ 14 ಮಂದಿಗೆ ಕೊರೋನ ಪಾಸಿಟಿವ್ ಶಂಕೆ? – ಉಡುಪಿ ಜಿಲ್ಲೆಯ 5 ಮಂದಿಯಲ್ಲಿ ಸೋಂಕು ದೃಢ

Pinterest LinkedIn Tumblr

ಮಂಗಳೂರು / ಉಡುಪಿ, ಮೇ 15: ದುಬೈಯಿಂದ ಮೇ 12ರಂದು ಮೊದಲ ವಿಮಾನದಲ್ಲಿ ಮಂಗಳೂರಿಗೆ ಆಗಮಿಸಿದ 14 ಮಂದಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿರುವುದಾಗಿ ವಾಹಿನಿಗಳಲ್ಲಿ ಸುದ್ಧಿ ಹಬ್ಬಿದೆ. ಆದರೆ ಈ ಬಗ್ಗೆ ದ.ಕ.ಜಿಲ್ಲಾಡಳಿತ ಯಾವೂದೇ ಅಧಿಕೃತ ಮಾಹಿತಿಯನ್ನು ಇದುವರೆಗೆ ನೀಡಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ

ಉಡುಪಿ ಜಿಲ್ಲೆಯ 5 ಮಂದಿಯಲ್ಲಿ ಸೋಂಕು ದೃಢ :

ಇದೇ ವಿಮಾನದಲ್ಲಿ ಉಡುಪಿಗೆ ಆಗಮಿಸಿದ ಉಡುಪಿ ಜಿಲ್ಲೆಯ 5 ಮಂದಿಯಲ್ಲಿ ಕೊರೋನ ವೈರಸ್ ಸೋಂಕು ದೃಢಪಟ್ಟಿರುವುದಾಗಿ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.

ಕೊರೋನ ಕಾರಣಕ್ಕಾಗಿ ವಿದೇಶಗಳಲ್ಲಿ ಸಿಲುಕಿಕೊಂಡಿರುವ ಅನಿವಾಸಿ ಭಾರತೀಯರನ್ನು ಮರಳಿ ಭಾರತಕ್ಕೆ ತರುವ ಕಾರ್ಯಾಚರಣೆಯಡಿ 176 ಮಂದಿ ಮಂಗಳವಾರ ರಾತ್ರಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದರು.

ಈ ಪೈಕಿ ಉಡುಪಿ ಜಿಲ್ಲೆಗೆ ಸೇರಿದ 49 ಮಂದಿಯನ್ನು ಜಿಲ್ಲೆಯ ಹೊಟೇಲ್‌ ನಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಇವರ ಗಂಟಲದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರ ವರದಿ ಇಂದು ಬಂದಿದ್ದು, ಇವರಲ್ಲಿ ಆರು ಮಂದಿಯ ವರದಿ ಕೊರೋನ ಪಾಸಿಟಿವ್ ಬಂದಿದೆ.

ಈ ಹಿನ್ನೆಲೆಯಲ್ಲಿ ಆರು ಮಂದಿಯನ್ನು ಅವರು ಉಳಿದುಕೊಂಡಿರುವ ಹೊಟೇಲ್‌ಗಳಿಂದ ಉಡುಪಿಯ ಟಿಎಂಎ ಪೈ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗುವುದು ಎಂದವರು ಮಾಹಿತಿ ನೀಡಿದ್ದಾರೆ.
 

Comments are closed.