ಕರಾವಳಿ

ಕೃಷಿಕರ ಸಮಸ್ಯೆ ಕೇವಲ ಕೃಷಿಕರ ಅಥವಾ ಗ್ರಾಮೀಣ ಸಮಸ್ಯೆಯಾಗಿ ಉಳಿದಿಲ – : ಹಿರಿಯ ಪತ್ರಕರ್ತ ಪಿ. ಸಾಯಿನಾಥ್

Pinterest LinkedIn Tumblr

ಮಂಗಳೂರು : ದೇಶದಲ್ಲಿ ಕೃಷಿಕರು ಎದುರಿಸುವ ಸಮಸ್ಯೆ, ಕೇವಲ ಕೃಷಿಕರ ಅಥವಾ ಗ್ರಾಮೀಣ ಪ್ರದೇಶದ ಸಮಸ್ಯೆಯಾಗಿ ಉಳಿದಿಲ್ಲ.
ಇಂದು ಇಡೀ ದೇಶವೇ ವಿವಿಧ ರೀತಿಯ ಬಿಕ್ಕಟ್ಟಿಗೆ ಒಳಗಾಗಿದೆ ಎಂದು ಹಿರಿಯ ಪತ್ರಕರ್ತ ಪಿ. ಸಾಯಿನಾಥ್ ನುಡಿದಿದ್ದಾರೆ.

ಸಂತ ಅಲೋಶಿಯಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದಿಂದ ಆಯೋಜಿಸಲಾದ 10ನೇ ವರ್ಷದ ಮಾಧ್ಯಮ ಉತ್ಸವ ಮೀಡಿಯಾ ಮಂಥನ್- 2020 ರ ವೇದಿಕೆಯಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

ಉದ್ಘಾಟನಾ ಸಮಾರಂಭ ದಲ್ಲಿ ಪಿ ಸಾಯಿನಾಥ್, ಉದಾರೀಕರಣದ ನಂತರದ ದಿನಗಳು ಭಾರತೀಯ ಪ್ರಜಾಪ್ರಭುತ್ವದ ಮೇಲೆ ಹೇಗೆ ಪರಿಣಾಮ ಬೀರಿವೆ ಎಂಬುದರ ಕುರಿತು ಸಂವಾದ ನಡಸಿದರು. ರಾಜಕೀಯದಲ್ಲಿ ಪ್ರಜಾಪ್ರಭುತ್ವವಿದೆ. ಆದರೆ ಸಾಮಾಜಿಕ, ಆರ್ಥಿಕ ರೀತಿಯಲ್ಲಿ ನೋಡಿದರೆ ಭಾರತ ದೇಶ ಸಮಾನತೆ ಹಾಗೂ ಪ್ರಜಾಪ್ರಭುತ್ವ ಎರಡನ್ನು ಕಳೆದುಕೊಂಡಿದೆ, ಎಂದರು.

ಮಾಧ್ಯಮದ ಬಿಕ್ಕಟ್ಟಿನ ಕುರಿತು ಮಾತನಾಡಿದ ಅವರು, ಇಂಟರ್ನೆಟ್ ಹಾಗೂ ಮಾಧ್ಯಮಗಳು ಏಕಸ್ವಾಮ್ಯದ ಕಡೆಗೆ ವಾಲಿದ್ದರಿಂದ ಇಂದು ಅವುಗಳಿಂದ ಪ್ರಜಾಪ್ರಭುತ್ವಕ್ಕೆಹೆಚ್ಚಿನ ಮೌಲ್ಯ ದೊರಕುತ್ತದೆ ಎಂಬುದು ಸುಳ್ಳು ವಾದ. ಮಧ್ಯಮಗಳ ಏಕಸ್ವಾಮ್ಯ ಸರಿಯಾಗದೆ ಅಭಿವ್ಯಕ್ತಿ ಸ್ವಾತಂತ್ರ್ಯ ನಿಜಾರ್ಥದಲ್ಲಿ ಸಾಧ್ಯವಿಲ್ಲ ಎಂದರು.

ದೇಶವು ಹಲವಾರು ಕ್ಷೇತ್ರಗಳಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದು, ಅದಕ್ಕೆ ಕಾರಣ ಹಾಗೂ ಪರಿಹಾರಗಳ ಕುರಿತು ಪಿ. ಸಯಿನಾಥ್ ಮಾತನಾಡಿದರು. ಶಿಕ್ಷಣ, ಆರ್ಥಿಕ, ಹಾಗೂ ಸಾಮಾಜಿಕ ಸಮಸ್ಯೆಗಳ ಬಗ್ಗೆ ಮಾಹಿತಿಗಳನ್ನುನೀಡುವುದರ ಜೊತೆಗೆ ಭಾರತೀಯ ಇತಿಹಾಸವನ್ನು ಯುವಜನರಿಗೆ ತಲುಪಿಸುವುದು ಇಂದಿನ ಅಗತ್ಯ ಎಂದರು.

ಕಾರ್ಯಕ್ರಮದಲ್ಲಿ ಸಂತ ಅಲೋಶಿಯಸ್ ಕಾಲೇಜಿನ ವರಿಷ್ಟರಾದ ಫಾ. ಡಯನೀಶಿಯಸ್ ವಾಸ್, ಪ್ರಾಶುಂಪಾಲರಾದ
ಡಾ. ಫಾ. ಪ್ರವೀಣ್ ಮಾರ್ಟಿಸ್ ಎಸ್ ಜೆ ಉಪಸ್ಥಿತರಿದ್ದರು.

ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಮುಖ್ಯಸ್ಥರಾದ ಡಾ. ಫಾ. ಮೆಲ್ವಿನ್ ಪಿಂಟೋ ಸ್ವಾಗತಿಸಿ, ವಿದ್ಯಾರ್ಥಿ ಪ್ರತಿನಿಧಿ ವೈಶಾಲಿ ಪುತ್ರನ್ ವಂದಿಸಿದರು.ಅಪರಾಹ್ನದ ಬಳಿಕ ಫೋಟೋಗ್ರಫಿ, ಆರ್ ಜೆ ಹಂಟ್ ಹಾಗೂ ಪೀಸ್ ಟು ಕ್ಯಾಮರಾ ಸ್ಪರ್ಧೆಗಳನ್ನು
ಆಯೋಜಿಸಲಾಗಿತ್ತು.

Comments are closed.