ಕರಾವಳಿ

ದ.ಕ: ಇಂದು ಮತ್ತೊಂದು ಕೊರೊನಾ ಪಾಸಿಟಿವ್ ದೃಢ – ಜಿಲ್ಲೆಗೆ ಕಂಟಕವಾದ ಫಸ್ಟ್ ನ್ಯೂರೋ

Pinterest LinkedIn Tumblr

ಮಂಗಳೂರು, ಮೇ.13: ದ.ಕ.ಜಿಲ್ಲೆಯಲ್ಲಿ ಇಂದು ಮತ್ತೆ ಒಬ್ಬರಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಕು ಪೀಡಿತರ ಸಂಖ್ಯೆ 34ಕ್ಕೇ ಏರಿದೆ.

ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಮಧ್ಯಾಹ್ನದ ಬುಲೆಟಿನ್‌ನಲ್ಲಿ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ದ.ಕ.ಜಿಲ್ಲೆಯ ಮಂಗಳೂರು ತಾಲೂಕಿನ ದರಂದಾಬಾಗಿಲು, ಸೋಮೇಶ್ವರ ಗ್ರಾಮದ ಪಿಲಾರ್‌ನ  38 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ಖಚಿತವಾಗಿದೆ. ರೋಗಿ ಸಂಖ್ಯೆ ಪಿ.507, ಎರಡನೇ ಸಂಪರ್ಕದಲ್ಲಿದ್ದ ಈ ಮಹಿಳೆಗೆ ಸೋಂಕು ತಗುಲಿರುವುದು ದೃಢ ಪಟ್ಟಿದೆ.  P – 507 ಮಂಗಳೂರಿನ ಶಕ್ತಿನಗರದ 80 ವರ್ಷದ ವೃದ್ಧೆ.

ನಿಲ್ಲದ ಕೊರೋನಾ ಪಾಸಿಟಿವ್ : ಜಿಲ್ಲೆಗೆ ಕಂಟಕವಾದ ಫಸ್ಟ್ ನ್ಯೂರೋ ಆಸ್ಪತ್ರೆ

ಮಂಗಳೂರು ಹೊರವಲಯದ ಉಳ್ಳಾಲ ಬಳಿಯ ಸೋಮೇಶ್ವರ ಗ್ರಾಮದ ಪಿಲಾರ್‌ನ ಮಹಿಳೆ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು ಎನ್ನಲಾಗಿದ್ದು, ಇಂದು ಈ ಮಹಿಳಾ ರೋಗಿಗೆ ಕೊರೋನಾ ಪಾಸಿಟಿವ್ ದೃಢ ಪಟ್ಟಿದೆ.

ಸೋಮೇಶ್ವರ ಪರಿಸರದಲ್ಲಿ ಸೀಲ್ ಡೌನ್ ?

ಸೋಮೇಶ್ವರದ ಮಹಿಳೆಗೆ ಕೊರೋನಾಸೋಂಕು ದೃಢ ಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಕೋವಿಡ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಸೋಮೇಶ್ವರ ಗ್ರಾಮದ ಪಿಲಾರ್ ಪರಿಸರದಲ್ಲಿರುವ ಈ ಮಹಿಳೆಯ ಮನೆ ಪರಿಸರದಲ್ಲಿ ಸೀಲ್ ಡೌನ್ ಮಾಡುವ ಬಗ್ಗೆ ತಯಾರಿ ನಡೆಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

Comments are closed.