ಕರಾವಳಿ

ಜೆಸಿ‌ಐಯಿಂದ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಐವರು ಮಹಿಳೆಯರಿಗೆ ಗೌರವ ಸಮ್ಮಾನ

Pinterest LinkedIn Tumblr

ಮಂಗಳೂರು ; ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಜೆಸಿ‌ಐ ಗಣೇಶ್‌ಪುರದ ವತಿಯಿಂದ ಕಾಟಿಪಳ್ಳ ಅಂಬೇಡ್ಕರ್ ಭವನದಲ್ಲಿ ನಡೆಸಲಾಯಿತು.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜೆಸಿ‌ಐ ವಲಯ 15ರ empowering youth ಹಾಗೂ lady LOM extension ನ ವಲಯಾಧಿಕಾರಿ ಸ್ಮಿತಾ ಪಿ. ಹೊಳ್ಳ ಹಾಗೂ ಗೌರವ ಅತಿಥಿಯಾಗಿ ಉಪ್ಪಿನಂಗಡಿ ರಾಮಕುಂಜ ಶಾಲೆಯ ಶಿಕ್ಷಕರಾದ ಶ್ರೀಮತಿ ಸುಮನಾ ಮೂರ್ತಿ ಅವರು ಉಪಸ್ಥಿತರಿದ್ದರು.

ಮಹಿಳಾ ದಿನಾಚರಣೆಯ ಅಂಗವಾಗಿ ಧರ್ಮಸ್ಠಳ ಸ್ವಸಹಾಯ ಸಂಘದ ಸದಸ್ಯರಿಗೆ ಶ್ರೀಮತಿ ಸುಮನಾ ಮೂರ್ತಿ ಅವರು ಮನೆಯಲ್ಲಿ ಫಿನಾಯಿಲ್ ಡಿಷ್‌ವಾಶ್ ಸೋಪ್ ತಯಾರಿಸುವುದರ ಬಗ್ಗೆ ತರಬೇತಿ ನೀಡಿದರು.

ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಶ್ರೀಮತಿ ವಿಮಲ ದೇವಾಡಿಗ, ವಿಶಾಲ ಶೆಟ್ಟಿ, ಸುಮಲತಾ, ಸಂಪಾವತಿ, ಶಾಂತಾ ಎಸ್. ರಾವ್ ಎಂಬ ಐದು ಮಹಿಳೆಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಜೆಸಿರೆಟ್ ಶುಭಾ ಶರತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜೆಸಿ‌ಐ ಗಣೇಶ್‌ಪುರದ ಅಧ್ಯಕ್ಷರಾದ ಶರತ್ ಕುಮಾರ್ ಹಾಗೂ ಪೂರ್ವಾಧ್ಯಕ್ಷರಾದ ವನಿತಾ ಆಂಚನ್, ಶ್ರೀಶ ಕರ್ಮಾರನ್, ಉದಯ್ ಕುಮಾರ್, ಗಣೇಶ್‌ಪುರದ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Comments are closed.