ಕರಾವಳಿ

ಕೇಂದ್ರ ಮೈದಾನಿನಲ್ಲಿ 3ದಿನಗಳ ಕಾಲ ನಡೆಯುವ ಶ್ರೀ ರಾಮೋತ್ಸವ ಸಮಿತಿಯ ಘೋಷಣೆ

Pinterest LinkedIn Tumblr

ಮಂಗಳೂರು: ಕಳೆದ 18 ವರ್ಷಗಳಿಂದ ಕೇಂದ್ರ ಮೈದಾನದಲ್ಲಿ ರಾಮನವಮಿಯ ದಿನದಂದು ಮೊದಲ್ಗೊಂಡು 3 ದಿನಗಳ ಕಾಲ ನಡೆಯುತ್ತಿದ್ದು, ಈ ವರ್ಷ ಏಪ್ರಿಲ್ 2 , 3 , ಮತ್ತು 4 ರಂದು ಕೇಂದ್ರ ಮೈದಾನದಲ್ಲಿ ರಾಮೋತ್ಸವ ಕಾರ್ಯಕ್ರಮ ನಡೆಯಲಿದೆ, ಈ ಕಾರ್ಯಕ್ರಮದಲ್ಲಿ 3 ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು, ಮತ್ತು ಕೊನೆಯ ದಿನ ಆಕರ್ಷಕ ರಾವಣ ದಹನದೊಂದಿಗೆ ಕೊನೆಗೊಳ್ಳಲಿದೆ.

ಈ ವರ್ಷದ ರಾಮೋತ್ಸವ ಸಮಿತಿಯ ಘೋಷಣೆ ಇತ್ತೀಚಿಗೆ ವಿಶ್ವಶ್ರೀ ಕಾರ್ಯಾಲಯದಲ್ಲಿ ನಡೆಯಿತು.

ಶ್ರೀರಾಮೋತ್ಸವ ಸಮಿತಿ ಗೌರವಾಧ್ಯಕ್ಷರು ಪ್ರೊ. ಎಂ. ಬಿ. ಪುರಾಣಿಕ್, ಗೌರವ ಮಾರ್ಗದರ್ಶಕರು ಶ್ರೀ ಕೃಷ್ಣಮೂರ್ತಿ, ಶ್ರೀ ಎಲ್ ಶ್ರೀಧರ್ ಭಟ್, ಶ್ರೀ ಪುಷ್ಪರಾಜ್ ಜೈನ್, ಶ್ರೀಮತಿ ಪ್ರೇಮಲತಾ ಆಚಾರ್, ಶ್ರೀ ಗೋಪಾಲಕೃಷ್ಣ ಶೆಣೈ, ಡಾ. ಪಿ ಅನಂತಕೃಷ್ಣ ಭಟ್, ಶ್ರೀ ಮನೋಹರ್ ತುಳಜಾರಾಂ, ಶ್ರೀ ಕಟೀಲ್ ದಿನೇಶ್ ಪೈ, ಶ್ರೀ ಗೋಪಾಲ್ ಕುತ್ತಾರ್,
ಅಧ್ಯಕ್ಷರು ಶ್ರೀ ಶ್ರೀನಿವಾಸ್ ಶೇಟ್, ಉಪಾಧ್ಯಕ್ಷರು ಶ್ರೀಮತಿ ವಿದ್ಯಾ ಮಲ್ಯ, ಶ್ರೀ ಜಗದೀಶ್ ಶೇಣವ, ಶ್ರೀ ರಾಜ್ ಗೋಪಾಲ್ ರೈ, ಶ್ರೀಮತಿ ಅನಿತಾ ಕಿಣಿ, ಶ್ರೀ ಚಂದ್ರಶೇಖರ್ ಸುವರ್ಣ ಮುಲ್ಕಿ, ಶ್ರೀ ರಾಮಚಂದ್ರ ಭಟ್ ಮುಚ್ಚೂರು, ಶ್ರೀ ಹರಿದಾಸ್ ಮಾಡೂರು, ಶ್ರೀ ಪಧ್ಮನಾಭ ಮರ್ಕೆದು, ಶ್ರೀ ವಸಂತ್ ಶೇಟ್, ಶ್ರೀ ಉದಯ ಮರೋಳಿ, ಶ್ರೀ ವಿನೋದ್ ಮೆಂಡನ್, ಶ್ರೀ ಮದುಸೂಧನ್ ಅಯ್ಯರ್, ಶ್ರೀ ಕೆ ವಿ ಶೆಟ್ಟಿ ಮುಲ್ಕಿ,ಶ್ರೀ ವಿಶ್ವನಾಥ್ ಪ್ರಭು ಮೂಡಬಿದ್ರೆ, ಶ್ರೀ ಶ್ಯಾಮ್ ಹೆಗ್ಡೆ ಮೂಡಬಿದ್ರೆ, ಶ್ರೀ ಶಿವರಾಜ್ ಜ್ಯೋತಿನಗರ,ಶ್ರೀ ನಾರಾಯಣ ಕುಂಪಲ, ಶ್ರೀ ವಿಷ್ಣು ಕಾಮತ್,
ಪ್ರಧಾನಕಾರ್ಯದರ್ಶಿಶ್ರೀ ಮನೋಹರ್ ಸುವರ್ಣ, ಕಾರ್ಯದರ್ಶಿ ಶ್ರೀ ಮುರಳೀಧರ್ ರಾವ್ ಅದ್ಯಪಾಡಿ,ಶ್ರೀ ಪ್ರದೀಪ್ ಸರಿಪಲ್ಲ,ಕುಮಾರಿ ವಿಶಾಲಾಕ್ಷಿ ಸುರತ್ಕಲ್,ಶ್ರೀ ಸತೀಶ್ ಆಚಾರ್ ಕಾಟಿಪಳ್ಳ, ಶ್ರೀ ಶಿವಪ್ರಸಾದ್ ಕೊಣಾಜೆ, ಕೋಶಾಧಿಕಾರಿ ಶ್ರೀ ಪ್ರಶಾಂತ್ ಉಬರಂಗಳ ಇವರನ್ನು ಘೋಷಣೆ ಮಾಡಲಾಗಿದೆ.

ಕಾರ್ಯಕ್ರಮದ ಯಶಸ್ವಿಯ ದೃಷ್ಟಿಯಿಂದ ಆರ್ಥಿಕ ಸಮಿತಿ ,ಪ್ರಚಾರ ಸಮಿತಿ,ಅಲಂಕಾರ ಸಮಿತಿ, ಕಾರ್ಯಾಲಯ ಸಮಿತಿ, ಪೂಜಾ ಸಮಿತಿ, ಮಾರಾಟ ಮಳಿಗೆ ಮತ್ತು ವಸ್ತುಪ್ರದರ್ಶನ ಸಮಿತಿ, ಸಾಂಸ್ಕೃತಿಕ ಮತ್ತು ಸಭಾಕಾರ್ಯಕ್ರಮ ಸಮಿತಿ, ವೇದಿಕೆ ನಿರ್ಮಾಣ ಸಮಿತಿ, ಭಜನಾ ಸಮಿತಿ, ರಕ್ಷಣಾ ಸಮಿತಿ, ರಾವಣ ದಹನ ಸಮಿತಿ, ಊಟೋಪಚಾರ ಸಮಿತಿ, ಸ್ವಚ್ಛತಾ ಸಮಿತಿ, ಆಮಂತ್ರಣ ಪತ್ರಿಕೆ ವಿತರಣಾ ಸಮಿತಿಗಳ ಘೋಷಣೆಯಾಗಿದೆ ಎಂದು ಪ್ರದೀಪ್ ಸರಿಪಲ್ಲ ವಿಶ್ವ ಹಿಂದೂ ಪರಿಷದ್ ಜಿಲ್ಲಾ ಪ್ರಸಾರ – ಪ್ರಚಾರ ವಿಭಾಗ ಪ್ರಮುಖ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು

Comments are closed.