ಉಡುಪಿ: ಒಂದಷ್ಟು ವರ್ಷಗಳ ಕಾಲ ನಿಷೇಧದ ಭೀತಿಯಲ್ಲಿ ಸುದ್ದಿಯಲ್ಲಿದ್ದ ಕರಾವಳಿಯ ಜಾನಪದ ಕ್ರೀಡೆ ಕಂಬಳ ಇದೀಗಾ ಕಂಬಳ ವೀರರಿಂದ ರಾಷ್ಟ್ರೀಯ ಮಾತ್ರವಲ್ಲ ವಿಶ್ವ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಕಳೆದೊಂದು ವಾರದಿಂದವೂ ಕೂಡ ಕಂಬಳದ ಓಟಗಾರರ ದಾಖಲೆಯದ್ದೇ ಸುದ್ದಿ ಕಂಬಳ ಪ್ರಾಮುಖ್ಯತೆಯನ್ನು ಇಮ್ಮಡಿಗೊಳಿಸುತ್ತಿದೆ.
ಹೊಸ ದಾಖಲೆ ಮಾಡಿದ ನಿಶಾಂತ್ ಶೆಟ್ಟಿ…
ದಕ್ಷಿಣ ಕನ್ನಡ ಜಿಲ್ಲೆಯ ಅಶ್ವಥಪುರ ಶ್ರೀನಿವಾಸ ಗೌಡರನ್ನು ಕಂಬಳದ ಉಸೇನ್ ಬೋಲ್ಟ್ ಎನ್ನುವ ದಾಖಲೆ ವೀರನಿಗೆ ಹೋಲಿಸಲಾಗಿದೆ.ಮಂಗಳೂರಿನ ಕಿನ್ನಿಗೋಳಿಯ ಐಕಳ ದಲ್ಲಿ ನಡೆದ ಕಂಬಳದಲ್ಲಿ ಶ್ರೀನಿವಾಸ್ ಗೌಡ ಕಂಬಳದ ಹೊಸದೊಂದು ದಾಖಲೆ ಬರೆದು ತುಂಬಾನೇ ಫೇಮಸ್ ಆಗಿದ್ದರು. ಆದರೇ ಸದ್ಯ ಶ್ರೀನಿವಾಸಗೌಡರ ದಾಖಲೆಯನ್ನು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬಜಗೋಳಿ ನಿಶಾಂತ್ ಶೆಟ್ಟಿ ಮುರಿದು ಹೊಸದೊಂದು ದಾಖಲೆ ಬರೆದಿದ್ದು ಮತ್ತೊಬ್ಬ ವೀರ ಆಗಿ ಮಿಂಚುತ್ತಿದ್ದಾರೆ. 142.5 ಮೀಟರ್ ಕಂಬಳ ಗದ್ದೆಯನ್ನು ಕ್ರಮಿಸಲು ಶ್ರೀನಿವಾಸ ಗೌಡ 13.62 ತೆಗೆದುಕೊಂಡಿದ್ದರು. ಶ್ರೀನಿವಾಸಗೌಡ ಮಾಡಿದ ದಾಖಲೆಯನ್ನು ಒಂದೇ ವಾರದಲ್ಲಿ ನಿಶಾಂತ್ ಶೆಟ್ಟಿ ಮುರಿದಿದ್ದಾರೆ. ಉಡುಪಿ ಕಾರ್ಕಳ ಸಮೀಪದ ವೇಣೂರಿನಲ್ಲಿ ನಡೆದ ಕಂಬಳದಲ್ಲಿ ನಿಶಾಂತ್ ಶೆಟ್ಟಿ 143 ಮೀಟರನ್ನು 13.61 ಸೆಂಕೆಡಲ್ಲಿ ಓಡಿದ್ದಾರೆ.
ಕಳೆದ 8 ವರ್ಷಗಳಿಂದ ಕಂಬಳ ಕ್ರೀಡೆಯಲ್ಲಿ ತೊಡಗಿಸಿಕೊಂಡಿರುವ ನಿಶಾಂತ್ ಪಿಯುಸಿ ಓದಿದ್ದು, ವೃತ್ತಿಯಲ್ಲಿ ಕೃಷಿಕರಾಗಿದ್ದಾರೆ. ಅವರ ತಂದೆ ಅಚ್ಚಣ್ಣ ಶೆಟ್ಟಿ ಕಂಬಳದ ಕೋಣಗಳನ್ನು ಸಾಕುತ್ತಿದ್ದರು. ಆದ್ದರಿಂದ ನಿಶಾಂತ್ ಅವರಿಗೆ ಚಿಕ್ಕ ವಯಸ್ಸಲ್ಲಿಯೇ ಕೋಣಗಳು ಮತ್ತು ಕಂಬಳದ ಬಗ್ಗೆ ಆಸಕ್ತಿಯಿತ್ತು.
ಟ್ರಾಕ್ ನಲ್ಲಿ ಮಾತ್ರ ಸ್ಪರ್ಧೆ..ಆಮೇಲೆ ಅಣ್ಣತಮ್ಮಂದಿರು..
ಮಾಧ್ಯಮಗಳ ಜೊತೆ ಮಾತನಾಡಿದ ನಿಶಾಂತ್ ಶೆಟ್ಟಿ, ಹಿಂದೆಯೂ ಕೂಡ ಉತ್ತಮ ಓಟಗಾರರು ಇದ್ದರು. ಇದೀಗಾ ತಾಂತ್ರಿಕತೆ ಬೆಳೆದು ಓಟದ ವಿಚಾರ ಸುದ್ದಿಯಾಗುತ್ತಿದೆ. ಕೋಣಗಳು ಓಡಿದಾಗ ನಾವು ಬೆನ್ನತ್ತಿ ಓಡುತ್ತೇವೆ. ಕಂಬಳದ ಟ್ರಾಕಿನಲ್ಲಿ ಮಾತ್ರವೇ ನಮ್ಮದು ಸ್ಪರ್ಧೆ ಹೊರಗೆ ಬಂದ ಮೇಲೆ ನಾವು ಅಣ್ಣ ತಮ್ಮಂದಿರು. ಕಂಬಳದಲ್ಲಿ ಓಡುವ ನಾವು ಆಹಾರ ಪದ್ಧತಿಯನ್ನು ರೂಡಿಸಿಕೊಳ್ಳಬೇಕಿದೆ. ದೇಹವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ನಡೆಯಬೇಕು..ಓಡಬೇಕು….ದುಶ್ಚಟದಿಂದ ದೂರವಿರಬೇಕು. ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉತ್ತಮ ಓಟಗಾರರಿದ್ದು ಕಂಬಳದ ಓಟಗಾರರಿಗೆ ಕರ್ನಾಟಕ ಸರ್ಕಾರ ವಿಮಾ ಸೌಲಭ್ಯವನ್ನು ಕೊಡಬೇಕು ಎಂದರು.
Comments are closed.