ಕರಾವಳಿ

ಬೈಂದೂರು ಹೊಸಾಡು ಹೊಳೆಗೆ ಸುಸಜ್ಜಿತ ಕಾಲುಸಂಕ; ಮಳೆಗಾಲದೊಳಗೆ ಸಂಚಾರಕ್ಕೆ ಸಿದ್ದ-ಶಾಸಕ ಸುಕುಮಾರ ಶೆಟ್ಟಿ

Pinterest LinkedIn Tumblr

ಕುಂದಾಪುರ: ಪ್ರತೀ ಮಳೆಗಾಲದಲ್ಲಿ ಉಕ್ಕಿಹರಿವ ಹೊಳೆ ದಾಟುವ ತಾಪತ್ರಯದಿಂದ ನಾಗರಿಕರು ಮುಕ್ತರಾಗಲಿದ್ದಾರೆ. ಹೊಸಾಡು ಜನರ ಸಂಚಾರ ಸಂಕಷ್ಟಕ್ಕೆ ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿಯವರು ಪರಿಹಾರ ಮಾಡಿಸಿಕೊಟ್ಟಿದ್ದಾರೆ.

   

ಬೈಂದೂರು ತಾಲೂಕು, ಕಾಲ್ತೋಡು ಗ್ರಾಮ ಬೊಳಂಬಳ್ಳಿ ಹೊಸಾಡು ನಡುವೆ ಹಾದು ಹೋಗುವ ಹೊಸಾಡು ಹೊಳೆಯೇ ಊರಿಗೆ ದೊಡ್ಡ ವಿಲನ್. ತುಂಬಿ ಹರಿವ ಹೊಳೆ ಮೇಲಿನ ಹಾವಿನ ಹಾದಿಯಂತಿರುವ ಸಂಕದ ಮೇಲಿನ ಸಂಚಾರಕ್ಕೆ ಎಂಟೆದೆ ಬೇಕಿತ್ತು. ಬೋಳಂಬಳಿ ಶಾಲೆಗೆ ಹೋಗುವ ಮಕ್ಕಳು, ಅಂಗನವಾಡಿಗೆ ಹೋಗುವ ಪುಟಾಣಿಗಳು ಮಳೆಗಾದಲ್ಲಿ ಕಡ್ಡಾಯ ರಜೆ. ಶಾಲೆಗೆ ಹೋಗವ ಮಕ್ಕಳ ಪೋಷಕರು ಬೆಳಗ್ಗೆ ಸಂಕದಾಟಿಸಿ, ಸಂಜೆ ಮಕ್ಕಳು ಬರುವ ತನಕ ಹೊಳೆ ದಡದಲ್ಲಿ ಕಾದುಕೂತು ಮನೆಗೆ ಕರೆದುಕೊಂಡು ಹೋಗುವ ಸ್ಥಿತಿ ಇತ್ತು. ಹೊಳೆ ಹೋರಿಗೆ ಕೃಷಿ ಪರಿಕರ, ಕೊಣಗಳ ಹೊಳೆ ದಾಟಿಸಲು ಆಗದ ಕಾರಣ ಕೃಷಿ ಕೈಬಿಟ್ಟಿದ್ದರು.

ಹೊಸಾಡು ಹೊಳೆ ಬಳಸಿ ಕಾಲುಸಂಕದ ಮೇಲೆ ಪ್ರತಿದಿನ 1500 ಹೆಚ್ಚು ಜನರು ಸಂಚರಿಸುತ್ತಾರೆ. 350ಕ್ಕೂ ಮಿಕ್ಕ ನಾಗರಿಕರಿಗೆ ಸಂಕ ಅತ್ಯಾವಶ್ಯಕ. ಹೊಸಾಡು ಪರಿಸರದಲ್ಲಿ 40ಕ್ಕೂ ಮಿಕ್ಕ ಕುಟುಂಬವಿದ್ದು, ಕೃಷಿ ಮುಖ್ಯ ಕಸುಬಾದರೂ ಹೊಳೆ ಕೃಷಿ ಕೈಬಿಡವಂತೆ ಮಾಡಿದೆ. ಬೋಳಂಬಳ್ಳಿ, ಹೊಸಾಡು, ಕಾಡಿನಹೊಳೆ, ಮುತ್ತಣ್ಕಿ, ಮೈನ್‌ಮಕ್ಕಿ, ಕಡಾಟೆ, ಕೆಂಜಿ, ಕೊಡಾಲು ಪರಿಸರದ ಜನ ಕಾಲ್ತೋಡಿಗೆ ಹೋಗಬೇಕಿದ್ದರೆ ಇದೇ ಸಂಕದಾಟಿ ಹೋಗಬೇಕು.

ಖುದ್ದು ಭೇಟಿ ನೀಡಿದ ಶಾಸಕರು..
ಹೊಸಾಡು ನಾಗರಿಕರು ಮಳೆಗಾಲದಲ್ಲಿ ಉಕ್ಕಿ ಹರಿವ ಹೊಳೆ ಅಪಾಯಕಾರಿ ಕಾಲುಸಂಕದಲ್ಲಿ ದಾಟುತ್ತಿರುವ ಬಗ್ಗೆ ಖುದ್ದು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಅಧಿಕಾರಿಗಳ ಜೊತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಮಳೆಗಾದ ನಂತರ ಕಾಲುಸಂಕ ಮಾಡುವ ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ಕಾಲುಸಂಕ ನಿರ್ಮಾಣ ಮಾಡಲಾಗುತ್ತಿದ್ದು, ಮಳೆಗಾಲದೊಳಗೆ ಸಂಚಾರಕ್ಕೆ ಮುಕ್ತವಾಗಲಿದೆ. ಶಾಸಕರು ಜಿಲ್ಲಾಧಿಕಾರಿಗೆ ಕಾಲು ಸಂಕ ನಿರ್ಮಾಣದ ಬಗ್ಗೆ ಜಿಲ್ಲಾಧಿಕಾರಿ ಗಮನ ಸೆಳೆದಿದ್ದು, ಅಂದಿನ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅನುದಾನ ಕೂಡಾ ಕಾದಿರಿಸಿದ್ದರು. ಕುಂದಾಪುರದಲ್ಲಿ ಅಂದು ಎಸಿಯಾಗಿದ್ದ ಟಿ.ಭೂಬಾಲನ್ ಕೂಡಾ ಸ್ಥಳಕ್ಕೆ ಭೇಟಿ ನೀಡಿ, ಕಾಲುಸಂಕದ ಎಷ್ಟು ಪ್ರಾಮುಖ್ಯ ಎಂಬ ಬಗ್ಗೆ ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.

(ಹೊಸಾಡು ಭಾಗದಲ್ಲಿ ಈ ಹಿಂದಿನ ಸ್ಥಿತಿ-ಮರದ ಕಾಲು ಸಂಕ)

ಹೊಸಾಡು ಹೊಳೆಗೆ ಕಾಲುಸಂಕದ ನಿರ್ಮಾಣದ ಜರೂರತ್ತಿದ್ದು, ಬೈಂದೂರು ಶಾಸಕರು ಮನಸ್ಸು ಮಾಡಿದ್ದರಿಂದ ಕಾಲುಸಂಕದ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ. ಕಾಲುಸಂಕ ಆಗುವುದರಿಂದ ಅಂಗನವಾಡಿ, ಶಾಲೆ ಕೃಷಿ ಕಾಯಕಕ್ಕೆ ಅನುಕೂಲವಾಗಲಿದೆ. ಹೊಳೆ ಉಕ್ಕಿ ಹರಿಯುವ ಸಂದರ್ಭ ಸುತ್ತಿಬಳಸಿ ಹೊಸಾಡು ಸೇರುವ ಕಷ್ಟ ಕೂಡಾ ತಪ್ಪಲಿದೆ. ಹೊಸಾಡು ಕಾಲುಸಂಕದ ಬಗ್ಗೆ ವಿಜಯವಾಣಿ ವರದಿ ಮಾಡುವ ಮೂಲಕ ಸಮಸ್ಯೆ ಹೊರಪ್ರಪಂಚಕ್ಕೆ ಪರಿಚಯಿಸಿದ್ದು, ಶಾಸಕರು ನಮ್ಮ ಸಮಸ್ಯೆ ಕಣ್ಣಾರೆ ಕಂಡು ಪರಿಹಾರ ನೀಡುವಂತೆ ಆಯಿತು. ಶಾಸಕರು ಹಾಗೂ ವಿಜಯವಾಣಿ ಪತ್ರಿಕೆ ನಾವು ಅಭಾರಿಗಳಾಗಿದ್ದೇವೆ.
-ಸುರೇಂದ್ರ ಗೌಡ, ಕೃಷಿಕ, ಹೊಸಾಡು.

ಹೊಸಾಡು ವಾಸಿಗಳು ಮಳೆಗಾದಲ್ಲಿ ಅಪಾಯಕಾರಿ ಕಾಲುಸಂಕ ದಾಟಿ ತಮ್ಮ ಬದುಕು ಕಟ್ಟಿಕೊಳ್ಳುತ್ತಿರುವುದು ಕಣ್ಣಾರೆ ಕಂಡಿದ್ದು, ಶಾಶ್ವತ ಕಾಲುಸಂಕದ ಅತ್ಯಾವಶ್ಯವಾಗಿತ್ತು. ಈ ನಿಟ್ಟಿನಲ್ಲಿ ಅಧಿಕಾರಿಗಳ ಜೊತೆ ಸ್ಥಳಕ್ಕೆ ಭೇಟಿ ನೀಡಿ ಯಾವುದಾದರೂ ಅನುದಾನದ ಮೂಲಕ ಕಾಲುಸಂಕ ಮಾಡುವ ನಿರ್ಧಾರಕ್ಕೆ ಬರಲಾಯಿತು. 10 ಲಕ್ಷ ರೂ ವೆಚ್ಚದಲ್ಲಿ ಶಾಲಾ ಸಂಪರ್ಕ ಸೇತು ಯೋಜನೆಯಲ್ಲಿ ಕಾಲುಸಂಕ ನಿರ್ಮಾಣವಾಗದ್ದು, ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗಿದ್ದು, ತ್ವರಿತ ಗತಿಯಲ್ಲಿ ಕಾಮಗಾರಿ ಮುಗಿಸಿ, ಮಳೆಗಾಲದೊಳಗೆ ಸಂಚಾರಕ್ಕೆ ಬಿಟ್ಟುಕೊಡುಂವತೆ ಸೂಚಿಸಿದ್ದೇನೆ. ಬೈಂದೂರು ಕ್ಷೇತ್ರದ ಎಲ್ಲಾ ಕಾಲುಸಂಕ ಇನ್ನಿತರ ಸಂಪರ್ಕ ವ್ಯವಸ್ಥೆ ರಸ್ತೆಗಳ ಅಭಿವೃದ್ಧಿಗೆ ಅನುದಾನ ತರಲಾಗಿದ್ದು, ಕಾಮಗಾರಿ ತ್ವರಿತ ಮುಗಿಸುವ ಪ್ರಯತ್ನ ಮಾಡಲಾಗುತ್ತದೆ.
ಬಿ.ಎಂ.ಸುಕುಮಾರ್ ಶೆಟ್ಟಿ, ಶಾಸಕ, ಬೈಂದೂರು.

Comments are closed.