ಮಂಗಳೂರು : ಮಂಗಳೂರು : ಬಂಟ್ವಾಳ ಹಾಗೂ ಬೆಳ್ತಂಗಡಿ ತಾಲೂಕಿನ ಬೇರೆ ಬೇರೆ ಸ್ಥಳಗಳಲ್ಲಿ ಇಬ್ಬರು ಮಹಿಳೆಯರು 108 ಆಂಬ್ಯುಲೆನ್ಸ್‍ನಲ್ಲೇ ಸುರಕ್ಷಿತ ಹೆರಿಗೆ ಮೂಲಕ ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ.
ಫೆಬ್ರವರಿ 21 ರಂದು ಬರಿಮಾರಿಯಿಂದ ಸುಮಾರು ರಾತ್ರಿ 3 ಗಂಟೆ 5 ನಿಮಿಷಕ್ಕೆ ಹೆರಿಗೆ ನೋವು ಎಂದು ದೂರವಾಣಿ ಕರೆ ಬಂದ ಸಂದರ್ಭದಲ್ಲಿ ಮಾಣಿ 108 ಆಂಬುಲೆನ್ಸ್ ಬರಿಮಾರುಗೆ ತಲುಪಿದ್ದು ರೋಗಿಯನ್ನು ಆಂಬುಲೆನ್ಸ್ ನಲ್ಲಿ ಕುಳ್ಳಿರಿಸಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಹೋಗುವಾಗ ರಸ್ತೆ ಮಾರ್ಗದಲ್ಲಿ ಅಂದರೆ ಶೇರ ಎಂಬಲ್ಲಿ ಹೆರಿಗೆ ನೋವು ಜಾಸ್ತಿ ಕಾಣಿಸಿಕೊಂಡ ಕಾರಣ ಆಂಬುಲೆನ್ಸ್ ಶುಶ್ರೂಷಕ ಪ್ರದೀಪ್ ಮತ್ತು ಚಾಲಕರಾದ ವಿಜಯವಿಲ್ಸನ್ ಸುರಕ್ಷಿತವಾಗಿ ಹೆರಿಗೆಯನ್ನು ಆಂಬುಲೆನ್ಸ್‍ನಲ್ಲಿ ಮಾಡಿಸಿದ್ದಾರೆ.
ಬಳಿಕ ತಾಯಿ ಮತ್ತು ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ.
ಉಜಿರೆಯ 108 ಆಂಬ್ಯುಲೆನ್ಸ್‍ನಲ್ಲಿ ಸುರಕ್ಷಿತ ಹೆರಿಗೆ :
ಆಳದಂಗಡಿ ನಿವಾಸಿ ಅಬ್ದುಲ್ ಅಝೀಝ್ ಹಾಗೂ ಫಾತಿಮಾ ನುಸ್ರಾ ದಂಪತಿಗಳು ಫೆಬ್ರವರಿ 22 ರಂದು ಬೆಳಿಗ್ಗೆ 11.23 ಗಂಟೆಗೆ ಉಜಿರೆಯ 108 ಆಂಬ್ಯುಲೆನ್ಸ್ ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಉಜಿರೆ 108 ಆಂಬುಲೆನ್ಸ್ ವಾಹನದ ಶುಶ್ರೂಷಕಿ ಕಸ್ತೂರಿ ಹಾಗೂ ಚಾಲಕ ಶ್ರೀಧರ್ ಕರ್ತವ್ಯ ನಿರ್ವಹಿಸಿದ್ದಾರೆ. ತಾಯಿ ಮತ್ತು ಮಗುವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತಾಯಿ ಮತ್ತು ಮಗು ಇಬ್ಬರು ಆರೋಗ್ಯದಲ್ಲಿ ಇದ್ದಾರೆ.


Comments are closed.