ಕರಾವಳಿ

ಕಾರ್ಕಳದಲ್ಲಿ ಭೀಕರ ಅಪಘಾತ: ಬಂಡೆಗೆ ಡಿಕ್ಕಿಯಾದ ಟೂರಿಸ್ಟ್ ಬಸ್, 9 ಮಂದಿ ದಾರುಣ ಸಾವು(updated)

Pinterest LinkedIn Tumblr

ಉಡುಪಿ: ಮೈಸೂರಿನಿಂದ ಪ್ರವಾಸಿಗರನ್ನು ಕರೆತರುತ್ತಿದ್ದ ಬಸ್ಸೊಂದು ರಸ್ತೆ ಸಮೀಪದ ಬಂಡೆಗೆ ಢಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಭೀಕರ ಅಪಘಾತದಲ್ಲಿ 9 ಮಂದಿ ಮೃತಪಟ್ಟು ಹಲವರು ಗಾಯಗೊಂಡಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳದ ಮಾಳ ಸಮೀಪದ ಮುಳ್ಳೂರು ಘಾಟ್ಎಂಬಲ್ಲಿ ಶನಿವಾರ ಸಂಜೆ ನಡೆದಿದೆ.

ಮೈಸೂರಿನಿಂದ ಖಾಸಗಿ ಕಂಪೆನಿಯು ಈ ಪ್ರವಾಸವನ್ನು ಆಯೋಜಿಸಿತ್ತು ಎಂದು ಹೇಳಲಾಗಿದ್ದು, ಬಸ್ ಮುಳ್ನೂರ್ ಘಾಟ್ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಬಂಡೆಗೆ ಢಿಕ್ಕಿ ಹೊಡೆದಿದೆ. ಪರಿಣಾಮ 7 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನಿಬ್ಬರು ಆಸ್ಪತ್ರೆಗೆ ಸಾಗಿಸುವಾಗ ಕೊನೆಯುಸಿರೆಳೆದಿದ್ದಾರೆ. ಘಟನೆಯಲ್ಲಿ 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಬಸ್ಸಿನಲ್ಲಿ 35 ಮಂದಿ ಇದ್ದರೆನ್ನಾಲಾಗಿದೆ.

ಮೃತಪಟ್ಟವರಲ್ಲಿ 6 ಪುರುಷರು ಮತ್ತು 3 ಮಹಿಳೆಯರು ಎನ್ನಲಾಗಿದ್ದು ಘಟನಾ ಸ್ಥಳಕ್ಕೆ ‌ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Updated:

ಮೈಸೂರಿನಿಂದ ಕಾರ್ಕಳ ಮಾರ್ಗವಾಗಿ ಸಾಗುತ್ತಿದ್ದ ಪ್ರವಾಸಿ ಬಸ್ ಅಪಘಾತದಲ್ಲಿ 9 ಮಂದಿ ಸಾವನ್ನಪ್ಪಿದ್ದು 31 ಮಂದಿ ಗಾಯಗೊಂಡಿದ್ದಾರೆಂದು ಉಡುಪಿ ಎಸ್ಪಿ ವಿಷ್ಣುವರ್ಧನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ರಾಧಾ ರವಿ, ಯೋಗೇಂದ್ರ, ಪ್ರೀತಮ್ ಗೌಡ, ಬಸವರಾಜ್, ಅನಘ್ಞ, ಶಾರುಲ್, ರಂಜಿತಾ ಸೇರಿದಂತೆ ಬಸ್ ಚಾಲಕ ಹಾಗೂ ಕ್ಲೀನರ್ ಸಾವನ್ನಪ್ಪಿದ್ದಾರೆ.

Comments are closed.