ಕರ್ನಾಟಕ

ಟ್ರಾಫಿಕ್ ದಂಡ ಮತ್ತಷ್ಟು ಏರಿಕೆ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರ

Pinterest LinkedIn Tumblr

ಬೆಂಗಳೂರು: ರಸ್ತೆ ನಿಯಮ ಉಲ್ಲಂಘನೆ ಮಾಡುವವರ ಮೇಲೆ ಹೇರಲಾಗುವ ದಂಡವನ್ನು ಮತ್ತಷ್ಟು ಏರಿಕೆ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ಸಚಿವ ಲಕ್ಷ್ಮಣ್ ಸವದಿಯವರು, ರಸ್ತೆ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ದಂಡ ಹೇರಲು ಕೇಂದ್ರ ಸರ್ಕಾರ ಈಗಾಗಲೇ ಕಾನೂನನ್ನು ಜಾರಿಗೆ ತಂದಿದೆ. ಈ ಹಿಂದಿನ ಬಜೆಟ್ ಅಧಿವೇಶನದಲ್ಲಿ ಈ ಬಗ್ಗೆ ನಾವು ಈಗಾಗಲೇ ಚರ್ಚೆ ನಡೆಸಿದ್ದೇವೆ. ರಾಜ್ಯದಲ್ಲೂ ಕಾನೂನು ಜಾರಿಗೆ ಚಿಂತನೆ ನಡೆಸಿದ್ದೇವೆ. ಸಂಚಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳು ನಡೆಯಲಿವೆ. ದಂಡವನ್ನು ಏರಿಕೆ ಮಾಡುವ ಮೂಲಕ ಅಪಘಾತ ಹಾಗೂ ಅಪರಾಧ ಕೃತ್ಯಗಳನ್ನು ತಡೆಯುವ ಪ್ರಯ್ನ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಇದೇ ವೇಳೆ ಎಲೆಕ್ಟ್ರಿಕ್ ಬಸ್ ಗಳ ಕುರಿತು ಮಾತನಾಡಿದ ಅವರು, ಈ ಬಗ್ಗೆ ಸಾಕಷ್ಟು ಕಂಪನಿಗಳು ಸರ್ಕಾರದೊಂದಿಗೆ ಚರ್ಚೆ ನಡೆಸಿವೆ. ಬಸ್ ಗಳಿಗೆ ಹೂಡಿಕೆ ಮಾಡಲು ಹಾಗೂ ಅವುಗಳ ನಿರ್ವಹಣೆಗೆ ಮಾತುಕತೆ ನಡೆಸುತ್ತಿದೆ. ಸರ್ಕಾರಕ್ಕೆ ಶೇ.40ರಷ್ಟು ಲಾಭ ನೀಡಲು ಕಂಪನಿಗಳು ಒಪ್ಪಿಕೊಂಡಿವೆ. ಈ ಬಗ್ಗೆ ಸರ್ಕಾರ ಪರಿಶೀಲನೆ ನಡೆಸಿ, ಮುನ್ನಡೆಯಲಿದೆ. ಶೀಘ್ಲದಲ್ಲಿಯೇ ಕೆಎಸ್ಆರ್’ಟಿಸಿಗೆ 1,200 ಬಸ್ ಗಳ ಸೇರ್ಪಡೆಗೆ ಚಿಂತನೆ ನಡೆದಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ವಾಹನ ನೋಂದಣಿ ತೆರಿಗೆ ಕುರಿತು ಮಾತನಾಡಿದ ಅವರು, ನಮ್ಮ ಗುರಿ ರೂ.7,000 ಕೋಟಿಯಾಗಿತ್ತು. ಆದರೆ, ಈ ಬಾರಿ ರೂ.1,200ಕೋಟಿಯಷ್ಟೇ ಬಂದಿದೆ. ಅಕ್ಟೋಬರ್ ಹಾಗೂ ಡಿಸೆಂಬರ್ 2019ರಲ್ಲಿ ವಾಹನಗಳ ನೋಂದಣಿ ಸಂಖ್ಯೆ ಕಡಿಮೆಯಾಗಿವೆ. ವೋಲ್ವೇ ಬಸ್ ಗಳ ನಿರ್ವಹಣೆ ದುಬಾರಿಯಾಗಿದ್ದು, ಇದೀಗ ಸರ್ಕಾರ ಲೇಲ್ಯಾಂಡ್ ಹಾಗ ಟಾಟಾ ಬಸ್ ಗಳನ್ನು ತರಲು ನಿರ್ಧರಿಸಿದೆ ಎಂದಿದ್ದಾರೆ.

Comments are closed.