ಕರಾವಳಿ

ಜನವರಿ 31ರಂದು ಪಂಪ್‌ವೆಲ್‌ ಚತುಷ್ಪತ ಫೈ ‌ಓವರ್‌ ಉದ್ಘಾಟನೆ : ಸಂಸದ ನಳೀನ್ ಅವರಿಂದ ಇಂದು ಕಾಮಗಾರಿ ಪರಿಶೀಲನೆ

Pinterest LinkedIn Tumblr

ಮಂಗಳೂರು, ಜನವರಿ.29: ದಕ್ಷಿಣಕನ್ನಡ ಲೋಕಸಭಾ ಸದಸ್ಯರಾದ ಶ್ರೀ ನಳಿನ್ ಕುಮಾರ್‌ಕಟೀಲ್‌ರವರು ‌ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ‌ಎನ್ ಹೆಚ್. 66ನ ಪಂಪ್‌ವೆಲ್‌ ಚತುಷ್ಪತ ಫೈ ‌ಓವರ್‌ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಂಗಳೂರು ನಗರದಕ್ಷಿಣ ಶಾಸಕರಾದ ಶ್ರೀ ವೇದವ್ಯಾಸ್‌ಕಾಮತ್, ಕಾರ್ಪೊರೇಟರ್‌ಗಳಾದ ಶ್ರೀ ಸುಧೀರ್ ಶೆಟ್ಟಿಕಣ್ಣೂರು, ಶ್ರೀಮತಿ ಚಂದ್ರಾವತಿ ವಿಶ್ವನಾಥ್, ಶ್ರೀ ಸಂದೀಪ್‌ಗರೋಡಿ ಮತ್ತು ಮಂಗಳೂರು ವಿಧಾನಸಭಾಕ್ಷೇತ್ರದ ಬಿಜೆಪಿ ನಿಕಟಪೂರ್ವ‌ಅಧ್ಯಕ್ಷರಾದ ಶ್ರೀ ಸಂತೋಷ್‌ಕುಮಾರ್‌ರೈಬೋಳಿಯಾರ್ ಹಾಗೂ ರಾಷ್ಟ್ರೀಯಹೆದ್ದಾರಿ ಪ್ರಾಧಿಕಾರದ‌ಅಧಿಕಾರಿಗಳು ಉಪಸ್ಥಿತರಿದ್ದರು.

ಸದರಿ ಪಂಪ್‌ವೆಲ್‌ ಚತುಷ್ಪತ ಫೈ ‌ಓವರ್‌ ಕಾಮಗಾರಿ ಯನ್ನುದಿನಾಂಕ 31.01.2020 ರ ಪೂರ್ವಾಹ್ನ 9.00 ಗಂಟೆಗೆ ಮಾನ್ಯ ಸಂಸದರಾದ ಶ್ರೀ ನಳಿನ್ ಕುಮಾರ್‌ಕಟೀಲ್‌ರವರು ಲೋಕಾರ್ಪಣೆಗೊಳಿಸಲಿದ್ದಾರೆ.

Comments are closed.