ಕರಾವಳಿ

ಕೊರೋ‌ನಾ ಶಂಕಿತ, ಸೋಂಕಿತರ ಪೋಟೋ ವೈರಲ್- ಉಡುಪಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲು

Pinterest LinkedIn Tumblr

ಉಡುಪಿ: COVID-19 ಶಂಕಿತ ಹಾಗೂ ಸೋಂಕಿತ ವ್ಯಕ್ತಿಗಳ ಹೆಸರು ಅಥವಾ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸರಿಸಿ / ಫಾರ್‌‌ವರ್ಡ್‌ ಮಾಡಿ, ಸರ್ಕಾರದ ಆದೇಶ ಉಲ್ಲಂಘಿಸಿದವರ ವಿರುದ್ದ ಕಾನ ಕ್ರಮ ಕೈಗೊಳ್ಳುತ್ತಿರುವ ಕುರಿತು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು ಪ್ರಕರಣ ದಾಖಲಾಗಿದೆ‌.

COVID-19 ಪ್ರಕರಣಕ್ಕೆ ಸಂಬಂಧಿಸಿ, ಸೋಂಕಿತ ವ್ಯಕ್ತಿಯ ಮಾಹಿತಿಯನ್ನು ಮತ್ತು ಆತನ ಕುಟುಂಬ ಸದಸ್ಯರ ಫೋಟೋವನ್ನು ಅವರ ಅನುಮತಿ ಇಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಪ್ರಸರಿಸಿದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ/ ಸುಧೀರ್ ಚಂದ್ರ ಸೂಡಾ, ಇವರು ನೀಡಿದ ದೂರಿನ ಅನ್ವಯ ಉಡುಪಿ ಜಿಲ್ಲಾ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ದ ಪ್ರಕರಣ ದಾಖಲಾಗಿ, ತನಿಖೆಯಲ್ಲಿದೆ.

ಆದ್ದರಿಂದ ಯಾವುದೇ ವ್ಯಕ್ತಿ ವಾಟ್ಸ್ ಅಪ್, ಫೇಸ್ ಬುಕ್ ಹಾಗೂ ಇತರೇ ಯಾವುದೇ ಸಾಮಾಜಿಕ ಜಾಲತಾಣದಲ್ಲಿ COVID-19 ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಅಥವಾ ಸೋಂಕಿತ ವ್ಯಕ್ತಿಗಳ ಮಾಹಿತಿಯನ್ನು ಅಥವಾ ಫೋಟೋವನ್ನು ಅಥವಾ ಸುಳ್ಳು ಮಾಹಿತಿಗಳನ್ನು ಪ್ರಸರಿಸದಂತೆ ಉಡುಪಿ ಜಿಲ್ಲಾ ಪೊಲೀಸ್ ಪ್ರಕಟನೆಯಲ್ಲಿ ತಿಳಿಸಿದೆ.

Comments are closed.