ಕರಾವಳಿ

ಗ್ರಾಮ ಪಂಚಾಯತ್ ಅವಧಿ ಮುಂದೂಡಿಕೆಗೆ ಮುಖ್ಯಮಂತ್ರಿಗಳಿಗೆ ತಾ.ಪಂ. ಅಧ್ಯಕ್ಷರ ಮನವಿ

Pinterest LinkedIn Tumblr

ಮಂಗಳೂರು ಏಪ್ರಿಲ್ 22 : ಮಹಾಮಾರಿ ಕೊರೋನಾದಿಂದ ತತ್ತರಿಸಿದವರನ್ನು ಜನಜಾಗೃತಿ ಮೂಡಿಸುವ ಸಲುವಾಗಿ 6 ತಿಂಗಳು ಗ್ರಾಮ ಪಂಚಾಯತ್ ಅವಧಿಯನ್ನು ಮುಂದೂಡಬೇಕಾಗಿ ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು ಅವರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಕರ್ನಾಟಕ ರಾಜ್ಯದಾದ್ಯಂತ ಗ್ರಾಮ ಪಂಚಾಯತುಗಳ ಅವಧಿ ಮುಂದಿನ ತಿಂಗಳು ಅಂತ್ಯಗೊಳ್ಳಲಿದೆ. ಆದರೆ, ಕೊರೋನ ಸೋಂಕುಗಳಿಂದ ದೇಶದ ಜನತೆ ತತ್ತರಿಸಿ ಹೋಗಿದ್ದಾರೆ.

ಈ ನಿಟ್ಟಿನಲ್ಲಿ ಈಗಾಗಲೇ ಕರ್ನಾಟಕ ರಾಜ್ಯದ ಎಲ್ಲಾ ಗ್ರಾಮ ಪಂಚಾಯತುಗಳಲ್ಲಿ ಪಂಚಾಯತು ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಮ ಪಂಚಾಯತು ಅಭಿವೃದ್ಧಿ ಅಧಿಕಾರಿ, ಆರೋಗ್ಯ ಇಲಾಖೆಯ ಎ.ಎನ್.ಎಂ., ಆಶಾ ಕಾರ್ಯಕರ್ತೆ, ಅಂಗನವಾಡಿ ಕಾರ್ಯಕರ್ತೆ, ಸಿಬ್ಬಂದಿವರ್ಗದವರು ಗ್ರಾಮಮಟ್ಟದಲ್ಲಿ ಕೊರೋನ ತಡೆಗಟ್ಟುವ ನಿಟ್ಟಿನಲ್ಲಿ ಟಾಸ್ಕ್ ಪೋರ್ಸ್ ಕಾರ್ಯಪಡೆ ರಚಿಸಲಾಗಿದೆ.

ಕರ್ನಾಟಕ ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್ ನ ಕಾರ್ಯಪಡೆಯವರು ಪ್ರತಿಯೊಂದು ಹಳ್ಳಿಗಳಿಗೆ ಹೋಗಿ ಜನ ಜಾಗೃತಿ ಮೂಡಿಸುತ್ತಿದ್ದಾರೆ. ಇದರಿಂದ ಕೊರೋನ ಸೋಂಕು ತಡೆಗಟುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ನ ಟಾಸ್ಕ್ ಪೋರ್ಸ್ ಕಾರ್ಯಪಡೆ ಒಳ್ಳೆಯ ಕೆಲಸ ಮಾಡುತ್ತಿದೆ.

1995ರಲ್ಲಿ ಗ್ರಾಮ ಪಂಚಾಯತ್ ಅವಧಿ ಮುಗಿದ ಸಂದರ್ಭದಲ್ಲಿ ಅಂದಿನ ಸರ್ಕಾರದ ರಾಜ್ಯಪಾಲರು ಗ್ರಾಮ ಪಂಚಾಯತ್ ಅವಧಿಯನ್ನು 6 ತಿಂಗಳು ಮುಂದೂಡಿ ಸುಗ್ರೀವಾಜ್ಞೆ ಹೊರಡಿಸಿರುವ ನಿದರ್ಶನವಿದೆ.

ಅದೇ ರೀತಿ ಈ ಒಂದು ಮಹಾಮಾರಿ ಕೊರೋನಾದಿಂದ ತತ್ತರಿಸಿದವರನ್ನು ಜನಜಾಗೃತಿ ಮೂಡಿಸುವ ಸಲುವಾಗಿ 6 ತಿಂಗಳು ಗ್ರಾಮ ಪಂಚಾಯತ್ ಅವಧಿಯನ್ನು ಮುಂದೂಡಬೇಕಾಗಿ ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು ಅವರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.

Comments are closed.