ಕರಾವಳಿ

ಮನುಷ್ಯನಲ್ಲಿ ಅಹಂಕಾರ ಸ್ವಾಭಾವಿಕ ಆದರೆ ಅದು ದುರಂಕಾರದ ರೀತಿಯಲ್ಲಿ ಪರಿವರ್ತನೆಗೊಳ್ಳದಿರಲಿ : ಧರ್ಮದರ್ಶಿ ಕೆ ಅನಂತಪದ್ಮನಾಭ ಐತಾಳ್

Pinterest LinkedIn Tumblr

ಕೋಟ : ಸಮುದಾಯದ ಸಂಘಟನೆಗಳು ಸಮುದಾಯದ ಅಭಿವೃದ್ಧಿಗೆ ಪ್ರೇರಕಶಕ್ತಿಯಾಗಿ ಕಾರ್ಯನಿರ್ವಹಿಸಬೇಕು ಈ ನಿಟ್ಟಿನಲ್ಲಿ ಕೂಟ ಮಹಾಜಗತ್ತಿನ ಯುವ ವೇದಿಕೆ, ಸಮುದಾಯದ ಬಗ್ಗೆ ಸಾಕಷ್ಟು ಕೆಲಸ ನಿರ್ವಹಿಸುತ್ತಿದೆ .ಇದು ಶಾಘನಾರ್ಹ ಕಾರ್ಯ ಎಂದು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳದ ಆಡಳಿತ ಧರ್ಮದರ್ಶಿ ಕೆ .ಅನಂತಪದ್ಮನಾಭ ಐತಾಳ್ ಹೇಳಿದ್ದಾರೆ.

ಸಾಲಿಗ್ರಾಮ ಹಬ್ಬ 2020 ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯುವ ವೇದಿಕೆಯ ಆಶ್ರಯದಲ್ಲಿ ನಡೆದ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಯುವ ವೇದಿಕೆ ಸಮುದಾಯಕ್ಕೆ ಸಮಿತವಾಗದೆ ಕೂಟ ಮಹಾಜಗತ್ತಿನ ಅದಿದೇವ ಗುರುನರಸಿಂಹ ದೇವಳದ ಕೈಂಕರ್ಯದಲ್ಲಿ ನಿರಂತರವಾಗಿ ತೊಡಗಿಕೊಳ್ಳುತ್ತಿದೆ.

ಸಾಲಿಗ್ರಾಮ ದೇವಸ್ಥಾನ ಯಾವುದೇ ಸಮುದಾಯಕ್ಕೆ ಸಮಿತಗೊಳ್ಳದೆ ಎಲ್ಲಾ ಜಾತಿ ಧರ್ಮದವರನ್ನು ವಿಶೇಷವಾಗಿ ಬರಮಾಡಿಕೊಳ್ಳುತ್ತಿದೆ.ಇಲ್ಲಿನ ಅಭಿವೃದ್ಧಿ ಕಾರ್ಯಗಳು ಈ ಐದು ವರ್ಷದಲ್ಲಿ ಬಹಳಷ್ಟು ನಡೆದಿದೆ ಎಂಬುವುದು ಇಲ್ಲಿ ಬರುವ ಭಕ್ತರ ಆಶಯವಾಗಿದೆ.ಇದಕ್ಕೆ ಶ್ರೀ ದೇವರ ಅನುಗ್ರಹ ಹಾಗೂ ಹಿಂದಿನ ಆಡಳಿತ ಮಂಡಳಿಗಳ ಸಹಕಾರವು ಸಿಕ್ಕಿದೆ.

ಒಂದು ಒಳ್ಳೆಯ ಕಾರ್ಯದ ಹಿಂದೆ ಕೆಲವೆ ಶಕ್ತಿಗಳ ವಿರೋಧವು ಇರುತ್ತದೆ. ಅದಕ್ಕೆ ಅಂಜದೆ ಕಾರ್ಯಾಚರಿಸಬೇಕು ಇದರಿಂದ ಇತರ ಒಳ್ಳೆಯ ಕಾರ್ಯಕ್ಕೂ ಪ್ರೇರಣೆ ಸಿಗುವಂತಾಗುತ್ತದೆ.ಮನುಷ್ಯನಲ್ಲಿ ಅಹಂಕಾರ ಸ್ವಾಭಾವಿಕ ಅದು ದುರಂಕಾರದ ರೀತಿಯಲ್ಲಿ ಪರಿವರ್ತನೆ ಗೊಳ್ಳಬಾರದು, ದೇವರಿಗಿಂತ ದೊಡ್ಡವನಾಗಲು ಮನುಷ್ಯನಿಂದ ಸಾಧ್ಯವಿಲ್ಲ ಶಾಂತಿ, ಸಹನೆ ,ಸಂಸ್ಕಾರದಿಂದ ಬದುಕಲು ದೇವರ ಆರಾಧನೆ ನಿತ್ಯ ನಿರಂತವಾಗಿ ಮಾಡಬೇಕು.ಶ್ರೀ ದೇವರ ಶಕ್ತಿ ಅಪಾರವಾದದ್ದು ಅದು ವಿಶ್ವವಾಪಿ ಪಸರಿಸಿಕೊಂಡಿದೆ ಎಂದು ತಮ್ಮ ಅಭಿಮತ ವ್ಯಕ್ತಪಡಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಕೂಟಬ್ರಾಹ್ಮಣ ಮಿತ್ರಮಂಡಳಿ ಬೆಂಗಳೂರು ಇದರ ಅಧ್ಯಕ್ಷ ಡಾ.ಪಿ ವಿಷ್ಣುಮೂರ್ತಿ ಐತಾಳ್ ವಹಿಸಿದರು.

ಶುಭಾಶಂಸನೆಯನ್ನು ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸಂಸ್ಥೆ ಬೆಂಗಳೂರು ಅಧ್ಯಕ್ಷ ಕೆ.ಶ್ರೀಧರ ಮಯ್ಯ ಗೈದರು.
ಕೂಟಮಹಾಜಗತ್ತು ಕೇಂದ್ರ ಸಂಸ್ಥೆ ಸಾಲಿಗ್ರಾಮ ಉಪಾಧ್ಯಕ್ಷ ಕೆ.ತಾರಾನಾಥ ಹೊಳ್ಳ,ಕೂಟ ಮಹಾಜಗತ್ತು ಅಂಗಸಂಸ್ಥೆಯ ಪ್ರಧಾನಕಾರ್ಯದರ್ಶಿ ಪಿ.ಮಂಜುನಾಥ ಉಪಾಧ್ಯ, ಕೂಟಮಹಾಜಗತ್ತು ಅಂಗಸಂಸ್ಥೆ ಸಾಲಿಗ್ರಾಮ ಅಧ್ಯಕ್ಷ ಶ್ರೀಪತಿ ಅಧಿಕಾರಿ,ಯುವ ವೇದಿಕೆಯ ಅಧ್ಯಕ್ಷ ಪಿ.ವೈ ಕೃಷ್ಣಪ್ರಸಾದ್ ಹೇರ್ಳೆ,ನಿಯೋಜಿತ ಅಧ್ಯಕ್ಷ ನಾಗರಾಜ ಐತಾಳ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಮುದಾಯದ ಸಾಧಕರಾದ ನೃತ್ಯ ವಿದುಷಿಯರಾದ ಕೆ.ಭೂಮಿಕಾ ಟಿ.ಹೊಳ್ಳ,ಅಮೃತಾ ಉಪಾಧ್ಯ,ಕರಾವಳಿ ಸ್ಟಾರ್ ರಜತ್ ಮಯ್ಯ ಇವರುಗಳನ್ನು ಸನ್ಮಾನಿಸಲಾಯಿತು.

ನಂತರ ಯುವ ವೇದಿಕೆಯ ಅಧಿಕಾರ ಹಸ್ತಾಂತರ ನಡೆಸಲಾಯಿತು. ಯುವವೇದಿಕೆಯ ವೆಂಕಟೇಶ್ ಐತಾಳ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ಶಶಿಧರ ಮಯ್ಯ ನಿರೂಪಿಸಿದರು.

ಸಾಲಿಗ್ರಾಮ ಹಬ್ಬ 2020 ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯುವ ವೇದಿಕೆಯ ಆಶ್ರಯದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಸಮುದಾಯದ ಸಾಧಕರಾದ ನೃತ್ಯ ವಿದುಷಿಯರಾದ ಕೆ.ಭೂಮಿಕಾ ಟಿ.ಹೊಳ್ಳ,ಅಮೃತಾ ಉಪಾಧ್ಯ,ಕರಾವಳಿ ಸ್ಟಾರ್ ರಜತ್ ಮಯ್ಯ ಇವರುಗಳನ್ನು ಸನ್ಮಾನಿಸಲಾಯಿತು. ಶ್ರೀ ಗುರುನರಸಿಂಹ ದೇವಳದ ಆಡಳಿತ ಧರ್ಮದರ್ಶಿ ಕೆ .ಅನಂತಪದ್ಮನಾಭ ಐತಾಳ್, ದಕ್ಷಿಣ ಕನ್ನಡ ಕೂಟಬ್ರಾಹ್ಮಣ ಮಿತ್ರಮಂಡಳಿ ಬೆಂಗಳೂರು ಇದರ ಅಧ್ಯಕ್ಷ ಡಾ.ಪಿ ವಿಷ್ಣುಮೂರ್ತಿ ಐತಾಳ್, ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸಂಸ್ಥೆ ಬೆಂಗಳೂರು ಅಧ್ಯಕ್ಷ ಕೆ.ಶ್ರೀಧರ ಮಯ್ಯ ಉಪಸ್ಥಿತರಿದ್ದರು.

Comments are closed.