ಕುಂದಾಪುರ: ಕುಂದಾಪುರ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳ ನೋಡಿಕೊಳ್ಳುವ ಪರಿಯಾದರೆ, ಇನ್ನು ಆಸ್ಪತ್ರೆಯಲ್ಲಿ ಸ್ವಚ್ಛತೆ ಎನ್ನೋದು ಮರೀಚಿಕೆಯಾಗಿದೆ. ಶವಾಗಾರ ಪರಿಸರ, ಆಸ್ಪತ್ರೆ ಹಿಂಭಾಗ, ಶೌಚಾಲಯ, ಮೂತ್ರದೊಡ್ಡಿ ಎಲ್ಲವೂ ಕೊಳಕಾಗಿದೆ. ಹುಳು ಬಿದ್ದ, ಒಳಗೆ ಕಾಲಿಡಲಿಕ್ಕೂ ಆಗದಷ್ಟು ಗಲೀಜಾದ, ಬಾಗಿಲು ಕಳಚಿಕೊಂಡ ಬಾತ್ ರೂಮಗಳು ಕಣ್ಣಿಗೆ ಕಾಣುತ್ತೆ. ಒಟ್ಟಾರೆ ಕುಂದಾಪುರ ತಾಲೂಕಿನ ದೊಡ್ಡ ಸರ್ಕಾರಿ ಆಸ್ಪತ್ರೆ ಇದ್ದರೂ ಜನ ಸಾಮಾನ್ಯರು ಖಾಸಗಿ ಆಸ್ಪತ್ರೆ ಬಾಗಿಲು ಬಡಿಯುವ ಸ್ಥಿತಿ ಇದೆ.

ಇತ್ತೀಚೆಗಷ್ಟೇ ಕೋಟಿ ರೂ.ವೆಚ್ಚದಲ್ಲಿ ಡಾ.ಜಿ ಶಂಕರ್ ನಿರ್ಮಿಸಿ ಆಸ್ಪತ್ರೆಗೆ ಹಸ್ತಾಂತರಿಸಿದ ಹೈಪೈ ಕಟ್ಟಡ, ಸುಸಜ್ಜಿತೆ ಹೆರಿಗೆ ಆಸ್ಪತ್ರೆ ಡಾ.ಜಿ.ಶಂಕರ್ ಸಾರ್ವಜನಿಕರ ಉಪಯೋಗ ಆಗಲಿ ಅಂತಾ ಆಸ್ಪತ್ರೆ ನೀಡಿದ್ದು, ಹೆರಿಗೆ ಆಸ್ಪತ್ರೆ ಒಂದು ಕಡೆಯಾದರೂ ಹೊಸ ಕಟ್ಟಡ ಕೂಡಾ ಕೆಲವೇ ದಿನದಲ್ಲಿ ಹಳ್ಳ ಹತ್ತಿದರೂ ಅಚ್ಚರಿಯಿಲ್ಲ. ಹೆಚ್ಚಾಗಿ ಗ್ರಾಮೀಣ ಭಾಗ ಹಾಗೂ ಬಡವರೇ ಬರುತ್ತಿರುವ ಸರ್ಕಾರಿ ಆಸ್ಪತ್ರೆ ಬೇಕಾಬಿಟ್ಟಿಗೆ ಸಾರ್ವಜನಿಕರ ಆರೋಗ್ಯ ಹಕ್ಕು ನಿರಾಕರಣೆ ಆಗುತ್ತಿದೆ. ಜಿಲ್ಲಾಡಳಿತ ಎಚ್ಚೆತ್ತು ಆಸ್ಪತ್ರೆ ವ್ಯವಸ್ಥೆ ಸುಧಾರಿಸಬೇಕಿದೆ.
ಶೌಚಾಲಯ ಅವ್ಯವಸ್ಥೆ ವಿಡಿಯೋ ವೈರಲ್…
ಕುಂದಾಪುರ ತಾಲೂಕು ತಾಪಂ 19 ಸಾಮಾನ್ಯ ಸಭೆಯಲ್ಲೂ ಆಸ್ಪತ್ರೆ, ವೈದ್ಯಾಧಿಕಾರಿ, ಹೆಚ್ಚು ಸಂಬಳ ಡ್ರಾಮಾಡಿದ ವೈದ್ಯಾಧಿಕಾರಿ, ಹೆಚ್ಚುವರಿ ಹಣ ವಸೂಲು, ಸ್ವಚ್ಛತೆ, ಖಾಸಗಿ ಪ್ರಾಕ್ಟೀಸ್, ವೈದ್ಯರ ಸ್ವಯಂ ನಿವೃತ್ತಿ ಹತ್ತು ಹಲವು ಸಂಗತಿ ಮುಂದಿಟ್ಟುಕೊಂಡು ಚರ್ಚೆ ನಡೆದಿದೆ. ಇದಲ್ಲದೆ ಆಸ್ಪತ್ರೆಗೆ ಬರುವ ಜನಪ್ರತಿನಿಧಿಗಳಿಗೆ ಗೌರವ ಕೊಡುವುದಿಲ್ಲ.ಯಾರನ್ನೂ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು ತಾಪಂ ಸದಸ್ಯರು ಸಾಮಾನ್ಯ ಸಭೆಯಲ್ಲಿ ವೈದ್ಯಾಧಿಕಾರಿ ವಿರುದ್ಧ ಹರಿಹಾಯ್ದಿದ್ದರು. ವೈದ್ಯಾಧಿಕಾರಿ ವಿರುದ್ಧ ಆಸ್ಪತ್ರೆ ನರ್ಸ್‌ಗಳು ಕಪ್ಪುಪಟ್ಟಿ ಕಟ್ಟಿ ಪ್ರತಿಭಟನೆ ಕೂಡಾ ನಡೆಸಿದ್ದರು. ಇಷ್ಟೇ ಅಲ್ಲದೆ ಆಸ್ಪತ್ರೆ ಸ್ವಚ್ಛತೆ, ಚಿಕಿತ್ಸೆಗೆ ತಾತ್ಸಾರ, ರೋಗಿಗಳ ಗೌರವಯುತವಾಗಿ ನಡೆಸಿಕೊಳ್ಳುವುದಲ್ಲ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲೂ ಅಸಮದಾನ ಇದೆ. ಇದೆಲ್ಲದರ ನಡುವೆ ಆಸ್ಪತ್ರೆ ಸ್ವಚ್ಛತೆ ಬಗ್ಗೆ ಮಾಡಲಾದ ವಿಡಿಯೋ ಸಾರ್ವಜನಿಕ ವಲಯದಲ್ಲಿ ಸಖತ್ ಟ್ರೋಲ್ ಆಗಿದೆ.
Comments are closed.