ಕರಾವಳಿ

ಇಡ್ಯಾ ಬ್ರಹ್ಮಕಲಶಾಭೀಷೇಕ : ಹೊರೆಕಾಣಿಕೆ ಕೇಂದ್ರ ಉದ್ಘಾಟನೆ

Pinterest LinkedIn Tumblr

ಮಂಗಳೂರು: ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜ.31 ರಿಂದ ಫೆ.9ರ ವರೆಗೆ ಜರಗುವ ಅಷ್ಟಬಂಧ ಬ್ರಹ್ಮಕಲಶಾಭೀಷೇಕ, ಅಷ್ಟಪವಿತ್ರನಾಗಮಂಡಲೋತ್ಸವ, ಪಿಲಿಚಾಮುಂಡಿ ಧರ್ಮನೇಮೋತ್ಸವದ ಪ್ರಯುಕ್ತ ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸಮರ್ಪಿಸಲಿರುವ ಹಸಿರು ಹೊರೆಕಾಣಿಕೆ ಸಂಗ್ರಹಣಾ ಕೇಂದ್ರ ಉದ್ಘಾಟನೆಯು ಮಂಗಳವಾರದಂದು ಇಡ್ಯಾ ಶಿವನಗರದಲ್ಲಿ ಜರುಗಿತು.

ಹಸಿರು ಹೊರೆಕಾಣಿಕೆ ಸಂಗ್ರಹಣಾ ಕೇಂದ್ರವನ್ನು ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನ ಅರ್ಚಕ ಸೂರ್ಯನಾರಾಯಣ ಭಟ್ ಅವರು ಉದ್ಘಾಟಿಸಿದರು. ಇ

ಡ್ಯಾ ಮಹಾಲಿಂಗೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿ ಮಾತನಾಡಿ, ಬ್ರಹ್ಮಕಲಶೋತ್ಸವದ ಸಕಲ ಕಾರ್ಯಗಳಿಗೆ ಸರ್ವ ಭಕ್ತರ ಸಹಕಾರ ಅಗತ್ಯ. ದೇವತಾ ಕಾರ್ಯದಲ್ಲೂ ಸರ್ವರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಪುಂಡಲೀಕ ಹೊಸಬೆಟ್ಟು ಮಾತನಾಡಿ, ಊರವರ ಸಹಕಾರದ ಮೂಲಕ ಹಸಿರು ಹೊರೆಕಾಣಿಕೆಯು ದೇವರ ಸನ್ನಿಧಾನವನ್ನು ಸೇರಿ ನಮ್ಮಲ್ಲೆರ ಸಕಲ ಕಷ್ಟಗಳನ್ನು ನಿವಾರಿಸುವ ಅನುಗ್ರಹವನ್ನು ದೇವರು ನೀಡಲಿ ಎಂದರು.

ಕಾರ್ಯಕ್ರಮದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಧ್ಯಕ್ಷರುಗಳಾದ ಸತ್ಯಜಿತ್ ಸುರತ್ಕಲ್, ಅಗರಿ ರಾಘವೇಂದ್ರ ರಾವ್, ಹೊರೆಕಾಣಿಕೆ ಸಮಿತಿ ಅಧ್ಯಕ್ಷ ಸುಧಾಕರ್ ಪೂಂಜ, ಸಂಚಾಲಕ ಅಣ್ಣಪ್ಪ ದೇವಾಡಿಗ, ಆನಂದ್ ರಾವ್, ಪ್ರಕಾಶ್ ಕುಮಾರ್ ಬಿಹೆಚ್‌ಪಿ ನಾಗರಾಜ್, ಮುರಳಿ ಬಿ‌ಎ‌ಎಸ್‌ಎಫ್, ಸೋಮನಾಥ ದೇವಾಡಿಗ, ಸುಬ್ರಹ್ಮಣ್ಯ ಹೆಚ್‌ಪಿ ಮತ್ತಿತ್ತರು ಉಪಸ್ಥಿತರಿದ್ದರು.

Comments are closed.