ಕರಾವಳಿ

ಕೇರಳ ರೋಗಿಗಳಿಗೆ ದೇರಳಕಟ್ಟೆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ : ಆರೋಗ್ಯ ಇಲಾಖೆ ಸ್ಪಷ್ಟನೆ

Pinterest LinkedIn Tumblr

ಮಂಗಳೂರು ಏಪ್ರಿಲ್ 14 : ಕೇರಳ ರಾಜ್ಯ ಕಾಸರಗೋಡು ಜಿಲ್ಲೆಯಿಂದ ತುರ್ತು ಚಿಕಿತ್ಸೆಗಾಗಿ ಮಂಗಳೂರಿನ ಕೆ.ಎಸ್.ಹೆಗ್ಡೆ ಮೆಡಿಕಲ್ ಕಾಲೇಜು ಆಸ್ಪತ್ರೆ ದೇರಳಕಟ್ಟೆ ಇಲ್ಲಿಗೆ ಬಂದವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.

ತಸ್ಲೀಮ ಎಂಬವರು ಎಪ್ರಿಲ್ 8 ರಂದು ಮಧ್ಯಾಹ್ನ 12.15 ಗಂಟೆಗೆ ತೀವ್ರವಾದ ತಲೆನೋವಿನ ಸಂಬಂಧ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದು ಹಿಂದಿರುಗಿರುತ್ತಾರೆ.

ಎರಡನೇ ಪ್ರಕರಣದಲ್ಲಿ ಬಿ. ಫಾತಿಮ (65) ಎಂಬ ಮಹಿಳೆ ಎಪ್ರಿಲ್ 8 ರಂದು ಮಧ್ಯಾಹ್ನ 12.50 ಗಂಟೆಗೆ ಹೃದಯ ಸಂಬಂಧಿ ಖಾಯಿಲೆಗೆ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಮೂರನೇ ಪ್ರಕರಣದಲ್ಲಿ ರೀಶಾನ ತೀವ್ರವಾದ ಹೊಟ್ಟೆನೋವಿಗೆ ಸಂಬಂಧಿಸಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದು ಹಿಂದಿರುಗಿರುತ್ತಾರೆ.

ಜೈನಾಭಿ ಎಂಬ ಮಹಿಳೆ ತಲೆನೋವು ಮತ್ತು ವಾಂತಿ ಇರುವ ಕಾರಣ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಬಂದು ಚಿಕಿತ್ಸೆಗಾಗಿ ದಾಖಲಾಗಲು ಸೂಚಿಸಿದ್ದರೂ ಅದನ್ನು ನಿರಾಕರಿಸಿ ಹಿಂದಿರುಗಿರುತ್ತಾರೆ.

ಈ ಎಲ್ಲಾ ಪ್ರಕರಣಗಳು ಕೋವಿಡ್- 19 ಗೆ ಸಂಬಂಧಪಟ್ಟಿರುವುದಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ, ದ.ಕ ಜಿಲ್ಲೆ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Comments are closed.