ಕರಾವಳಿ

ಬೈಂದೂರು ಠಾಣೆಗೆ ಸಂಗೀತಾ, ಗಂಗೊಳ್ಳಿಗೆ ಭೀಮಾಶಂಕರ್ ನೂತನ ಪಿಎಸ್ಐ

Pinterest LinkedIn Tumblr

ಕುಂದಾಪುರ: ಕಳೆದೆರಡು ತಿಂಗಳಿನಿಂದ ಖಾಲಿಯಿದ್ದ ಬೈಂದೂರು ಪೊಲೀಸ್ ಠಾಣೆಗೆ ನೂತನ ಪಿಎಸ್ಐ ಆಗಿ ಸದ್ಯ ಪ್ರೊಬೇಶನರಿ ತರಬೇತಿಯಲ್ಲಿರುವ ಸಂಗೀತಾ ಅವರನ್ನು ನೇಮಕಗೊಳಿಸಿ ಆದೇಶಿಸಲಾಗಿದೆ. ಹಾಗೆಯೇ ಗಂಗೊಳ್ಳಿ ಪೊಲೀಸ್ ಠಾಣೆ ಪಿಎಸ್ಐ ವಾಸಪ್ಪ ನಾಯ್ಕ್ ವರ್ಗಾವಣೆಯಿಂದ ಖಾಲಿಯಿದ್ದ ಹುದ್ದೆಗೆ ಭೀಮಾಶಂಕರ್ ಅವರನ್ನು ನಿಯೋಜಿಸಲಾಗಿದೆ.

 

ಇನ್ನು ಅಮಾಸೆಬೈಲು ಪೊಲೀಸ್ ಠಾಣೆಗೆ ಅನೀಲ್ ಕುಮಾರ್ ಅವರನ್ನು ನಿಯೋಜಿಸಲಾಗಿದೆ. ಉಳಿದಂತೆ ಈಗಾಗಾಲೇ ಪ್ರಾಯೋಗಿಕ ತರಬೇತಿ (ಪ್ರೊಬೇಷನರಿ) ಯಲ್ಲಿರುವ ಹಲವು ಪಿಎಸ್ಐ ಅವರಿಗೆ ಉಡುಪಿ, ಉತ್ತರ ಕನ್ನಡ, ದ.ಕ ಹಾಗೂ ಚಿಕ್ಕಮಗಳೂರು ಜಿಲ್ಲೆಯ ವಿವಿದೆಡೆ ಪಿಎಸ್ಐ ಫೋಸ್ಟಿಂಗ್ ನೀಡಿ ವರ್ಗಾವಣೆ ಮಾಡಿ ಪಶ್ಚಿಮ ವಲಯ ಐಜಿಪಿ ಆದೇಶ ಮಾಡಿದ್ದಾರೆ.

ತಕ್ಷಣ ಈ ಆದೇಶ ಜಾರಿಗೆ ಬರುವಂತೆ ಕ್ರಮ‌ವಹಿಸಲು ಆಯಾಯ ಸಂಬಂದಪಟ್ಟ ಪೊಲೀಸ್ ಅಧೀಕ್ಷಕರಿಗೆ ಸೂಚಿಸಲಾಗಿದೆ.

Comments are closed.