ಕರಾವಳಿ

ಧಾರ್ಮಿಕ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಭುವನಾಭಿರಾಮ ಉಡುಪರ ಕೊಡುಗೆ ಅಪಾರ”: ಶ್ರೀ ಚಂದ್ರಶೇಖರ ಸ್ವಾಮೀಜಿ.

Pinterest LinkedIn Tumblr

ಮುಲ್ಕಿ: ಕಿನ್ನಿಗೋಳಿಯಲ್ಲಿ ಯುಗಪುರುಷ ಎಂಬ ಸಂಸ್ಥೆಯನ್ನು ಉಳಿಸಿ ಬೆಳೆಸಿಕೊಂಡು ಧಾರ್ಮಿಕ. ಸಾಂಸ್ಕೃತಿಕ. ರಾಜಕೀಯ ಮತ್ತಿತರ ರಂಗಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸಮಾಜ ಸೇವೆ ಮಾಡುತ್ತಿರುವ ಭುವನಾಭಿರಾಮ ಉಡುಪರವರ ಕಾರ್ಯ ಶ್ಲಾಘನೀ ಯ  ಎಂದು ಧಾರ್ಮಿಕ ಗುರು ಅಂತರಾಷ್ಟ್ರೀಯ ವಾಸ್ತುತಜ್ಞ ಹಾಗೂ ವೈಜ್ಞಾನಿಕ ಜ್ಯೋತಿಷ್ಯರಾಗಿರುವ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು .

ಅವರು ಮುಲ್ಕಿ ಸಮೀಪದ ಕಿಲ್ಪಾಡಿ ಯ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದಲ್ಲಿ ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾಗಿ ನೇಮಕಗೊಂಡಿರುವ ಕಿನ್ನಿಗೋಳಿ ಯುಗಪುರುಷ ಸಂಸ್ಥೆಯ ಅಧ್ಯಕ್ಷರಾದ ಭುವನಾಭಿರಾಮ ಉಡುಪ ರನ್ನು ಗೌರವಿಸಿ ಮಾತನಾಡಿದರು.

“ನಾನು ಕಂಡಂತೆ ಉಡುಪರು ಎಲ್ಲಾ ರಂಗಗಳಲ್ಲೂ ಮಿಂಚಿದ ಶ್ರೇಷ್ಠ ವ್ಯಕ್ತಿ ಎಂದು ಬಣ್ಣಿಸಿದ ಅವರು ರಾಜ್ಯ ಸರಕಾರ ಧಾರ್ಮಿಕ ಪರಿಷತ್ ಸದಸ್ಯತ್ವಕ್ಕೆ ಭುವನಾ ಭಿರಾಮ ಉಡುಪರನ್ನುಸೂಕ್ತ ಆಯ್ಕೆ ನಡೆಸಿದೆ “ಎಂದು ಹೇಳಿದರು.

ಈ ಸಂದರ್ಭ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ನಿರ್ದೇಶಕಿ ರಜನಿ ಸಿ ಭಟ್. ಸಂಚಾಲಕರಾದ ಪುನೀತ ಕೃಷ್ಣ. ದೇವಿಪ್ರಸಾದ್ ಕೆಂಪುಗುಡ್ಡೆ. ಆಶ್ರಮದ ಭದ್ರತಾ ಸಿಬ್ಬಂದಿ ಮಂಜುನಾಥ್ ಗೌಡ್ರು. ಪ್ರದೀಪ್ ಗೌಡ. ಮತ್ತಿತರರು ಉಪಸ್ಥಿತರಿದ್ದರು.

ಪುನೀತ್ ಕೃಷ್ಣ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. (ಚಿತ್ರ ಇದೆ: ಕರ್ನಾಟಕ ರಾಜ್ಯಧಾರ್ಮಿಕ ಪರಿಷತ್ ಸದಸ್ಯರಾಗಿ ನೇಮಕಗೊಂಡಿರುವ ಕಿನ್ನಿಗೋಳಿ ಯುಗಪುರುಷ ಸಂಸ್ಥೆಯ ಅಧ್ಯಕ್ಷರಾದ ಭುವನಾಭಿರಾಮ ಉಡುಪರ ವರನ್ನು ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ವತಿಯಿಂದ ಗೌರವಿಸಲಾಯಿತು)

ದಿನೇಶ್ ಕುಲಾಲ್

Comments are closed.