ಮಂಗಳೂರು : ಕೋವಿಡ್ -19 ಕೋರೋನಾ ವೈರಸ್ ಮಹಾಮಾರಿ ಸಂದರ್ಭದಲ್ಲಿ ನಿರ್ಗತಿಕರು ಯಾರು ಹಸಿವಿನಿಂದ ಬಳಲಬಾರದು ಎಂದು ಪ್ರಧಾನಮಂತ್ರಿ ಮೋದಿಜಿ ಯವರ ಕರೆಯಂತೆ ಬ್ಯಾಂಕ್ ಆಪ್ ಬರೋಡದ ಅಧಿಕಾರಿ ಪ್ರಕಾಶ್ ನಾಯ್ಕ ರವರ ನೇತೃತ್ವದಲ್ಲಿ 280 ಜನರಿಗೆ ನಿತ್ಯ 3 ಹೊತ್ತು ಊಟೋಪಚಾರ ಹಮ್ಮಿಕೊಳ್ಳಲಾಗಿದೆ.
ಈ ಬಗ್ಗೆ ಮಾಹಿತಿ ಪಡೆದ ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ್ ಎಂ ,ಪ್ರಧಾನ ಕಾರ್ಯದರ್ಶಿ ಗಳಾದ ಸುಕೇಶ್ ಶೆಟ್ಟಿ ,ವಿನಯ್ ಎಲ್ ಶೆಟ್ಟಿ ಇವರು ಕೆಪಿಟಿ ಹತ್ತಿರದ ಹಾಸ್ಟೆಲಿಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಬ್ಯಾಂಕ್ ಆಫ್ ಬರೋಡ ಮಂಗಳೂರು ಮುಖ್ಯ ಶಾಖೆಯ ಸಹಾಯಕ ಮುಖ್ಯ ಪ್ರಬಂಧಕ ರಾದ ಎಂವಿ ಶೇಷಗಿರಿ ರವರು ಜೊತೆಗಿದ್ದರು.ಅಲ್ಲಿರುವ ನಿರ್ಗತಿಕರೊಂದಿಗೆ ಸಮಾಲೋಚನೆಯನ್ನು ನಡೆಸಿ ಮಧ್ಯಾಹ್ನದ ಊಟವನ್ನು ಬಡಿಸಲಾಯಿತು.
Comments are closed.