ಕರಾವಳಿ

ರಚನಾತ್ಮಕ ಸುಧಾರಣೆಗಳನ್ನೊಳಗೊಂಡಿರುವ ಶ್ಲಾಘನೀಯ ಬಜೆಟ್ ; ಕ್ಯಾಪ್ಟನ್ ಕಾರ್ಣಿಕ್

Pinterest LinkedIn Tumblr

ಮಂಗಳೂರು : ಜಾಗತಿಕ ಅರ್ಥಿಕ ಹಿನ್ನಡೆಯ ದುಷ್ಪರಿಣಾಮಗಳು ಭಾರತದ ಅರ್ಥಿಕ ವ್ಯವಸ್ಥೆಯ ಮೇಲೆ ಕಾರ್ಮೊಡದಂತೆ ಕವಿದಿರು ವಾಗ ದೇಶದ ಮಹಿಳಾ ಅರ್ಥಿಕ ಮಂತ್ರಿ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರ ದಾಖಲೆ ಅವಧಿಯ ಬಜೆಟ್ ಭಾಷಣ ರಾಷ್ಟ್ರದ ಅರ್ಥಿಕ ಸ್ಥಿತಿಗತಿಯ ಮೇಲೆ ದೀರ್ಘ ಪರಿಣಾಮ ಬೀರುವ ರಚನಾತ್ಮಕ ಸುಧಾರಣೆಗಳನ್ನೊಳಗೊಂಡಿರುವ ಶ್ಲಾಘನೀಯ ಬಜೆಟ್ ಎಂದು ವಿಧಾನ ಪರಿಷತ್‌ನ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹರ್ಷ ವ್ಯಕ್ತ ಪಡಿಸಿದ್ದಾರೆ.

ನೇರ ತೆರಿಗೆಯಲ್ಲಿ ಅದ್ಭುತ ಸುಧಾರಣೆಯೊಂದಿಗೆ ಸುಮಾರು 70ರಷ್ಟು ತೆರಿಗೆ ಕಡಿತಗಳನ್ನು ನಿವಾರಣೆ ಮಾಡುವುದರ ಮೂಲಕ ಸರಳಗೊಳಿಸಿರುವುದಲ್ಲದೆ ಆಸಕ್ತಿ ಇದ್ದಲ್ಲಿ ಹಳೆಯ ಪದ್ದತಿಯನ್ನೂ ಮುಂದುವರಿಸಲು ಅವಕಾಶ ನೀಡಿರುವ ಬಜೆಟ್. ಮುಂದಿನ ದಿ‌ಅನಗಳಲ್ಲಿ ಇನ್ನಷ್ಟುಸರಳಿಕರಣವನ್ನು ನೀರಿಕ್ಷಿಸಬುದಾಗಿದೆ.

ಕರ್ನಾಟಕಕ್ಕೆ ಅದರಲ್ಲೂ ವಿಶೇಷವಾಗಿ ಬೆಂಗಳೂರಿನ ಸಬರ್ ಬನ್ ರೈಲ್ವೆಗೆ ರೂ. 18,600 ಕೋಟಿ ನೀಡಿ ಪ್ರೋತ್ಸಾಹ ನೀಡಿದ ಬಜೆಟ್.

ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸ್ಥಳೀಯ ಆಡಳಿತ ವ್ಯವಸ್ಥೆಯಲ್ಲಿ ಒಂದು ವರ್ಷದ ಇಂಟರ್ನ್‌ಶಿಪ್‌ನ ಕಲ್ಪನೆ ಯೋಜನೆಗಳ ಅನುಷ್ಠಾನದಲ್ಲಿ ಗುಣಮಟ್ಟವನ್ನು ಮತ್ತು ಪಾರದರ್ಶಕತೆಯನ್ನು ತರುವುದರೊಂದಿಗೆ ವಿದ್ಯಾರ್ಥಿಗಳಿಗೆ ಆಡಳಿತ ವ್ಯವಸ್ಥೆಯ ಬಗ್ಗೆ ಅನುಭವ ನೀಡುವ ಸ್ವಾಗತಾರ್ಹ ನಡೆ.

ಕೃಷಿ ಉಡಾನ್, ಕೃಷಿ ರೈಲ್ ದೇಶದ ರೈತರನ್ನು ಮತ್ತು ಕೃಷಿ ಉತ್ಪಾದನೆಗಳಿಗೆ ದೇಶಿಯ ಮಾರುಕಟ್ಟೆ ಒದಗಿಸುವ ಒಂದು ಅದ್ಭುತ ಅಲೋಚನೆಯ ಬಜೆಟ್.

ಶಿಕ್ಷಣ ಕ್ಷೇತ್ರಕ್ಕೆ ರೂ. 99,300 ಕೋಟಿ, ಪರಿಶಿಷ್ಟ ಜಾತಿ/ಪಂಗಡದವರಿಗೆ ರೂ. 1,38,000 ಕೋಟಿ, ಒಳ ಚರಂಡಿ ಸ್ವಚ್ಛತೆಯ ಕೆಲಸಗಳಿಗೆ ಮಾನವನ ಬಳಕೆ ಸಂಪೂರ್ಣ ನಿವಾರಣೆ, Non Gazetted ಪೋಸ್ಟ್‌ಗಳಿಗೆ ರಾಷ್ಟ್ರೀಯ ಮಟ್ಟದಲ್ಲಿ ಅರ್ಹತಾ ಪರೀಕ್ಷೆ, ಸರ್ಕಾರಿ ಅಸ್ಪತ್ರೆಗಳನ್ನು ಮೆಡಿಕಲ್ ಕಾಲೇಜುಗಳಿಗೆ ಸಂಯೋಜಿಸುವುದು, ಕೃಷಿ ಕ್ಷೇತ್ರದಲ್ಲಿ ರೈತರಿಗೆ ಹಾಗೂ ರೈತರ ಪಂಪ್ ಸೆಟ್‌ಗಳಿಗೆ ಸೌರ ವಿದ್ಯುತ್ ಒದಗಿಸುವ ಯೋಜನೆ, ರೈಲ್ವೆ ಹಳಿಗಳ ಎರಡು ಬದಿಯ ಭೂಮಿಯನ್ನು ಉಪಯೋಗಿಸಿ ಸೌರ ವಿದ್ಯುತ್ ಉತ್ಪಾದನಾ ಯೋಜನೆ, ದೇಶದ ಎಲ್ಲಾ ಮನೆಗಳಿಗೆ 3.6 ಲಕ್ಷ ಕೋಟಿ ರೂಗಳಲ್ಲಿ ನಳ್ಳಿ ನೀರಿನ ಯೋಜನೆ ಪ್ರಶಂಸನೀಯ.

ದೇಶದ 5 ಪ್ರದೇಶಗಳಲ್ಲಿ ಅಂತರಾಷ್ಟ್ರೀಯ ಪ್ರವಾಸೋದ್ಯಮದ ದೃಷ್ಠಿಯಿಂದ ಪುರಾತತ್ವ ಜಾಗಗಳ ಅಭಿವೃದ್ಧಿ ಶ್ಲಾಘನೀಯ ಹೆಜ್ಜೆ.
ಎಲ್ಲಾದಿಕ್ಕಿಂತಲೂ ಪ್ರಮುಖವಾಗಿ ಉದ್ಯೋಗ ಸೃಷ್ಠಿ ಹಾಗೂ ಮಾರುಕಟ್ಟೆಯಲ್ಲಿನ ಬೇಡಿಕೆಯ ಸುಧಾರಣೆಗಾಗಿ ಮುಂದಿನ ಐದು ವರ್ಷಗಳಲ್ಲಿ ಸುಮಾರು 105 ಲಕ್ಷ ಕೋಟಿ ರೂ ಗಳಷ್ಟು ಮೂಲಭೂತ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಈ ಸರ್ಕಾರದ ಜನಪರ ಚಿಂತನೆಗೆ ಒಂದು ನಿದರ್ಶನ.

ಪ್ರಸಕ್ತ ಅರ್ಥಿಕ ಪರಿಸ್ಥಿಯ ಹಿನ್ನಲೆಯಲ್ಲಿ ದೂರದೃಷ್ಠಿಯಿಂದ ಮಾನ್ಯ ವಿತ್ತ ಸಚಿವರು ನೀಡಿರುವ 2020-21 ಅತ್ಯಂತ ಸ್ವಾಗತಾರ್ಹ ಬಜೆಟ್. ಎಲ್ಲರ ಸಹಕಾರದೊಂದಿಗೆ ಎಲ್ಲರ ವಿಕಾಸಕ್ಕಾಗಿ ಎಲ್ಲರಲ್ಲೂ ವಿಶ್ವಾಸ ಮೂಡಿಸಿರುವ, ಮಾತೃ ಶಕ್ತಿಯ ಮೇಲೆ ವಿಶ್ವಾಸ ಇಡಬಹುದಾದ ಬಜೆಟ್ ಶ್ಲಾಘನೀಯ ಇದಾಗಿದೆ ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ತಮ್ಮ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.