ಕರಾವಳಿ

ದ.ಕ. ಜಿಲ್ಲೆಯಲ್ಲಿ ಕೊರೋನಾಗೆ ಎರಡನೇ ಬಲಿ : ಬಂಟ್ವಾಳದ ಮೃತ ಮಹಿಳೆಯ ಅತ್ತೆಯೂ ಸಾವು

Pinterest LinkedIn Tumblr

ಮಂಗಳೂರು, ಎಪ್ರಿಲ್. 23 : ದ.ಕ. ಜಿಲ್ಲೆಯಲ್ಲಿ ಮಹಾಮಾರಿ ಕೊರೋನ ವೈರಸ್ ಗೆ ಮತ್ತೊಬ್ಬರು ಬಲಿಯಾಗಿದ್ದು, ಮೃತರನ್ನು ಎ. 19ರಂದು ಕೊರೋನ ವೈರಸ್ ಗೆ ಬಲಿಯಾದ ಬಂಟ್ವಾಳದ ಮಹಿಳೆಯ (ಅತ್ತೆ) ಸಂಬಂಧಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಬಂಟ್ವಾಳದ ಸುಮಾರು 75 ವರ್ಷ ವಯಸ್ಸಿನ ಮಹಿಳೆಯೋರ್ವರಲ್ಲಿ ಕೊರೋನ ವೈರಸ್ ಸೋಂಕು ಇಂದು ಪತ್ತೆಯಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಬಂಟ್ವಾಳದಲ್ಲಿ ಈ ಹಿಂದೆ ಮೃತಪಟ್ಟಿದ್ದ ಮಹಿಳೆಯ ಅತ್ತೆಯಲ್ಲಿ ಗುರುವಾರದಂದು ಸೋಂಕು ದೃಢಪಟ್ಟಿತ್ತು. ಅದರಂತೆ ವೆನ್ಲಾಕ್ ಅಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ 75ರ ಹರೆಯದ ಮಹಿಳೆಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆಗೆ ಸ್ಪಂಧಿಸದೆ ಸಂಜೆ ವೇಳೆ ಮೃತಪಟ್ಟಿದ್ದಾರೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಅಘಾತಕಾರಿ ಸಂಘತಿಯೆಂದರೆ ಕೊರೊನಾದಿಂದ ಜಿಲ್ಲೆಯಲ್ಲಿ ಮೃತಪಟ್ಟಿರುವುದು ಬಂಟ್ವಾಳದ ಒಂದೇ ಕುಟುಂಬದವರು. ಸೋಮವಾರದಂದು ಸೊಸೆ ಮೃತಪಟ್ಟಿದ್ದು, ಗುರುವಾರದಂದು ಅತ್ತೆ ಮೃತಪಟ್ಟಿದ್ದಾರೆ.

ಸುಮಾರು 75 ವರ್ಷ ವಯಸ್ಸಿನ ಈ ಮಹಿಳೆ ಪಾರ್ಶ್ವವಾಯುಗೆ ಸಂಬಂಧಿಸಿದಂತೆ ಎಪ್ರಿಲ್‌ 18ರಿಂದ ಪಡೀಲ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದ್ದು, ಇವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನಲೆ ಹಾಗೂ ಇವರ ಸೊಸೆ ಕೊರೊನಾದಿಂದ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಎ. 22ರಂದು ಖಾಸಗಿ ಆಸ್ಪತ್ರೆಯಿಂದ ಮಂಗಳೂರಿನ ವೆನ್ಲಾಕ್ ಕೊವೀಡ್ ಆಸ್ಪತ್ರೆಗೆ ದಾಖಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಪಡೆಯುತ್ತಿದ್ದರು ಎಂದು ತಿಳಿದು ಬಂದಿದೆ.

ಅವರ ಗಂಟಲ ದ್ರವ ಪರೀಕ್ಷೆಗೆ ರವನಿಸಲಾಗಿತ್ತು. ಏಪ್ರಿಲ್ 23ರ ಗುರುವಾರದಂದು ಅವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಬಗ್ಗೆ ಮಧ್ಯಹ್ನ ಆರೋಗ್ಯ ಇಲಾಖೆಯ ಕೈ ಸೇರಿತ್ತು, ಆದರೆ, ಇದೀಗ ಸಂಜೆ ಅವರು ಮೃತಪಟ್ಟಿರುವ ವರದಿ ಲಭ್ಯವಾಗಿದೆ. ಆ ಮೂಲಕ ಬಂಟ್ವಾಳದ ಒಂದೇ ಕುಟುಂಬದ ಇಬ್ಬರನ್ನು ಅತ್ತೆ ಹಾಗೂ ಸೊಸೆಯನ್ನು ಕೊರೊನ ಬಲಿ ಪಡೆದುಕೊಂಡಿದೆ.

Comments are closed.