ಕರಾವಳಿ

ಮುಂಬೈನಿಂದ ಕರಾವಳಿಗೆ ಬಂದವರ ಗೋಳು ಕೇಳೋರಿಲ್ಲ: ಬಿಸಿಲಲ್ಲಿ ನಿಂತು ಹಿಡಿಶಾಪ, ಕ್ವಾರೆಂಟೈನ್ ಕೂಡ ಅವ್ಯವಸ್ಥೆ?!

Pinterest LinkedIn Tumblr

ಕುಂದಾಪುರ: ಮುಂಬೈ ಸೇರಿದಂತೆ ಹೊರರಾಜ್ಯಗಳಿಂದ ಕರಾವಳಿಯ ಉಡುಪಿ ಹಗೂ ದ.ಕ. ಜಿಲ್ಲೆಗೆ ಬರುತ್ತಿರುವ ಮಂದಿಗೆ ಹೊಟೇಲ್ ಕ್ವಾರೆಂಟೈನ್ ಮಾಡಿಕೊಳ್ಳಲು ಆಗದವರಿಗೆ ಸರ್ಕಾರಿ ಕ್ವಾರಂಟೈನ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಆದರೆ ಬಹುತೇಕ ಅವ್ಯವಸ್ಥೆಗಳಿಂದ ಕೂಡಿದ ಸರ್ಕಾರಿ ಕ್ವಾರಂಟೈನ್ ಗಳಲ್ಲಿ ಕನಿಷ್ಠ ಮೂಲಭೂತ ಸೌಕರ್ಯ ಒದಗಿಸದ ಜಿಲ್ಲಾಡಳಿತದ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ.

 

ಬಿಸಿಲಿನಲ್ಲಿ ಜನರ ಪರದಾಟ..
ಮುಂಬೈನಿಂದ ಬೈಂದೂರು, ಕುಂದಾಪುರ, ಕಾರ್ಕಳ, ಉಡುಪಿ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಗೆ ಬರುತ್ತಿರುವ ಹೊರರಾಜ್ಯದ ಕನ್ನಡಿಗರು ಬೈಂದೂರು ಸಮೀಪದ ಶಿರೂರು ಟೋಲ್ ಗೇಟ್ ಚೆಕ್ ಪೋಸ್ಟ್ ಬಳಿ ಆರೋಗ್ಯ ತಪಾಸಣೆ ನಡೆಸಬೇಕಿದೆ. ಹಗಲು ರಾತ್ರಿಯೂ ಕೂಡ ವಾಹನಗಲಲ್ಲಿ ಬಂದವರು ಗಂಟೆಗಟ್ಟಲೇ ಕಾದು ನಿಲ್ಲಬೇಕು. ಪುಟಾಣಿ ಮಕ್ಕಳು, ವಯೋವ್ರದ್ಧರು, ಮಹಿಳೆಯರು ಸೇರಿ ಎಲ್ಲರೂ ಬಿಸಿಲಿನಲ್ಲಿ ನಿಂತು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಕ್ವಾರೆಂಟೈನ್ ಕೂಡ ಸರಿಯಿಲ್ಲ….
ಹೊರ ರಾಜ್ಯದಿಂದ ಬಂದು ಹೋಟೇಲ್ ಕ್ವಾರೆಂಟೈನ್ ಆದರೆ ಪರವಾಗಿಲ್ಲ. ಆದರೆ ಸರಕಾರಿ ಕ್ವಾರೆಂಟೈನ್ ಪಡೆದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ ಎನ್ನುವ ಮಾತುಗಳು ಕೇಳಿಬರುತ್ತಿದೆ. ಸರಕಾರ ನೀಡುವ ಶಾಲೆ, ಹಾಸ್ಟೆಲ್ ಮೊದಲಾದ ವಸತಿನಿಲಯಗಳಲ್ಲಿ ಶೌಚಾಲಯಕ್ಕೆ ಬಾಗಿಲು ಇಲ್ಲ, ಕುಡಿಯುವ ನೀರಿನ ವ್ಯವಸ್ಥೆಯೂ ಸರಿ ಇಲ್ಲ. ಬೆಳಿಗ್ಗೆ ಹತ್ತು ಗಂಟೆಯಾದರೂ ತಿಂಡಿ ಕೊಡಲಿಲ್ಲ‌, ಮಧ್ಯಾಹ್ನ ಊಟ ಸರಿಯಾಗಿಲ್ಲ ಎಂದು ಅಳಲು ತೋಡಿಕೊಂಡು ಮಾಧ್ಯಮದವರಿಗೆ ನಿತ್ಯ ಹತ್ತಾರು ಕರೆಗಳು ಬರುತ್ತಿದೆ.

ತಕ್ಷಣ ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಸಂಬಂದಪಟ್ಟ ಇಲಾಖೆ ಸೂಕ್ತ ಕ್ರಮಗೈಗೊಳ್ಳಬೇಕಿದೆ.

 

Comments are closed.