ಕರಾವಳಿ

ಕ್ಯಾಂಟಿನೀನಾ ಅಲ್ಪ ಆದಾಯದಿಂದ ಅಶಕ್ತರಿಗೆ ಅನ್ನ ನೀಡುವ ಆಪತ್ಭಾಂದವ ಚಂದ್ರಹಾಸ ಗುರುಸ್ವಾಮಿ :ಮುಂಬೈಯ ದಾನಿಯೊಬ್ಬರ ಕಥೆ 

Pinterest LinkedIn Tumblr

ಮುಂಬೈ :.ಬೆಳಕಿನಿಂದ ಪ್ರಜ್ವಲಿಸುತ್ತಿದ್ದ ಮುಂಬಯಿ ಮಹಾನಗರ ಕತ್ತಲೆಯ ಅಂಧಕಾರದಲ್ಲಿ ಮುಳುಗಿದೆ, ಕಾರಣ ಕೋರೋಣ ಎಂಬ ರೋಗ. ಅದನ್ನು ಎದುರಿಸಿ ವಿಜಯ ಗಳಾಗಬೇಕು ಎನ್ನುವ ಕುಟುಂಬಗಳಿಗೆ ಆಸರೆಯಾಗಿರುವ ಮುಂಬಯಿಯ ಇನ್ನಂಜೆ ಚಂದ್ರಹಾಸ್ ಗುರುಸ್ವಾಮಿಯವರ ಸಹಾಯ ಹಸ್ತ ಬೆಳಕಿಗೆ ಬಂದಿದೆ ಅದನ್ನು ನಿಮ್ಮ ಮುಂದೆ ಇಟ್ಟಿದ್ದೇವೆ. ಓದುತ್ತ ಹೋಗಿ ನೀವು ಕೂಡ ನಿಮ್ಮಿಂದ ಆಸಕ್ತರ ಕಣ್ಣೀರು ಒರೆಸುವ ಕಾರ್ಯಕ್ಕೆ ಸಹಕಾರಿಗಳಾಗಿ!

ಕರ್ಣ ಹೃದಯಿ.. ಕರ್ಮಬೂಮಿಯಲಿ ದರ್ಮದೀವಿಗೆ ಹಚ್ಚಿದ ಧರ್ಮಾತ್ಮಾ.. ಆಪತ್ಕಾಲದಲ್ಲಿ ನೆರವಿಗೆ ಧಾವಿಸುವ ಕರುಣಾ ಮೂರ್ತಿ..ಶಿಷ್ಯರಿಗೆ ಸನ್ಮಾರ್ಗ ತೋರಿಸುವ ಪರಮ ಗುರು..!! ಹೌದು ಇವರೇ ” *ಚೈತನ್ಯ* *ಗುರು”ಬಿರುದಾಂಕಿತ ಇನ್ನಂಜೆ ಚಂದ್ರಹಾಸ *ಗುರುಸ್ವಾಮಿ!**ಸುಮಾರು 34 ವರ್ಷ ಗಳಿಂದ ಶಬರಿಮಲೆ ಯಾತ್ರೆಯನ್ನು ತುಂಬಾ ಕಟ್ಟು ನಿಟ್ಟಾಗಿ ಶ್ರದ್ದಾ ಭಕ್ತಿ ಯಿಂದ ಪೂರೈಸಿದ್ದಾರೆ.ಹಾಗೂ *7* ಬಾರಿ ಮುಂಬೈ ನಗರದಿಂದ ಪಾದಯಾತ್ರೆಯ ಮೂಲಕ 1830 ಕಿಲೋಮೀಟರ್ ಅಯ್ಯಪ್ಪ ಸ್ವಾಮಿಯ ನಾಮಸ್ಮರಣೆ ಯೊಂದಿಗೆ ಶಬರಿಮಲೆ ದರ್ಶನ ಮಾಡಿದ್ದಾರೆ.

ವಿಸ್ಮಯ ಎಂದರೆ 24 ನೆ ವರ್ಷದ ಮಾಲಾದಾರಣೆ ಮಾಡಿ ಶ್ರೀ ದೇವರ ದರ್ಶನಕ್ಕೆ ಕಾಲ್ನಡಿಗೆಯಲ್ಲಿ ಹೊರಟ ಸಮಯದಲ್ಲಿ ಕೊಲ್ಲಾಪುರದ ಮಾರ್ಗಮದ್ಯೆ ಕಪ್ಪು ಬಣ್ಣದ ನಾಯಿ(ಶ್ವಾನ) ವೊಂದು ಶಬರಿಮಲೆ ವರೆಗೂ ಹಿಂಬಾಲಿಸಿ ಬಂದಿದ್ದು ಅಚ್ಚರಿ ಅನ್ನಿಸಿದೆ.

ಪ್ರತಿವರ್ಷ ಸನ್ನಿಧಾನಕ್ಕೆ ತಾನು ಹೊರಟಾಗ ಬಹಳಷ್ಟು ಶಿಷ್ಯರನ್ನು ಒಟ್ಟಿಗೆ ಕೊಂಡೊಯ್ಯುವ ಪರಿಪಾಠವನ್ನು ಬೆಳೆಸಿಕೊಂಡವರು.. ಪಾದಯಾತ್ರೆ ವೇಳೆಯಲ್ಲೂ ಕೂಡ ಹತ್ತು-ಹದಿನೈದು ಶಿಷ್ಯರು ಇವರೊಂದಿಗೆ ಇರುತ್ತಿದ್ದರು.

ಅಯ್ಯಪ್ಪ ವೃತ ಧಾರಣೆಯ ಸಂದರ್ಭದಲ್ಲಿ ವ್ರತಾಚರಣೆಯ ಶಿಸ್ತನ್ನು ಬದುಕಿನಲ್ಲಿ ನಿಷ್ಠೆಯಿಂದ ಇರಿಸಿಕೊಂಡವರು. ನಿತ್ಯದ ಅನುಷ್ಠಾನ, ಕ್ರಮಬದ್ದ ಆಚರಣೆ ಶಿಷ್ಯ ವರ್ಗಕ್ಕೆ ಬಹಳ ಕಷ್ಟಕರವಾಗುತಿತ್ತು. ಆದರೂ ವ್ರತಾಚರಣೆ ಯಲ್ಲಿ ಇವರೆಂದು ರಾಜಿ ಮಾಡಿಕೊಂಡವರಲ್ಲ.. ತಾನು ಆರಾಧಿಸಿಕೊಂಡು ಬಂದಿರುವ ಅಯ್ಯಪ್ಪ ಸ್ವಾಮಿಯ ಬಂಗಾರ ಲೇಪಿತ ಮೂರ್ತಿ ಮುಂದೆ ನಿಂತು ಪ್ರಾರ್ಥಿಸಿಕೊಂಡು ನೀಡಿರುವ ಪ್ರಸಾದದಲ್ಲಿ ಅಪಾರ ಭಕ್ತರ ಕಷ್ಟ – ಕಾರ್ಪಣ್ಯ ದೂರವಾಗಿ ಅವರು ಬದುಕಿನಲ್ಲಿ ಯಶಸ್ಸನ್ನು ಕಂಡಿರುವ ಹಲವಾರು ಉದಾಹರಣೆಗಳಿವೆ….

ಚಂದ್ರಹಾಸ ಗುರುಸ್ವಾಮಿ :

1961 ರಲ್ಲೀ ಮೂಳೂರು ಬಿಕ್ರಿಗುತ್ತು ಸುಂದರ ಶೆಟ್ಟಿ ಮತ್ತು ಯಮುನಾ ಶೆಟ್ಟಿಯವರ ಆರು ಜನ ಮಕ್ಕಳಲ್ಲಿ ಮೂರನೆಯವರಾಗಿ ಜನಿಸಿದರು! ಉಡುಪಿ ಜಿಲ್ಲೆಯ ಕಟಪಾಡಿಯ ಇನ್ನಂಜೇ ಸಮೀಪದ ಶಂಕರಪುರ ಇವರ ಹುಟ್ಟೂರು.ಪ್ರಾರಂಭದ ಶಿಕ್ಷಣವನ್ನು ಇಲ್ಲೇ ಪೂರೈಸಿದರು. ಈ ನಡುವೆ ತಂದೆಯ ಅಕಾಲಿಕ ಮರಣದಿಂದ ಕಂಗೆಟ್ಟು ಮನೆಯ ಸಮಸ್ಯೆಗೆ ಹೆಗಲು ಕೊಡೂದಕ್ಕೆ ತನ್ನ 18ನೆ ವಯಸ್ಸಿನಲಿ ಮುಂಬೈಗೆ ಪ್ರಯಾಣ ಬೆಳೆಸಿದರು.!

ಭಾಷೆ ಬಾರದ ನಾಡಿನಲ್ಲಿ ಬಾರವಾದ ಬದುಕಿಗೊಂದು ಅರ್ಥ ಕಂಡುಕೊಳ್ಳಲು ದಿನ ರಾತ್ರಿ ಎನ್ನದೆ ಹೋಟೆಲು ಅಂಗಡಿಗಳಲ್ಲಿ ಕಾರ್ಮಿಕನಾಗಿ ದುಡಿಯತೊಡಗಿದರು. ಕಾಲಕ್ರಮೇಣ “ಅನ್ನಪೂರ್ಣೇಶ್ವರಿ “ಎನ್ನುವ ಹೆಸರಿನ ತನ್ನ ಸ್ವಂತ ಕ್ಯಾಂಟೀನ್ ನ್ನು ‘ ಬ್ಯಾಂಕ್ ಆಫ್ ಇಂಡಿಯಾ’ ದ ಒಳಗಡೆ ನಡೆಸತೊಡಗಿದರು..

‘ ಏನಾದರೂ ಆಗು ಮೊದಲು ನೀ ಮಾನವನಾಗು ‘ ಎನ್ನುವ ಕವೀವಾಣಿಯಂತೆ ಉದ್ಯಮದಿಂದ ತನಗೆ ಬರುತಿದ್ದ ಲಾಭದ ಹೆಚ್ಚಿನ ಪಾಲನ್ನು ನೊಂದವರಿಗೆ ಹಾಗೂ ಅಶಕ್ತರಿಗೆ ನೀಡತೊಡಗಿದರು.ಇವರ ಪರೋಪಕಾರಿ ಗುಣ ಎಲ್ಲೂ ಸದ್ದು ಮಾಡಲಿಲ್ಲ.ಅದನ್ನು ಅವರು ಅಪೇಕ್ಷೆ ಪಟ್ಟವರು ಅಲ್ಲ. ಲೌಕಿಕ ಬದುಕಿನ ಮೋಹಕ್ಕೆ ಒಳಗಾದವರಲ್ಲ.

ಅವಿವಾಹಿತ ರಾದ ಇವರು ಬ್ರಹ್ಮಚರ್ಯವನ್ನು ಪಾಲಿಸುದರ ಜೊತೆಗೆ ಶುದ್ಧ ಶಾಕಾಹಾರಿಯು ಹೌದು!ಬರಿಗಾಲಲ್ಲಿ ಪಾದರಕ್ಷೆ ಇಲ್ಲದೆ ನಡೆದಾಡುವ ಗುರುವರ್ಯ! ಈಗ ಕೋರೋನಾ ಎನ್ನುವ ಮಹಾಮಾರಿ ಮಾಯಾನಗರಿ ಯನ್ನೂ ಬೆಂಬಿಡದೆ ಕಾಡುತಿದೆ. ಲಾಕಡೌನ್ನ ನಿಂದ ಜನ ತತ್ತರಿಸಿ ಹೋಗಿದ್ದಾರೆ. ಒಂದೊತ್ತಿನ ಊಟಕ್ಕೂ ಆಕಾಶ ನೋಡೋ ಪರಿಸ್ಥಿತಿ ಎದುರಾಗಿದೆ.ಇಂತ ಸಂದರ್ಭದಲ್ಲಿ ಅನೇಕ ದಾನಿಗಳು ಜನಸೇವೆಗೆ ನಿಂತಿದ್ದಾರೆ.

ಅವರಲ್ಲಿ ಚಂದ್ರಹಾಸ ಗುರುಸ್ವಾಮಿ ಸಹ ಒಬ್ಬರು.ಕೈಯಲ್ಲಿರುದನ್ನೆಲ್ಲ ಕೈಲಾಗದವರಿಗೆ ನೀಡುತ್ತಿದ್ದಾರೆ. ಮುಂಬೈಯ ಮೂಲೆ ಮೂಲೆಗೂ ಹೋಗಿ ಸಹಾಯ ಹಸ್ತ ನೀಡುತ್ತಿದ್ದಾರೆ.ಕುಬೇರಾರೇನಿಸಿ ಕೊಂಡ ವರೆಲ್ಲ ಕುಬ್ಜರಾಗಿ ಮನೆಯಲ್ಲಿ ಕುಳಿತಿರುವಾಗ,ಚಿಕ್ಕ ಕ್ಯಾಂಟೀನ್ ನಿಂದಾ ಬರುವ ಸ್ವಲ್ಪ ಆದಾಯ ವನ್ನೆ ದೇವರ ಪ್ರಸಾದ ವೆಂಬಂತೆ ಹಸಿದವರಿಗೆ ಹಂಚುತ್ತಿದ್ದಾರೆ.ನಿಜವಾದ ಅನ್ನದಾತ ಅನ್ನಿಸಿಕೊಂಡ ಶ್ರೀ ಚಂದ್ರಹಾಸ ಗುರುಸ್ವಾಮಿ ಪ್ರತಿನಿತ್ಯ ಸುಮಾರು 10 ಕ್ಕೂ ಮಿಕ್ಕಿ ಕುಟುಂಬಗಳಿಗೆ ಆಹಾರ – ಧಾನ್ಯಗಳನ್ನು ಒದಗಿಸುತ್ತಿದ್ದಾರೆ.

ಪ್ರತಿದಿನ 8000 ದಷ್ಟು ದಾನವನ್ನು ಬಡಕುಟುಂಬದವರ ಖಾತೆಗೆ ಹಸ್ತಾಂತರಿಸುತಿದ್ದಾರೆ.ಕೆಲವು ಕುಟುಂಬಗಳಿಗೆ ನೇರವಾಗಿ ಇವರೇ ದಿನನಿತ್ಯದ ಸಾಮಗ್ರಿಗಳನ್ನು ನೀಡಿ ಬರುತ್ತಿದ್ದಾರೆ .ಯಾವುದೇ ಪ್ರಚಾರವಿಲ್ಲದೆ ಸದ್ದುಗದ್ದಲವಿಲ್ಲದೆ ತಾನು ಸಂಪಾದಿಸಿದ ಹಣವನ್ನು ದೀನರ ಸಹಾಯಕ್ಕೆ ಹಂಚುತ್ತಿದ್ದಾರೆ…

ಜನ್ಮ ಬೂಮಿಯ ಪ್ರೀತಿಗೆ ಪ್ರತೀಕವೆಂಬಂತೆ ಶ್ರೀಯುತರು ಇನ್ನಾಂಜೆ ಶಾಲೆಯ ಮಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆ,ಶಂಕರಪುರ ದಲ್ಲಿ ಗ್ರಾಮದ ದೇವರಾದ ವಿಷ್ಣುಮೂರ್ತಿ ದೇವಸ್ತಾನಕ್ಕೆ ಸ್ವಾಗತ ಗೋಪುರ ನಿರ್ಮಾಣ ಮಾಡಿ ಕೊಟ್ಟಿದ್ದಾರೆ.ಬಡತನದಿಂದಾಗಿ ವಸತಿ ಇಲ್ಲದವರಿಗೆ ಮನೆ,ಬಡ ಹೆಣ್ಣುಮಕ್ಕಳ ಮದುವೆ ಹಾಗೂ ಕ್ಯಾನ್ಸರ್ ಹೃದಯ ರೋಗ ಪೀಡಿತರಿಗೆ ಚಂದ್ರಹಾಸ ಗುರುಸ್ವಾಮಿ ಯವರಾ ಸಹಾಯ ಸಂದಿದೆ.

“ಉಳ್ಳವರು ಶಿವಾಲಯ ಮಾಡುವರು..ನಾನೇನು ಮಾಡಲಿ ಬಡವನಯ್ಯ..”ಅನ್ನುವ ವಚನದಂತೆ ದೇವರು ಕೊಟ್ಟಿರುದನ್ನು ,ಸಮಾಜದ ನಡುವೆ ದಿಕ್ಕು ದೆಸೆ ಇಲ್ಲದವರಿಗೆ ಕೊಟ್ಟು,ನೊಂದವರ ಬಾಳಿಗೆ ನಂದಾದೀಪ ವಾಗೀ,ಅವರೆಲ್ಲರಿಗೂ ದೊಡ್ಡಣ್ಣ ನಾಗಿ ಸಾರ್ಥಕ ಜೀವನ ಸಾಗಿಸುತ್ತಿದ್ದಾರೆ..

ಬೆಳಿಗ್ಗೆ 5 ಗಂಟೆಯಿಂದ ಸಂಜೆ 5 ಗಂಟೆವರೆಗೆ ದುಡಿದು ಸಂಪಾದಿಸಿದ ಸಂಪಾದನೆ ದೀನ ದುರ್ಬಲ ವರ್ಗದ ವರ ಹಸಿವನ್ನು ನೀಗಿಸುತಿದೆ ಎಂದು ಸಂತೋಷದಿಂದ ಹೇಳುತ್ತಾರೆ.ಕೇವಲ ಪೂಜೆ ಭಜನೆ ಸತ್ಸಂಗಗಳು ಮಾಡಿದರೆ ಸಾಲದು ಈ ಕಷ್ಟಕರ ಸಂದರ್ಭದಲ್ಲಿ ಕುಟುಂಬಗಳ ಕಣ್ಣೀರು ಒರೆಸುವ ಕೆಲಸ ಆಗಬೇಕು.

ತನ್ನ ಮನೆಯವರು, ಸಂಬಂಧಿಕರು , ಕುಟುಂಬಿಕರ ಮೋಹದ ಬಲೆಗೆ ಸಿಕ್ಕಿ ಕೊಳ್ಳದ ಇವರು ದರ್ಮ ಜಾತಿ ಭಾಷೆಗಳ ಹಂಗಿಗೆ ಒಳಪಡದೆ ಸಾಮಾನ್ಯರ ಹಸಿವನ್ನು ನೀಗಿಸಲು ಸದಾ ತಾನು ಉತ್ಸಾಹಭರಿತರಾಗಿ ಸೇವಾನಿರತರಾಗಿರುತ್ತಾರೆ. ತಾನು ಮಾಡುತ್ತಿರುವ ಜನಾಕಾರ್ಯದಲ್ಲಿ ಎಂದು ತನಗೆ ಪ್ರಚಾರ ಪ್ರಶಂಸೆ ಬೇಡ.ನನ್ನ ಸೇವಾಕಾರ್ಯಗಳಿಗೆ ಜಗತ್ತನ್ನು ರಕ್ಷಿಸುವ ಶಬರಿ ಗಿರಿವಾಸನ ಆಶೀರ್ವಾದ ಇದ್ದರೆ ಸಾಕು ಎನ್ನುತ್ತಾರೆ.

ವಿಶ್ವಕ್ಕೆ ಬಂದಿರುವ ಈ ಮಹಾಮಾರಿ ದೂರವಾಗಲಿ ಪ್ರತಿ ಮನುಷ್ಯನಲ್ಲೂ ದುರ್ಗುಣ ಮರೆಯಾಗಿ ಸದ್ಗುಣ ರಕ್ತಗತ ವಾಗಲಿ.. ಭಕ್ತಿ ಇನ್ನಷ್ಟು ಹೆಚ್ಚಾಗಲಿ.. ಧರ್ಮಕಾರ್ಯಗಳು ಹೆಚ್ಚೆಚ್ಚು ನಡೆಯಲಿ..ಎಂದು ಸದಾ ಪ್ರಾರ್ಥಿಸಿ ಕೊಳ್ಳುತ್ತಿರುತ್ತಾರೆ..!!

ಇಂತವರನ್ನು ನಡೆದಾಡುವ ದೇವರೆಂದೇ ಕರೆದರೂ ಅತಿಶಯೋಕ್ತಿ ಆಗಲ್ಲ..ನಿಮ್ಮಂತವರ ನಡುವೆ ನಾವಿರೋದೆ ನಮ್ಮ ಸುಕೃತ..

ನಿಮ್ಮ ಈ ಸೇವಾ ಕೈಂಕರ್ಯ ಹೀಗೆಯೇ ನಿರಂತರ ಸಾಗುತಿರಲಿ..ಅದಕ್ಕಾಗಿ ಕಲಿಯುಗ ವರದ ,ಅನಾಥ ಬಂದು ಶ್ರೀ ಅಯ್ಯಪ್ಪ ಸ್ವಾಮಿ ಅನವರತ ಅನುಗ್ರಹಿಸುತಿರಲಿ.

ಬರಹ: ಉದಯ್ ಪೂಜಾರಿ ಎಂ
(ಮಲಾಡ್ ಮುಂಬೈ)
ನಿರೂಪಣೆ :ದಿನೇಶ್ ಕುಲಾಲ್
(ಮುಂಬೈ )

Comments are closed.