ಕರಾವಳಿ

ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಅಕಾಲಿಕ ಮಳೆ : ಬಿಸಿಲಿನ ತಾಪಕ್ಕೆ ತತ್ತರಿಸಿದ ಜನತೆಗೆ ತಂಪೆರದ ವರುಣ

Pinterest LinkedIn Tumblr

ಮಂಗಳೂರು, ಮಾರ್ಚ್.02: ಮಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಇಂದು ಮುಂಜಾನೆ ಭಾರೀ ಮಳೆ ಸುರಿದಿದ್ದು, ಹಲವು ದಿನಗಳಿಂದ ಬಿಸಿಲಿನ ತಾಪಕ್ಕೆ ತತ್ತರಿಸಿದ ಜನತೆಗೆ ಅಕಾಲಿಕ ಮಳೆ ತಂಪನ್ನೆರೆಯಿತು.

ಬಿಸಿಲ ಬೇಗೆಯಿಂದ ತತ್ತರಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆಗಳಲ್ಲಿ ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಮಳೆ ಸುರಿಯಲಾರಂಭಿಸಿದ್ದು, ಕೆಲವೆಡೆ ಧಾರಾಕಾರ ಮಳೆಯಾಗಿದೆ. ನಗರದ ಬಿಜೈ, ನಂದಿಗುಡ್ಡೆ, ಬೊಂದೆಲ್, ಕಾವೂರು, ಪದವಿನಂಗಡಿ, ಉಳ್ಳಾಲ, ತೊಕ್ಕೊಟ್ಟು, ಪಂಡಿತ್ ಹೌಸ್, ಕುತ್ತಾರ್, ದೇರಳಕಟ್ಟೆ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿದೆ.

ನಗರದ ಹಲವು ಕಡೆಗಳಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಕೆಸರು ನೀರು ನಿಂತಿದ್ದು, ವಾಹನ ಸಂಚಾರಕ್ಕೂ ಅಡಚಣೆ ಯುಂಟಾಗಿದೆ. ಕಾಮಗಾರಿ ವಿಳಂಭದಿಂದಾಗಿ ಈ ರೀತಿಯ ಸಮಸ್ಯೆ ಮರುಕಳಿಸುತ್ತಿದೆ ಎಂದು ವಾಹನ ಸವಾರರು ಆಕ್ರೋಷ ವ್ಯಕ್ತಪಡಿಸಿದ್ದಾರೆ.

Comments are closed.