ಮಂಗಳೂರು / ಉಪ್ಪಳ : ಸಪ್ತ ಭಾಷಾ ಸಂಗಮ ಭೂಮಿ ಮಂಜೇಶ್ವರದ ಉಪ್ಪಳ ಭಗವತಿಗೆ ಅಭಿಮಾನವಾದ ಕ್ಷಣ. ಮಂಗಳೂರು ಎಂ.ಎ ಯುನಿವರ್ಸಿಟಿಯಲ್ಲಿ ಪೊಲಿಟಿಕಲ್ ಸಯನ್ಸ್ ನಲ್ಲಿ ಮೊದಲ ಶ್ರೇಣಿ ಪಡೆದ ಉಪ್ಪಳ ಶ್ರೀ ಭಗವತಿ ಕ್ಷೇತ್ರದ ಪೂಜಾರಿಯವರ ಸೊಸೆ ಕುಮಾರಿ ಪೂಜಶ್ರೀಯನ್ನು ಭಾರತೀಯ ಜನತಾ ಪಕ್ಷದ ಮಂಜೇಶ್ವರ ಮಂಡಲ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.
ಮಂಗಳೂರು ಎಂ.ಎ ಯುನಿವರ್ಸಿಟಿಯಲ್ಲಿ ಪೊಲಿಟಿಕಲ್ ಸಯನ್ಸ್ ನಲ್ಲಿ ಮೊದಲ ಶ್ರೇಣಿ ಪಡೆದ ಉಪ್ಪಳ ಶ್ರೀ ಭಗವತಿ ಕ್ಷೇತ್ರದ ಪೂಜಾರಿಯವರ ಸೊಸೆ ಹಾಗೂ ನಾರಾಯಣ ಉಮಾವತಿ ದಂಪತಿಗಳ ಸುಪುತ್ರಿ ಕುಮಾರಿ ಪೂಜಶ್ರೀಯನ್ನು ಭಾರತೀಯ ಜನತಾ ಪಕ್ಷದ ಮಂಜೇಶ್ವರ ಮಂಡಲ ಸಮಿತಿಯ ವತಿಯಿಂದ ಮಂಡಲ ಅಧ್ಯಕ್ಷರಾದ ಮಣಿಕಂಠ ರೆೃ ಪಟ್ಲ, ಉಪಾಧ್ಯಕ್ಷರಾದ ಪದ್ಮನಾಭ ಕಡಪ್ಪರ, ಜಯಂತಿ ಟಿ.ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಆದಶ್೯ ಬಿ.ಎಂ ಮಂಜೇಶ್ವರ್ ಹಾಗೂ ಒ.ಬಿ.ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಕೆ.ಐಲ ಇವರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಇದಲ್ಲದೆ ಈಕೆಯನ್ನು ವಿವಿಧ ರಾಜಕೀಯ ಪಕ್ಷದ ಮುಖಂಡರುಗಳು ಹಾಗೂ ವಿವಿಧ ಸಮುದಾಯದ ಗಣ್ಯರು ಸನ್ಮಾನಿಸಿ ಅಭಿನಂದಿಸಿದರು.
– ಈಶ್ವರ ಎಂ. ಐಲ್





Comments are closed.