ಕರಾವಳಿ

ಮಂಗಳೂರು-ಅಥಣಿ-ಮಂಗಳೂರು : ನೂತನ ನಾನ್ ಎಸಿ ಸ್ಲೀಪರ್ ಸಾರಿಗೆ ಆರಂಭ

Pinterest LinkedIn Tumblr

(ಸಾಂದರ್ಭಿಕ ಚಿತ್ರ)

ಮಂಗಳೂರು ಫೆಬ್ರವರಿ 20 : ಕೆಎಸ್‍ಆರ್‍ಟಿಸಿ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಮಂಗಳೂರು ವಿಭಾಗದಿಂದ ಮಂಗಳೂರು-ಅಥಣಿ-ಮಂಗಳೂರು ಮಾರ್ಗದಲ್ಲಿ ನೂತನವಾಗಿ ನಾನ್ ಎಸಿ ಸ್ಲೀಪರ್ ಸಾರಿಗೆಯನ್ನು ಪ್ರಾರಂಭಿಸಲಾಗುತ್ತಿದೆ.

ಬಸ್ ಕಾರ್ಯಾಚರಣೆ ಸಮಯದ ವಿವರ ಇಂತಿವೆ : ಮಂಗಳೂರು-ಬೆಳಗಾವಿ-ಅಥಣಿ ಮಂಗಳೂರು ಬಸ್ಸು ನಿಲ್ದಾಣದಿಂದ ಸಂಜೆ 7 ಗಂಟೆಗೆ ಹೊರಟು ಉಡುಪಿಗೆ 8 ಗಂಟೆಗೆ ತಲುಪಿ, ಕುಂದಾಪುರ 8.30 ಗಂಟೆಗೆ ತಲುಪಿ, ಹುಬ್ಬಳ್ಳಿ ಧಾರವಾಡ ಬೆಳಗಾವಿ ಮಾರ್ಗವಾಗಿ ಚಿಕ್ಕೋಡಿಗೆ ಬೆಳಗ್ಗೆ 7 ಗಂಟೆಗೆ ತಲುಪುತ್ತದೆ.

ಅಥಣಿಯಿಂದ ಸಂಜೆ 5.15 ಗಂಟೆಗೆ ಹೊರಟು ಚಿಕ್ಕೋಡಿ, ಬೆಳಗಾವಿ, ಹುಬ್ಬಳ್ಳಿ ಮಾರ್ಗವಾಗಿ ಮಂಗಳೂರಿಗೆ ಬೆಳಗ್ಗೆ 5 ಗಂಟೆಗೆ ತಲುಪಲಿದೆ. ಸಾರಿಗೆಗೆ ಅವತಾರ್ ವ್ಯವಸ್ಥೆ ಮೂಲಕ ಮುಂಗಡ ಆಸನಗಳನ್ನು ಕಾದಿರಿಸುವ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಸಾರಿಗೆಯ ಸದುಪಯೋಗವನ್ನು ಪಡೆದುಕೊಳ್ಳಬಹುದು.

ಈ ಬಸ್ ಪ್ರಯಾಣ ದರದ ವಿವರ ಇಂತಿವೆ :

ಮಂಗಳೂರು- ಹುಬ್ಬಳ್ಳಿ ರೂ.560, ಮಂಗಳೂರು- ದಾರವಾಡ ರೂ.600, ಮಂಗಳೂರು-ಬೆಳಗಾವಿ ರೂ. 700, ಮಂಗಳೂರು-ಚಿಕ್ಕೋಡಿ ರೂ.850, ಮಂಗಳೂರು-ಅಥಣಿ ರೂ.950. ಸಾರ್ವಜನಿಕರು ಪ್ರಯಾಣದ ಅನುಕೂಲವನ್ನು ಪಡೆಯುವಂತೆ ವಿಭಾಗೀಯ ನಿಯಂತ್ರಣಾಧಿಕಾರಿ, ಕರಾರಸಾಸಂ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Comments are closed.