ಕರಾವಳಿ

ಶ್ರೀ ಕ್ಷೇತ್ರ ಕುದ್ರೋಳಿ: ವರ್ಷಾವಧಿ ಜಾತ್ರೆ ಹಾಗೂ ಮಹಾಶಿವರಾತ್ರಿ ಮಹೋತ್ಸವ ಸಂಭ್ರಮ

Pinterest LinkedIn Tumblr

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವರ್ಷಾವಧಿ ಜಾತ್ರೆ ಹಾಗೂ ಮಹಾಶಿವರಾತ್ರಿ ಮಹೋತ್ಸವವು ಆರಂಭಗೊಂಡಿದ್ದು, ಮೊದಲ ದಿನ ಬೆಳಗ್ಗೆ 8.30ಕ್ಕೆ ಗುರುಪ್ರಾರ್ಥನೆ, ಪುಣ್ಯಾ ಹ ಹೋಮ, 11.15ಕ್ಕೆ ಧ್ವಜಾರೋಹಣ, ತೈಲಾಭಿಷೇಕ, 12.30ಕ್ಕೆ ಮಹಾಪೂಜೆ, 7 ಗಂ. ಭಜನೆ, 8ಕ್ಕೆ ಮಹಾ ಪೂಜೆ, ಬಲಿ ಉತ್ಸವ, ಶಯನೋತ್ಸವ ನಡೆಯಿತು.

ಸೋಮವಾರ ಬೆಳಗ್ಗೆ 10.30ಕ್ಕೆ ಮಹಾಮೃತ್ಯುಂಜಯ ಹೋಮ, 12.30ಕ್ಕೆ ಪಂಚಾಮೃತಾಭಿಷೇಕ, 7ರಿಂದ ಭಜನೆ, 8ಕ್ಕೆ ಮಹಾಪೂಜೆ, ಬಲಿ ಉತ್ಸವ, ಶಯನೋತ್ಸವ ನಡೆಯಿತು ಫೆ. 21ರಂದು ಮಹಾಶಿವರಾತ್ರಿ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯ ಕ್ರಮಗಳು ಹಾಗೂ ವಿಶೆಷ ಪೂಜಾ ವಿಧಿವಿದಾನಗಳು ಜರಗಲಿದೆ ಎಂದು ಶ್ರೀ ಕ್ಷೇತ್ರದ ಆಡಳಿತಾ ಮಂಡಳಿ ಅಧ್ಯಕ್ಷ ಎಸ್.ಸಾಯಿರಾಮ್ ತಿಳಿಸಿದ್ದಾರೆ.

Comments are closed.