ಕರಾವಳಿ

ಮಾಧ್ಯಮ ಪ್ರತಿನಿಧಿಗಳಿಗೆ ಕೋವಿಡ್-19 ತಪಾಸಣೆ : 191 ಮಂದಿ ಪತ್ರಕರ್ತರು ಭಾಗಿ

Pinterest LinkedIn Tumblr

ಮಂಗಳೂರು : ಮಾಧ್ಯಮ ಪ್ರತಿನಿಧಿಗಳಿಗೆ ಕೋವಿಡ್-19 ಸಂಬಂಧಿಸಿದಂತೆ ಆರೋಗ್ಯ ತಪಾಸಣೆ ಶಿಬಿರವನ್ನು ಏಪ್ರಿಲ್ 29 ರಂದು ಹಾಗೂ 3 0ರಂದು ಮಂಗಳೂರು ವಾರ್ತಾ ಇಲಾಖೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಪತ್ರಕರ್ತರ ಕೋವಿಡ್ ತಪಾಸಣೆ ಮುಕ್ತಾಯಗೊಂಡ ಬಳಿಕ ಏಪ್ರಿಲ್ 29 ರಂದು 35 ಮಂದಿ ಹಾಗೂ ಏಪ್ರಿಲ್ 30 ರಂದು 78 ಮಂದಿ, ಒಟ್ಟು 113 ಮಂದಿ ಹಾಜರಾಗಿದ್ದರು. ಇವರೆಲ್ಲರ ಆರೋಗ್ಯ ತಪಾಸಣೆಯ ಫಲಿತಾಂಶ ಶೀಘ್ರದಲ್ಲೇ ಬರಲಿದೆ ಎಂದು ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ ಅವರು ತಿಳಿಸಿದ್ದಾರೆ.

ಆರೋಗ್ಯ ತಪಾಸಣೆ ಶಿಬಿರದಲ್ಲಿ ಪಾಲ್ಗೊಳ್ಳುವ ಪತ್ರಕರ್ತರಿಗೆ ಕೆಲವೊಂದು ನಿಯಮಗಳನ್ನು ರೂಪಿಸಲಾಗಿತ್ತು.

ಸೂಚನೆಗಳು:

1. ತಪಾಸಣೆಗೆ ಆಗಮಿಸುವ ಎಲ್ಲರೂ ಕಡ್ಡಾಯವಾಗಿ ತಮ್ಮ‌ ಸಂಸ್ಥೆಯ ಗುರುತಿನ ಚೀಟಿ ಹೊಂದಿರಬೇಕು.
2. ಪತ್ರಕರ್ತರಿಗೆ ಮಾತ್ರ ತಪಾಸಣೆ ಮಾಡಲಾಗುವುದು. ಅವರ ಕುಟುಂಬ ಸದಸ್ಯರಿಗೆ ಅವಕಾಶ ಇಲ್ಲ.
3. ತಪಾಸಣೆ ಸಂಪೂರ್ಣವಾಗಿ ಆರೋಗ್ಯ ಇಲಾಖೆಯ ಶಿಷ್ಟಾಚಾರದಂತೆ ನಡೆಯಲಿದ್ದು, ಆ ಸಂದರ್ಭದಲ್ಲಿ ನೀಡಲಾಗುವ ಸಲಹೆ- ಸೂಚನೆಗಳನ್ನು ಪಾಲಿಸಬೇಕು.
4. ಎಲ್ಲರೂ ಮಾಸ್ಕ್‌‌ ಧರಿಸಿ‌ ಬರಬೇಕು.‌ ಸ್ಥಳದಲ್ಲಿ ಸಾಮಾಜಿಕ ಅಂತರ ಕಾಪಾಡಬೇಕು.

_ಜಿಲ್ಲಾ ಆರೋಗ್ಯಾಧಿಕಾರಿಗಳು
_ಜಿಲ್ಲಾ ವಾರ್ತಾಧಿಕಾರಿಗಳು

Comments are closed.