ಉಡುಪಿ: ಕೋರೋನಾ ಹಿನ್ನೆಲೆ ಭಾನುವಾರ ರಾತ್ರಿ 9 ಗಂಟೆಗೆ ದೀಪ ಬೆಳಗಿಸುವಂತೆ ದೇಶವಾಸಿಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಕರೆಕೊಟ್ಟಿದ್ದು ಉಡುಪಿ ಜಿಲ್ಲೆಯ ವೃತ್ತಿ ನೀರತ ಅಧಿಕಾರಿಯೊಬ್ಬರು ರಸ್ತೆಯಲ್ಲಿ ದೀಪ ಬೆಳಗಿ ಭವ್ಯ ಭಾರತದ ಪ್ರಧಾನಿಗಳ ಮಾತಿಗೆ ಗೌರವ ಸಲ್ಲಿಸಿದ್ದಾರೆ.

ಉಡುಪಿ ಜಿಲ್ಲೆ ಕಾಪು ಪೊಲೀಸ್ ಠಾಣೆಯ ಉಪನಿರೀಕ್ಷಕ ಐ.ಆರ್. ಗಡ್ಡೇಕರ್ ಅವರು ಹೆಜಮಾಡಿ ಚೆಕ್ ಪೋಸ್ಟ್‌ನಲ್ಲಿ ಬಂದೋಬಸ್ತ್ ಕರ್ತವ್ಯದಲ್ಲಿದ್ದು ರಾತ್ರಿ 9 ಗಂಟೆಗೆ ಚೆಕ್ ಪೋಸ್ಟ್ ಬಳಿಯ ರಸ್ತೆಯಲ್ಲಿ ಇತರೆ ಸಿಬ್ಬಂದಿಗಳ ಜೊತೆ ದೀಪ ಬೆಳಗಿದ್ದಾರೆ.
ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
(ವರದಿ- ಯೋಗೀಶ್ ಕುಂಭಾಸಿ)
Comments are closed.