ಕರಾವಳಿ

ಕೊರೋನಾ ವೈರಸ್ ಶಂಕೆ; ಉಡುಪಿ ಜಿಲ್ಲಾಸ್ಪತ್ರೆಯಯಲ್ಲಿ ನಾಲ್ವರಿಗೆ ಚಿಕಿತ್ಸೆ

Pinterest LinkedIn Tumblr

ಉಡುಪಿ: ಇತ್ತೀಚೆಗೆ ಚೀನ ಪ್ರವಾಸಕ್ಕೆ ತೆರಳಿ 15 ದಿನಗಳ ಹಿಂದೆ ದೇಶಕ್ಕೆ ಮರಳಿದ ಜಿಲ್ಲೆಯ ಒಟ್ಟು ನಾಲ್ವರನ್ನು ಶಂಕಾಸ್ಪದ ಕೊರೊನಾ ವೈರಸ್‌ಗೆ ಪರೀಕ್ಷೆಗೊಳಪಡಿಸಿ ಜಿಲ್ಲಾಸ್ಪತ್ರೆಯ ಪ್ರತ್ಯೇಕ ವಾರ್ಡಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇವರಲ್ಲಿ ಒಬ್ಬರು ಕಾಪು ತಾಲೂಕಿನವರು. ಮತ್ತೆ ಮೂವರು ಬ್ರಹ್ಮಾವರದ ದಂಪತಿ ಮತ್ತು ಮಗು.

ಇವರೆಲ್ಲರು ಶೀತ ಹಾಗೂ ಗಂಟಲು ನೋವಿನ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ಆಸ್ಪತ್ರೆಗೆ ಬಂದಿದ್ದರು. ಪತಿಗೆ ಶೀತ, ಕೆಮ್ಮು ಇದ್ದರೆ ಮಗುವಿಗೆ ಲಘು ಶೀತ ವಿದೆ. ಪತ್ನಿ ಆರೋಗ್ಯವಾಗಿದ್ದಾರೆ.ಅವರ ರಕ್ತ, ಗಂಟಲ ದ್ರವವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

Comments are closed.