ಕರಾವಳಿ

ಕೊರೋನಾ: ಶಾಸಕ ಕಾಮಾತ್‌ರಿಂದ ಸಹಾಯವಾಣಿ – ಸಮಸ್ಯೆಗಳಿದ್ದರೆ ಕರೆ ಮಾಡಿ

Pinterest LinkedIn Tumblr

ಮಂಗಳೂರು, ಮಾರ್ಚ್.23; ಮಂಗಳೂರಿನಲ್ಲಿ ಎಲ್ಲಿಯಾದರೂ ಕೊರೋನಾ ಶಂಕಿತರನ್ನು ತಾವು ಗಮನಿಸಿದ್ದಲ್ಲಿ, ಯಾರಾದರೂ ವಿದೇಶಿ ನಾಗರಿಕರು ಜಿಲ್ಲಾಡಳಿತದಿಂದ ಸ್ಟ್ಯಾಂಪಿಂಗ್ ಹಾಕಿಸಿಕೊಂಡಿದ್ದರೂ ಸಾರ್ವಜನಿಕವಾಗಿ ತಿರುಗಾಡುತ್ತಿದ್ದರೆ, ಪರವೂರಿನಿಂದ ಮಂಗಳೂರಿಗೆ ಬಂದು ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತು ವಿವಿದೆಡೆ ಯಾರಾದರೂ ಅನುಮಾನಾಸ್ಪದವಾಗಿ ತಿರುಗುತ್ತಿದ್ದರೆ, ಮಂಗಳೂರು ನಗರ ದಕ್ಷಿಣ ವಿಧಾನಸಭಾ ವ್ಯಾಪ್ತಿಯಲ್ಲಿ ಎಲ್ಲಾದರೂ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದ್ದಲ್ಲಿ ಅಥವ ಸೆಕ್ಷನ್ ಇರುವ ಕಾರಣ ವಿದೇಶದಿಂದ ಬಂದು ಸಮಸ್ಯೆ ಎದುರಿಸುತ್ತಿದ್ದಲ್ಲಿ ಮತ್ತು ಜಿಲ್ಲಾಡಳಿತ ನೀಡಿರುವ ಆದೇಶಗಳನ್ನು ಯಾರಾದರೂ ಉಲ್ಲಂಘಿಸುವುದು ಗಮನಕ್ಕೆ ಬಂದರೆ ಅಥವಾ ಮಂಗಳೂರಿನ ನಾಗರಿಕರು ಆರೋಗ್ಯಕ್ಕೆ ಸಂಬಂಧಿಸಿದ ಯಾವುದಾದರೂ ಸಮಸ್ಯೆಗೆ ಸಿಲುಕಿದ್ದರೆ ಇಂತಹ ಎಲ್ಲಾ ಸಂದರ್ಭಗಳಲ್ಲಿ ನೀವು ಮಂಗಳೂರು ನಗರ ದಕ್ಷಿಣ ಶಾಸಕರಾದ ಡಿ ವೇದವ್ಯಾಸ ಕಾಮತ್ ಅವರು ನೀಡಿರುವ ಸಹಾಯವಾಣಿ ಸಂಖ್ಯೆಗಳಾದ 8197270222 ಕರೆ ಮಾಡಿದರೆ ಶಾಸಕರು ಅದನ್ನು ಸಂಬಂಧಪಟ್ಟ ಅಧಿಕಾರಿಗಳ ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅವರೊಂದಿಗೆ ಮಾತನಾಡಿ ಸಮರ್ಪಕ ಪರಿಹಾರ ಮಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಡಿ ವೇದವ್ಯಾಸ ಕಾಮತ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Comments are closed.