ಕರಾವಳಿ

ಕುಂದಾಪುರ ಸರಕಾರಿ ಆಸ್ಪತ್ರೆಗೆ ಎಸಿ ಭೇಟಿ- ಸ್ವಚ್ಚತೆ ಕಾಪಾಡಲು ಸೂಚನೆ

Pinterest LinkedIn Tumblr

ಕುಂದಾಪುರ: ಸಾರ್ವಜನಿಕರಿಗೆ ಉತ್ತಮ ಸೇವೆ, ತಾಲೂಕು ಸರ್ಕಾರಿ ಆಸ್ಪತ್ರೆ ಸ್ವಚ್ಛತೆ, ಆಸ್ಪತ್ರೆಗೆ ಬರುವ ಅನಾರೋಗ್ಯ ಪೀಡಿತರಲ್ಲದೆ ಎಲ್ಲರ ಜೊತೆ ಉತ್ತಮ ಸಂವಹನ, ಉತ್ತಮ ಸೇವೆ ನೀಡುವ ಮೂಲಕ ಜನ ಸ್ನೇಹಿ ಆಸ್ಪತ್ರೆಗೆ ಆಧ್ಯತೆ ನೀಡಿ, ಇನ್ನುಮುಂದೆ ಸಾರ್ವಜನಿಕರಿಂದ ದೂರು ಬಂದರೆ ಕ್ರಮಕ್ಕೆ ಶಿಪಾರಸ್ಸು ಮಾಡಿ ವರದಿ ನೀಡುತ್ತೇನೆ.. ಎಂದು ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ಕೆ.ರಾಜು. ಎಚ್ಚರಿಕೆ ನೀಡಿದ್ದಾರೆ. ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಮಂಗಳವಾರ ಭೇಟಿ ನೀಡಿ, ಆಸ್ಪತ್ರೆ ಹಾಗೂ ವಾರ್ಡ್, ಹೊರರೋಗಿ ಘಟಕ, ಪರಿಶೀಲನೆ ನಡೆಸಿ, ಅಧಿಕಾರಿಗಳಿಗೆ ಅವರು ಎಚ್ಚರಿಕೆ ನೀಡಿದರು.

ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಿಕೊಟ್ಟ ಹೊಸ ಕಟ್ಟಡ ಬಿಟ್ಟು ಹಳೇ ಆಸ್ಪತ್ರೆಯಲ್ಲಿ ಸ್ವಚ್ಛತೆ ಇಲ್ಲ. ಬಾತ್ ರೂಮ್ ವಾರ್ಡ್ ಸ್ವಚ್ಛಚಾಗಿ ಇಡುವಂತೆ ಸೂಚಿಸಿದ ಎಸಿ, ಸಾರ್ವಜನಿಕರಿಂದ ದಿನಕ್ಕೆ ಐದಾರು ದೂರುಗಳು ಬರುತ್ತದೆ. ಇನ್ನು ಮಂದೆ ದೂರು ಬಂದರೆ, ಕ್ರಮ ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ ಎಂದು ಎಚ್ಚರಿಸಿದರು.

ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ, ವೈದ್ಯಾಧಿಕಾರಿ ಡಾ.ರಾಬರ್ಟ್, ವೈದ್ಯರಾದ ಡಾ. ನಾಗೇಶ್ ಗುಂಡ್ಮಿ, ಸಿಸ್ಟರ್ ಮೆಟ್ರನ್ ಇದ್ದರು.

ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆ ಸ್ವಚ್ಛತೆ ಹಾಗೂ ರೋಗಿಗಳ ಬಗ್ಗೆ ಇರುವ ನಿರ್ಲಕ್ಷದ ಬಗ್ಗೆ ಇತ್ತೀಚೆಗೆ ವಿಡಿಯೋ ವೈರಲ್ ಆಗಿತ್ತು.ಆಸ್ಪತ್ರೆಯಲ್ಲಿ. ಸ್ವಚ್ಛತೆ ಅನ್ನೋದು ಮರೀಚಿಕೆ, ಆಸ್ಪತ್ರೆ ಪರಿಸರ ಮಲೀನವಾಗಿದ್ದು, ಶೌಚಾಲಯದಲ್ಲಿ ಹುಳು ಬಿದ್ದು, ಅಸಹ್ಯ ಹುಟ್ಟಿಸುತ್ತದೆ ಎಂದು ಸಾರ್ವಜನಿಕರಿಂದ ದೂರು ಕೇಳಿಬಂದಿತ್ತು.

ಹೊಸ ಆಸ್ಪತ್ರೆ ಹೊರತು ಪಡಿಸಿ, ಸ್ಚಚ್ಛತೆ ತೃಪ್ತಿಕರವಾಗಿರಲಿಲ್ಲ. ನಮ್ಮಲ್ಲಿ ಸ್ಟಾಪ್ ಕಡಿಮೆ ಇರೋದ್ರಿಂದ ಸಮಸ್ಯೆ ಆಗಿದೆ ಎಂದು ಸಮರ್ಥಿಸಿಕೊಂಡಿದ್ದು, ಸ್ಟಾಪ್ ಕಡಿಮೆ ಇರುವುದು ಹೌದಾದರೂ ಇರುವ ಸ್ಟಾಪ್ ವ್ಯವಸ್ಥಿತಿವಾಗಿ ಬಳಸಿಕೊಂಡು ಸ್ವಚ್ಛತೆ ಅಲ್ಲದೆ ಆಸ್ಪತ್ರೆ ಎಲ್ಲಾ ವ್ಯವಸ್ಥೆ ಮೈಂಟೇಶನ್ ಮಾಡುವಂತೆ ಸೂಚಿಸಲಾಗಿದೆ. ಆಸ್ಪತ್ರೆಯ ಎಲ್ಲಾ ವಿಭಾಗ ಪರಿಶೀಲನೆ ನಡಸಿದ ನಂತರ ವೈದ್ಯರು ಹಾಗೂ ಸ್ಟಾಪ್ ಜೊತೆ ಸಭೆ ನಡೆಸಿ, ಕ್ಲಿಯರ್‍ಕಟ್ ಇನ್ಸ್‌ಸ್ಟ್ರೆಕ್ಷನ್ ನೀಡಿದ್ದು, ಇನ್ನು ಮುಂದೆ ತಪ್ಪುಗಳು ಕಂಡುಬಂದರೆ ಅದಕ್ಕೆ ಯಾರು ಕಾರಣರೋ ಅವರ ವಿರುದ್ಧ ಕ್ರಮಕ್ಕೆ ಶಿಪಾರಸ್ಸು ಮಾಡುತ್ತೇನೆ.
-ಕೆ.ರಾಜು, ಎಸಿ ಕುಂದಾಪುರ

ಇದನ್ನೂ ಓದಿರಿ-

ಗಬ್ಬು ನಾರುತ್ತಿದೆ ಕುಂದಾಪುರ ಸರಕಾರಿ ಆಸ್ಪತ್ರೆ ಜನರಲ್ ವಾರ್ಡ್ ಶೌಚಾಲಯ!

Comments are closed.