ಮಂಗಳೂರು : ನಗರದ ಕಂದಕ್ ಮುಸ್ಲಿಂ ಜಮಾಅತ್ ವತಿಯಿಂದ ಶಿವರಾತ್ರಿ ಪ್ರಯುಕ್ತ ಪ್ರತಿವರ್ಷದಂತೆ ಈ ಬಾರಿಯೂ ಕೂಡ ನೀರೇಶ್ವಾಲ್ಯದ ನಿತ್ಯಾನಂದ ಆಶ್ರಮದಿಂದ ಶೋಭಾಯತ್ರೆ ತೆರಳುತ್ತಿದ್ದ ಸಂಧರ್ಭದಲ್ಲಿ ಹಿಂದೂ ಸಹೋದರರಿಗೆ ಸಿಹಿ ತಿನಿಸು, ತಂಪು ಪಾನೀಯಗಳನ್ನು ವಿತರಿಸುವ ಮೂಲಕ ಮುಸ್ಲಿಮರು ಸೌಹಾರ್ದ ಮೆರೆದರು.
ಈ ಸಂದರ್ಭದಲ್ಲಿ ಸ್ಥಳೀಯ ಪಾಲಿಕೆ ಸದಸ್ಯರಾದ ಅಬ್ದುಲ್ ಲತೀಫ್ ರವರು ನಮ್ಮ ವಾರ್ಡ್‌ನಲ್ಲಿರುವ ಪ್ರತಿಯೊಬ್ಬರು ಅಣ್ಣ-ತಮ್ಮಂದಿರಂತೆ ಬದುಕಿ ಬಾಳುವುದರೊಂದಿಗೆ ಈ ತರಹ ಸೌಹಾರ್ದತೆಯು ದೇಶದ ಪ್ರತಿಯೊಂದು ಗಲ್ಲಿಗಲ್ಲಿಗಳಲ್ಲೂ ಮುಂದುವರಿಯಬೇಕು. ಸಹೋದರತೆ ಭಾವದಿಂದ ಶಾಂತಿಯುತ ಜೀವನ ನಡೆಸಬೇಕು ಎಂದು ಹೇಳಿದರು.
ಈ ಸಂದರ್ಭ ಕಂದಕ್ ಮುಸ್ಲಿಂ ಜಮಾತಿನ ಸದಸ್ಯರುಗಳಾದ ಸಿದ್ದೀಕ್, ಫೈಝಲ್, ಹಕೀಂ, ಅಶ್ರಫ್, ಮುಸ್ತಫಾ, ಶಕೀಬ್, ಹಮೀದ್, ಹಸನ್, ಮುಕ್ತಾರ್, ಶರೀಫ್, ಅಹ್ಮದ್ ಬಾವ, ಅರ್ಫಾಝ್, ಸಫ್ವಾನ್, ಸಮೀರ್ ಅವರೊಂದಿಗೆ ನಿತ್ಯಾನಂದ ಆಶ್ರಮದ ಹನುಮಂತ ಕಾಮತ್, ರೋಹಿತ್, ಸದಾಶಿವ ಶೆಟ್ಟಿ, ಪ್ರಮೋದ್, ಸಂತೋಷ, ಕಮಲಾಕ್ಷ, ಅರುಣ್, ನಿತೀಶ್, ಹರೀಶ್ ಮತ್ತಿತರರು ಉಪಸ್ಥಿತರಿದ್ದರು.




Comments are closed.