ಮಂಗಳೂರು ಫೆಬ್ರವರಿ 20 : ಶಿವಾಜಿ ಮಹಾರಾಜರ ಆದರ್ಶಗಳು ಪಾಲನೆ ಮಾಡಿ ಸಮಾಜಕ್ಕೆ ಬೆಳಕಗಾಗಿ ನಾವು ಅರಳಬೇಕು. ಸಾಧನೆಯನ್ನು ಮಾಡುವ ಮನಸ್ಸು ಇದ್ದರೆ ಅಷ್ಟೇ ಸಲ್ಲದು ಶಿವಾಜಿ ಮಹಾರಾಜನಂತೆ ಛಲ, ದೃಢವಾದ ಗುರಿ ಹೊಂದಿದರೆ ಏನು ಬೇಕಾದರು ಸಾಧನೆ ಮಾಡಬಹುದು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್‍ಸಾರ್ ಹೇಳಿದರು.
ಮಂಗಳೂರಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ನಂದಿನಿ ಸಭಾ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ದ.ಕ ಜಿಲ್ಲೆ ಹಾಗೂ ಕರ್ನಾಟಕ ಕ್ಷತ್ರೀಯ ಮರಾಠ (ರಿ) ದ.ಕ. ಜಿಲ್ಲೆ, ಮಂಗಳೂರು ಆರ್ಯ ಯಾನೆ ಮರಾಠ ಸಮಾಜ ಸಂಘ (ರಿ) ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 393 ನೇ ಜಯಂತಿ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸವನ್ನು ನೀಡಿದ ಕೆನರಾ ಪ್ರೌಢ ಶಾಲೆ ಶಿಕ್ಷಕ ರವೀಂದ್ರನಾಥ ಶೆಟ್ಟಿ, ಛತ್ರಪತಿ ಶಿವಾಜಿ ಜಯಂತಿ ಕೇವಲ ಒಂದು ಸಮುದಾಯಕ್ಕೆ , ಪಂಗಡಕ್ಕೆ, ಜನಾಂಗಕ್ಕೆ ಮಾತ್ರ ಸೀಮಿತವಾಗಿಲ್ಲ ಅವರು ಇಡೀ ದೇಶಕ್ಕೆ ಮಾದರಿ ನಾಯಕ. ಎಲ್ಲಾ ರಂಗದಲ್ಲಿ ಆದರ್ಶ ಪುರುಷ, ಶಿವಾಜಿ ಸಾಮ್ರಾಟನ ಹಿಂದೆ ತಾಯಿ ಜೀಜಾತಾಯಿ ಆಶ್ರಮ ಅಮೋಘವಾದ್ದು, ಶಿವಾಜಿ ಗರ್ಭವ್ಯವಸ್ಥೆಯಲ್ಲಿ ತಾಯಿ ಪೌರಾಣಿಕ ಕಥೆ, ರಾಮಾಯಣದಂತಹ ಪುಸ್ತಕಗಳನ್ನು ಓದುತ್ತಿದ್ದರು. ಮಗು ಹೊಟ್ಟೆಯಲ್ಲಿ ಇರುವ ಸಂಧರ್ಭದಲ್ಲಿ ತಾಯಿ ಆಲೋಚನೆ ಉತ್ತಮವಾಗಿ ಇರಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ಮ್ನ ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ವಹಿಸಿದ್ದರು. ಮಂಗಳೂರು ತಾಲೂಕು ಪಂಚಾಯತ್, ಅಧ್ಯಕ್ಷ ಮಹಮ್ಮದ್ ಮೋನು, ದ.ಕ ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ (ರಿ) ಜಿಲ್ಲಾಧ್ಯಕ್ಷ ಎ.ವಿ. ಸುರೇಶ್ ರಾವ್ ಕರ್ ಮೋರೆ, ದ.ಕ. ಜಿಲ್ಲೆ ಕನ್ನಡ ಮತ್ತು ಸಂಸ್ಸøತ ಇಲಾಖೆ, ಸಹಾಯಕ ನಿರ್ದೇಶಕ ರಾಜೇಶ್ ಜಿ., ರಾಮಕ್ಷತ್ರೀಯ ಸಂಘ ಅಧ್ಯಕ್ಷ ಜೆ. ಕೆ. ರಾವ್, ಮ.ನ.ಪಾ ಸದಸ್ಯೆ ವೀಣಾ ಮಂಗಳ, ಮ.ನ.ಪಾ ಸದಸ್ಯ ದಿವಾಕರ್ ಪಾಚಿಡೇಶ್ವರ, ಅಧಿಕಾರಿಗಳು ಮತ್ತು ಇತರೆ ಪದಾಧಿಕಾರಿಗಳು ಉಪಸ್ಥಿತರಿದರು.
Comments are closed.