ಕರಾವಳಿ

ದ.ಕ.ಜಿಲ್ಲೆಯಲ್ಲಿ ಮತ್ತೆ ಮೂರು ಮಂದಿಗೆ ಕೊರೊನಾ ಪಾಸಿಟಿವ್ : ಫಸ್ಟ್ ನ್ಯೂರೋ ಆಸ್ಪತ್ರೆಯ ಹೊಡೆತಕ್ಕೆ ನಲುಗಿದ ಕರಾವಳಿ

Pinterest LinkedIn Tumblr

ಮಂಗಳೂರು,ಮೇ.೦9: ದ.ಕ.ಜಿಲ್ಲೆಯಲ್ಲಿ ಮತ್ತೆ ಮೂರು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಕು ಪೀಡಿತರ ಒಟ್ಟು ಸಂಖ್ಯೆ 31ಕೇರಿದೆ.

ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಮಧ್ಯಾಹ್ನದ ಬುಲೆಟಿನ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಮೂವರಿಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಬಂಟ್ವಾಳದಲ್ಲಿ ಮೃತಪಟ್ಟ 69 ವರ್ಷದ P578 ವೃದ್ದನ ಸಂಪರ್ಕದಿಂದಾಗಿ ಬಂಟ್ವಾಳದ ಕಂಟೈನ್ಮೆಂಟ್ ಝೋನ್ ಕಸಬಾ ಗ್ರಾಮದ ಒಂದೇ ಕುಟುಂಬದ ಮೂವರಲ್ಲಿ ಕೊರೊನಾ ಸೋಂಕು ತಗುಲಿದೆ.

ವೃದ್ದನಿಗೆ ಬಂಟ್ವಾಳದಲ್ಲಿ ಮೃತಪಟ್ಟ P-390 ಮಹಿಳೆಯಿಂದ ಸೋಂಕು ತಗುಲಿದ್ದು ವೃದ್ದನಿಗೆ ಪಾಸಿಟಿವ್ ಹಿನ್ನೆಲೆ ಆ ಮನೆಯ 8 ಜನರನ್ನು ಕ್ವಾರಂಟೈನ್ ಮಾಡಲಾಗಿದ್ದು, ಸದ್ಯ ಮೂವರಿಗೆ ಕೊರೊನಾ ಪಾಸಿಟಿವ್‌ ಆಗಿದೆ.

ಫಸ್ಟ್ ನ್ಯೂರೋ ಆಸ್ಪತ್ರೆಯ ಹೊಡೆತಕ್ಕೆ ನಲುಗಿದ ಕಡಲತಡಿ ಮಂಗಳೂರು:

ಮೇಲ್ನೋಟಕ್ಕೆ ಇವರೆಲ್ಲರಿಗೂ ಸೋಂಕು ಹರಡಲು ನಗರದ ಪಡೀಲನ ಫಸ್ಟ್ ನ್ಯೂರೋ ಆಸ್ಪತ್ರೆಯ ನಂಟು ಎದ್ದುಕಾಣುತ್ತದೆ. ಉ.ಕ. ಜಿಲ್ಲೆಯ ಏಳು ಮಂದಿ ಸೇರಿದಂತೆ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆ ಯ ಸಂಪರ್ಕ ಹೊಂದಿದ್ದ 17 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಮುಖ್ಯಂಶಗಳು :

ದಕ್ಷಿಣ ಕನ್ನಡ ಜಿಲ್ಲೆ ಮತ್ತೆ ಮೂರು ಮಂದಿಗೆ ಕೊರೋನಾ ಪಾಸಿಟಿವ್

ಒಂದೇ ಕುಟುಂಬದ ಮೂವರಿಗೆ ಕೊರೋನಾ ಸೋಂಕು ಪತ್ತೆ

ಇಬ್ಬರು ‌ಮಹಿಳೆಯರು ಮತ್ತು ಓರ್ವ ‌ಪುರುಷನಿಗೆ ಸೋಂಕು ದೃಢ

ಮೇ.1ರಂದು ಕೊರೋನ ಪತ್ತೆಯಾಗಿದ್ದ 69 ವರ್ಷದ P-578 ವೃದ್ದನಿಂದ ತಗುಲಿದ ಸೋಂಕು

ವೃದ್ದನ ಕುಟುಂಬದ ಮೂರು ಜನರಲ್ಲಿ ಸೋಂಕು ಪತ್ತೆ

ಬಂಟ್ವಾಳದಲ್ಲಿ ಮೃತಪಟ್ಟ P-390 ಮಹಿಳೆಯಿಂದ ವೃದ್ದನಿಗೆ ತಗುಲಿದ್ದ ಸೋಂಕು

ಬಂಟ್ವಾಳ ಕಸಬಾದ ಮೃತ ಮಹಿಳೆಯ ಸಂಬಂಧಿಕರು ಮತ್ತು ನೆರೆಮನೆಯವರಾಗಿರುವ ವೃದ್ದ

ವೃದ್ದನಿಗೆ ಪಾಸಿಟಿವ್ ಹಿನ್ನೆಲೆ ಆ ಮನೆಯ 8 ಜನರನ್ನು ಕ್ವಾರಂಟೈನ್ ಮಾಡಲಾಗಿದ್ದು, ಸದ್ಯ ಮೂವರಿಗೆ ಸೋಂಕು

ಮಂಗಳೂರಿನ ಫಸ್ಟ್ ನ್ಯೂರೋ ಸಂಪರ್ಕದಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 17ಕ್ಕೆ ಏರಿಕೆ

ಸದ್ಯ ದ‌.ಕ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 15 ಕ್ಕೆ ಏರಿಕೆ

ದ.ಕ ಜಿಲ್ಲೆಯಲ್ಲಿ ಈವರೆಗೆ ಪತ್ತೆಯಾದ ಪಾಸಿಟಿವ್ ಪ್ರಕರಣಗಳು 31

ದ.ಕ ಜಿಲ್ಲೆಯಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 03

ದ.ಕ ಜಿಲ್ಲೆಯಲ್ಲಿ ಈವರೆಗೆ ಡಿಸ್ಚಾರ್ಜ್ ಆದವರ ಸಂಖ್ಯೆ 13

Comments are closed.