ಕರಾವಳಿ

ಸರ್ಕಾರಿ ಕಾಲೇಜುಗಳ ಅಭಿವೃಧ್ಧಿಗೆ ಸರ್ಕಾರ ನಿರಂತರ ಶ್ರಮವಹಿಸುತ್ತಿದೆ : ಉಪಮುಖ್ಯಮಂತ್ರಿ ಸಿ.ಎನ್ ಅಶ್ವಥ ನಾರಾಯಣ

Pinterest LinkedIn Tumblr

ಮಂಗಳೂರು : ಡಾ.ಪಿ.ದಯಾನಂದ ಪೈ-ಪಿ.ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು, ರಥಬೀದಿ ಇಲ್ಲಿ ಸರ್ಕಾರದಿಂದ ಕಾಲೇಜಿಗೆ ಮಂಜೂರಾದ 5.10 ಕೋಟಿ ಅನುದಾನದ ನೂತನ ಕಟ್ಟಡದ ಗುದ್ದಲಿ ಪೂಜೆ ಹಾಗು ಶಂಕುಸ್ಥಾಪನಾ ಕಾರ್ಯಕ್ರಮವು ಇತ್ತೀಚಿಗೆ ಕಾಲೇಜಿನಲ್ಲಿ ನೆರವೇರಿತು.

ಕರ್ನಾಟಕ ಸರಕಾರದ ಉಪಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿವ ಸಿ.ಎನ್ ಅಶ್ವಥ ನಾರಾಯಣ ನೂತನ ಕಟ್ಟಡದ ಶಂಕು ಸ್ಥಾಪನೆಯನ್ನು ನಡೆಸಿಕೊಟ್ಟರು. ಸರ್ಕಾರವು ವಿದ್ಯಾರ್ಥಿಗಳಿಗೆ ಸೂಕ್ತ ಶಿಕ್ಷಣ ಕಲ್ಪಿಸಿ ಕೊಡುವಲ್ಲಿ ಹಾಗೂ ಅಗತ್ಯ ಮೂಲಭೂತ ಸೌಕರ್ಯಗಳಿಗಾಗಿ ಹೆಚ್ಚಿನ ಅನುದಾನವನ್ನು ವಿನಿಯೋಗ ಮಾಡುತ್ತಿದ್ದು, ಸರ್ಕಾರಿ ಕಾಲೇಜುಗಳ ಅಭಿವೃಧ್ಧಿಗೆ ಶ್ರಮವಹಿಸುತ್ತಿರುವುದಾಗಿ ಹಾಗೂ ವಿದ್ಯಾರ್ಥಿಗಳ ಕಲಿಕೆಗೆ ಲ್ಯಾಪ್‍ಟಾಪ್‍ಗಳನ್ನು ನೀಡುತ್ತಿರುವುದಾಗಿ ತಿಳಿಸಿದರು.

ಮಂಗಳೂರಿನ ರಥಬೀದಿ ಸರ್ಕಾರಿ ಕಾಲೇಜಿಗೆ ಹೊಸ ಕಟ್ಟಡವನ್ನು ನಿರ್ಮಿಸಲು ಅನುದಾನ ಒದಗಿಸುವಲ್ಲಿ ಕಾಲೇಜಿನ ಅಭಿವೃಧ್ಧಿ ಪ್ರಮುಖರಾದ ಮಂಗಳೂರಿನ ಯುವ ಶಾಸಕ ವೇದವ್ಯಾಸ ಕಾಮತ್ ಇವರ ಕೆಲಸವನ್ನು ಶ್ಲಾಘಿಸಿದರು.

ಸದ್ರಿ ಕಾಲೇಜನ್ನು ಮೂರು ಯೋಜನೆಯಡಿ ಡಾ.ಪಿ.ದಯಾನಂದ ಪೈ ಅವರ ಸಹಕಾರದಲ್ಲಿ ಅಭಿವೃಧ್ಧಿ ಮಾಡಿರುವ ಬಗ್ಗೆ, ಕಾಲೇಜಿನ ಬಿಸಿಯೂಟದ, ಯಕ್ಷಗಾನ ಕಲಿಕಾಕೇಂದ್ರ, ಕೃಷಿ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಮಂಗಳೂರು ವಲಯದ ಪ್ರಾದೇಶಿಕ ಜಂಟಿ ನಿರ್ದೇಶಕ ಡಾ.ಅಪ್ಪಾಜಿಗೌಡ, ಕಾಲೇಜಿಗೆ ಸ್ಥಳ ನೀಡಿರುವ ಸಾಹುಕಾರ ಬಾಬಾ ಪೈ ಅವರ ಮೊಮ್ಮಗ ಕಿರಣ್ ಪೈ, ನೂತನ ಕಾರ್ಪೋರೇಟರ್ ಜಯಶ್ರೀ ಕುಡ್ವ, ಪೂರ್ಣಿಮ ಎಂ, ಸ್ಥಳೀಯ ನಾಯಕರು ರಮೇಶ್ ಕಂಡೆಟ್ಟು, ಭಾಸ್ಕರ ಚಂದ್ರ ಶೆಟ್ಟಿ, ಸಂಜೀವ, ಮುರಳೀಧರ್ ನಾಯಕ್, ಜನಾರ್ಧನ್ ಕುಡ್ವ, ಹರಿಪ್ರಸಾದ್, ರವೀಶ ಹೆಗ್ಡೆ, ವೈಕುಂಠ ಭಕ್ತ ಹಾಗೂ ಇತರೆ ಪ್ರಮುಖರು ಉಪಸ್ಥಿತರಿದ್ದರು.

ಪ್ರಾಂಶುಪಾಲ ರಾಜಶೇಖರ್ ಹೆಬ್ಬಾರ್ ಸಿ ಆರಂಭದಲ್ಲಿ ಅತಿಥಿಗಳನ್ನು ಸ್ವಾಗತಿಸಿ, ಡಾ.ಶಿವರಾಮ್ ಪಿ ಅವರು ವಂದಿಸಿದರು.

Comments are closed.