ಕರಾವಳಿ

ದೈವಜ್ಞ ಬ್ರಾಹ್ಮಣ ಸಮಾಜದ ಅವಹೇಳನೆ : ಎಮ್‌ಎಲ್‌ಸಿ ವಿರುದ್ಧ ಕ್ರಮಕ್ಕೆ ಆಗ್ರಹ

Pinterest LinkedIn Tumblr

ಮಂಗಳೂರು : ರಾಜ್ಯ ಬಿಜೆಪಿ ಉಪಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಕೆ.ಪಿ.ನಂಜುಂಡಿ ಅವರು ಸಾಮಾಜಿಕ ಜಾಲತಾಣ ಫೇಸ್‌ಬುಕ್ ಲೈವ್‌ನಲ್ಲಿ ದೈವಜ್ಞ ಬ್ರಾಹ್ಮಣ ಸಮಾಜದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಅವರನ್ನು ಆ ಸ್ಥಾನದಿಂದ ತೆರವುಗೊಳಿಸುವಂತೆ ಆಗ್ರಹಿಸಿ ಮಂಗಳೂರು ದೈವಜ್ಞ ಬ್ರಾಹ್ಮಣ ಸಂಘದಿಂದ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಮನವಿ ಸಲ್ಲಿಸಲಾಯಿತು.

ಹಿಂದುಳಿದ ವರ್ಗ 2ಎ ಯಲ್ಲಿ ಸ್ಥಾನ ಪಡೆದಿರುವ ದೈವಜ್ಞ ಬ್ರಾಹ್ಮಣರು ವಿಶ್ವಕರ್ಮ ಸಮಾಜದ ಮುದ್ದೆಯನ್ನು ಕಿತ್ತು ತಿನ್ನುತ್ತಿದ್ದಾರೆ. ಅವರನ್ನು ವಿಶ್ವಕರ್ಮ ಅಭಿವೃದ್ಧಿ ನಿಗಮ ಮಂಡಳಿಯಿಂದ ಹೊರ ಹಾಕಬೇಕು ಎಂದು ಹೇಳಿರುವುದಲ್ಲದೆ, ಸಮಾಜದ ಸ್ವಾಮೀಜಿಯವರನ್ನು ಏಕವಚನದಲ್ಲಿ ಸಂಬೋಧಿಸಿ ದ್ದಾರೆ.

ಚಿನ್ನ ಬೆಳ್ಳಿ ಕೆಲಸಗಾರರು ಎದುರಿಸುತ್ತಿರುವ ಸಮಸ್ಯೆ ವಿರುದ್ಧ ಸ್ವರ್ಣೋಧ್ಯಮ ಕುಲಕಸುಬಾಗಿರುವ ಒಟ್ಟಾಗಿ ಹೋರಾಡುತ್ತಿರುವಾಗ ಜಾತಿಗಳ ಮಧ್ಯೆ ವಿಷ ಬೀಜವನ್ನು ಬಿತ್ತುವ ಪ್ರಯತ್ನ ನಂಜುಂಡಿ ಅವರಿಂದ ನಡೆದಿದೆ ಎಂದು ದೈವಜ್ಞ ಬ್ರಾಹ್ಮಣ ಸಂಘ ಆರೋಪಿಸಿದೆ.

ಅವರಿಗೆ ನೀಡಿರುವ ಸ್ಥಾನಮಾನಗಳಿಂದ ಅವರನ್ನು ವಜಾಗೊಳಿಸಬೇಕು ಎಂದು ಸಂಘದ ಅಧ್ಯಕ್ಷ ಸುಧಾಕರ ಶೇಟ್ ಮತ್ತು ಪದಾಧಿಕಾರಿ ರೂಪೇಶ್ ಶೇಟ್ ಅವರು ಸಂಸದರಿಗೆ ಮನವಿ ಸಲ್ಲಿಸಿದರು.

ಸಂಸದರಿಗೆ ಸಲ್ಲಿಸಿರುವ ಮನವಿ ಪತ್ರ:

ಶ್ರೀ ನಳಿನ್ ಕುಮಾರ್ ಕಟೀಲ್,
ಬಿ.ಜೆ.ಪಿ. ರಾಜ್ಯಾಧ್ಯಕ್ಷರು, ಕರ್ನಾಟಕ
ಮಾನ್ಯ ಸಂಸದರು, ದ.ಕ. ಲೋಕಸಭಾ ಕ್ಷೇತ್ರ.
ಮಂಗಳೂರು.

ವಿಷಯ; ಮಾನ್ಯ ವಿಧಾನ ಪರಿಷತ್ ಸದಸ್ಯರು ಹಾಗೂ ಬಿ.ಜೆ.ಪಿ. ಯ ರಾಜ್ಯ ಉಪಾಧ್ಯಕ್ಷರೂ ಆಗಿರುವ *ಶ್ರೀ ಕೆ.ಪಿ. ನಂಜುಂಡಿಯವರು ದೈವಜ್ಞ ಬ್ರಾಹ್ಮಣ ಸಮಾಜದ ಬಗ್ಗೆ ಬಹಳ ಹೀನಾಯವಾಗಿ ಮಾತನಾಡಿರುವ ಬಗ್ಗೆ,

ಮಾನ್ಯರೇ,
ತಾರೀಖು 25-04-2020 ರಂದು ಮಾನ್ಯ ವಿಧಾನ ಪರಿಷತ್ ಸದಸ್ಯರು ಶ್ರೀ ಕೆ.ಪಿ. ನಂಜುಂಡಿ ಅವರು ಫೇಸ್ ಬುಕ್ ಲೈವ್ ನಲ್ಲಿ ದೈವಜ್ಞ ಬ್ರಾಹ್ಮಣರ ಬಗ್ಗೆ ಹೀನಾಯವಾಗಿ ಮಾತನಾಡುತ್ತಾ
?ವೃತ್ತಿ ಆಧಾರಿತವಾಗಿ ನಿರ್ಮಾಣಗೊಂಡು ಹಾಗೂ 41 ಜಾತಿ ಪಂಗಡಗಳನ್ನೊಳಗೊಂಡ “ವಿಶ್ವಕರ್ಮ ಅಭಿವೃದ್ಧಿ ನಿಗಮ ಮಂಡಳಿ”ಯಿಂದ ದೈವಜ್ಞ ಬ್ರಾಹ್ಮಣ ಸಮಾಜವನ್ನು ಹೊರಗೆ ಹಾಕಬೇಕು.
?ಹಿಂದುಳಿದ ವರ್ಗ 2A ಸ್ಥಾನವನ್ನು ಪಡೆದಿರುವ ದೈವಜ್ಞ ಬ್ರಾಹ್ಮಣರು ವಿಶ್ವಕರ್ಮರ ಪಾಲಿನ ಮುದ್ದೆಯನ್ನು ಕಿತ್ತು ತಿನ್ನುತ್ತಿದ್ದಾರೆ ಎಂದು ನಮ್ಮ ಸಮಾಜದ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ.
?ಸಮಾಜದ ಗುರುಗಳನ್ನು, ಸ್ವಾಮೀಜಿಯವರನ್ನು ಏಕವಚನದಲ್ಲಿ ಸಂಭೋಧಿಸುತ್ತಾ ದುಡ್ಡುಮಾಡಿಕೊಂಡವರು ಎಂದು ಹೀಯಾಳಿಸಿದ್ದಾರೆ.
? ನಮ್ಮ ಸಮಾಜದ ಸ್ವಾಮೀಜಿಯವರಾದ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರಿ ಭಾರತೀ ಮಹಾ ಸ್ವಾಮೀಜಿಯವರಿಗೆ (ಕರ್ಕಿ ಮಠ) ಸವಾಲನ್ನೂ ಹಾಕಿದ್ದಾರೆ.
?ದೈವಜ್ಞರಲ್ಲಿ 90 ಉಪಜಾತಿಗಳಿವೆ ಎಂದು ಸುಳ್ಳು ಹೇಳಿರುತ್ತಾರೆ.
?ಅಸಲಿಗೆ ದೈವಜ್ಞರಲ್ಲಿ ಯಾವುದೇ ಉಪಜಾತಿಗಳು ಅಂತ ಇರುವುದಿಲ್ಲ.
?ಆಯಾ ಊರನ್ನು ಸೂಚಿಸುವ ನಮ್ಮ ಸರ್ ನೇಮ್ ಅನ್ನು ಅವರು ಉಪಜಾತಿಗಳು ಎಂದು ಸುಳ್ಳು ಹೇಳಿದ್ದಾರೆ.
?ಅವರ ಸಮಾಜದ ಬಡತನಕ್ಕೆ ದೈವಜ್ಞರೇ ಕಾರಣ ಎಂದರು ಆಷ್ಟೇ ಅಲ್ಲದೇ ದೈವಜ್ಞರು ಬೇಕಾದರೆ ಹೊರಗೆ ಹೋಗಿ ಬೇರೇ ದಾರಿ ನೋಡಿಕೊಳ್ಳಲಿ ಎಂದು ಮೂದಲಿಸಿದ್ದಾರೆ.
?ಗೌಡ ಸಾರಸ್ವತ ಬ್ರಾಹ್ಮಣ (GSB) ಸಮುದಾಯದವರೊಡನೆ ಈ ದೈವಜ್ಞರು ಮುದ್ರೆ ಧಾರಣೆಗಾಗಿ ಜಗಳ ಮಾಡಿಕೊಂಡವರು ಎಂದು ಅಪಮಾನ ಮಾಡಿದ್ದಾರೆ ಎಂದು ಸುಳ್ಳು ಹೇಳಿ ಎಲ್ಲಿಂದಲೋ ವಲಸೆಬಂದ ಈ ದೈವಜ್ಞರಿಗೆ ಅವರದ್ದೇ ಅಂತ ಮಠ ಇಲ್ಲ ಹಾಗೂ ಸ್ವರ್ಣವಲ್ಲಿ ಮಠಕ್ಕೆ ನಡೆದುಕೊಳ್ಳುವವರು ಎಂದು ಹೀಯಾಳಿಸಿದ್ದಾರೆ.
?ಪ್ರಜಾಪ್ರಭುತ್ವದಲ್ಲಿ ಯಾರೇ ಬಂದರೂ ಜಾತೀ ರಾಜಕಾರಣ ಮಾಡಿಕೊಂಡೇ ಮುಂದುವರಿಯ ಬೇಕಾಗುತ್ತದೆ ಎಂದು ತಮ್ಮ ಅಪ್ರಭುದ್ದತೆಯನ್ನು ಮೆರೆದಿದ್ದಾರೆ.
?ದೈವಜ್ಞ ಸಮಾಜವನ್ನು ಹೊರಗೆ ತಳ್ಳಲು ನಮ್ಮ ವಿರುದ್ದ ಪ್ರತಿಭಟನೆ ಮಾಡಬೇಕು ಎಂದು ಹೇಳುವ ಮೂಲಕ ಇಲ್ಲಿಯವರೆಗೆ ಒಟ್ಟಿಗೆ ಒಂದೇ ವೃತ್ತಿಯನ್ನು ಮಾಡುತ್ತಾ ಪರಸ್ಪರ ಅನ್ಯೋನ್ಯ ಭಾವದಲ್ಲಿರುವ ದೈವಜ್ಞ ಬ್ರಾಹ್ಮಣ ಮತ್ತು ವಿಶ್ವಕರ್ಮ ಬ್ರಾಹ್ಮಣ ಸಮಾಜವನ್ನು ಎತ್ತಿ ಕಟ್ಟುವ ನೀಚ ಕಾರ್ಯಕ್ಕೆ ಇಳಿದಿರುವುದು ಅತ್ಯಂತ ಖೇದಕರ ವಾಗಿದೆ.
?ಈಗಾಗಲೇ ಅತೀವ ಸಂಕಷ್ಟವನ್ನು ಎದುರಿಸುತ್ತಿರುವ ಚಿನ್ನ-ಬೆಳ್ಳಿ ಕೆಲಸಗಾರರ ಅಭಿವೃದ್ದಿಗೆ ನಿಗಮ-ಮಂಡಳಿ ರಚಿಸುವ ಯತ್ನಕ್ಕೆ ನಾವೆಲ್ಲಾ ಸ್ವರ್ಣೋದ್ಯಮದ ಕುಲಕಸುಬು ಮಾಡಿಕೊಂಡಿರುವ ಎಲ್ಲಾ ಜಾತಿಯ ಬಂಧುಗಳು ಒಟ್ಟಾಗಿ ಶ್ರಮಿಸುತ್ತಿರುವ ಈ ಸಂದರ್ಭದಲ್ಲಿ ನಮ್ಮ ಮಧ್ಯೆ ಜಾತಿಯ ವಿಷಬೀಜವನ್ನು ಬಿತ್ತುತ್ತಿರುವು ವಿಷಾದವನ್ನು ಉಂಟುಮಾಡಿದೆ.
?ನಿಮಗೇ ತಿಳಿದಿರುವ ಹಾಗೆ ದೈವಜ್ಞ ಬ್ರಾಹ್ಮಣ ಸಮಾಜದವರು ಹಿಂದಿನಿಂದಲೂ ನೂರಕ್ಕೆ ನೂರು BJP ಯ ಜತೆಗೆ ಗುರುತಿಸಿಕೊಂಡವರು.
?ರಾಷ್ಟ್ರೀಯವಾದಿ ಪಕ್ಷವಾಗಿರುವ ಬಿ.ಜೆ.ಪಿ. ಯ ರಾಜ್ಯ ಉಪಾಧ್ಯಕ್ಷರಾದ ಶ್ರೀ ಕೆ.ಪಿ. ನಂಜುಡಿಯವರು ಈ ರೀತಿಯಾಗಿ ಜಾತೀಯವಾಗಿ ನಮ್ಮನ್ನು ಅವಹೇಳನ ಮಾಡಿರುವುದು ನಮ್ಮ ಮನಸ್ಸಿಗೆ ತುಂಬಾ ನೋವನ್ನು ಮತ್ತು ಆಘಾತ ಉಂಟುಮಾಡಿದೆ.
?ಆದ್ದರಿಂದ ಹಿರಿಯರಾದ ತಾವುಗಳು ನಮ್ಮ ಬಾಂಧವರ ಬಗ್ಗೆ ಕೃಪೆತೋರಿ, ಈ ಕುತ್ಸಿತ ಮನಸ್ಸಿನ ಶ್ರಿ ಕೆ.ಪಿ.ನಂಜುಡಿಯವರನ್ನು ತರಾಟೆಗೆ ತೆಗೆದುಕೊಳ್ಳಬೇಕೆಂದು ಹಾಗೂ ಈ ಉನ್ನತ ಸ್ಥಾನವನ್ನಲಂಕರಿಸುವ ಅರ್ಹತೆಯನ್ನು ಹೊಂದಿರದ ಇವರನ್ನು ಇವರ ಸ್ಥಾನದಿಂದ ತೆರವುಗೊಳಿಸಿ ಒಬ್ಬ ಆದರ್ಶಯುತ ವ್ಯಕ್ತಿಯನ್ನು ನೇಮಿಸಿದರೆ ಒಂದು ಸ್ವಸ್ಥ ಸಮಾಜ ನಿರ್ಮಾಣ ಗೊಳ್ಳುವುದರಲ್ಲಿ ಅನುಮಾನವಿಲ್ಲ.

ಧನ್ಯವಾದಗಳು

ಇತೀ,

ಅಧ್ಯಕ್ಷರು,
ದೈವಜ್ಞ ಬ್ರಾಹ್ಮಣರ ಸಂಘ (ರಿ.) ಮಂಗಳೂರು.

Comments are closed.