ಕರಾವಳಿ

ಫೆ.2: ಗುರುಪುರ ಬಂಟರ ಮಾತೃ ಸಂಘದ ಆಶ್ರಯದಲ್ಲಿ ವಾಮಂಜೂರ್‌ನಲ್ಲಿ `ಬಂಟ ಕಲಾವೀಳ್ಯ-2020′

Pinterest LinkedIn Tumblr

ಮಂಗಳೂರು, ಜನವರಿ, 29: ಗುರುಪುರ ಬಂಟರ ಮಾತೃ ಸಂಘದ ಆಶ್ರಯದಲ್ಲಿ `ರಾಷ್ಟ್ರೀಯ ಬಂಟರ ಭಾವೈಕ್ಯ ಸಂಗಮ’ದ ಅಂಗವಾಗಿ ಬಂಟರ ಕಲಾ ಪ್ರತಿಭೆಯನ್ನು ಪ್ರತಿಬಿಂಬಿಸುವ `ಬಂಟ ಕಲಾವೀಳ್ಯ 2020′ ಅಂತರ್ ಬಂಟರ ಸಂಘಗಳ ಸ್ಪರ್ಧೆ ಫೆ. 2ರಂದು ವಾಮಂಜೂರು ಅಮೃತೇಶ್ವರ ಆಂಗ್ಲ ಮಾಧ್ಯಮ ಶಾಲೆಯ ವಠಾರದಲ್ಲಿ ನಡೆಯಲಿದೆ ಎಂದು ಸುದರ್ಶನ ಶೆಟ್ಟಿ ಪೆರ್ಮಂಕಿ ತಿಳಿಸಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸ್ಪರ್ಧೆಯಲ್ಲಿ ಸುಮಾರು 10ರಿಂದ 11 ತಂಡಗಳು ಭಾಗವಹಿಸಲಿದೆ. ಸ್ಪರ್ಧಿಸುವ ಎಲ್ಲಾ ತಂಡಗಳಿಗೆ ತಲಾ 10 ಸಾವಿರ ನಗದು ನೀಡಲಾಗುವುದು. ಪ್ರಥಮ 1 ಲಕ್ಷ, ದ್ವಿತೀಯ 60 ಸಾವಿರ, ತೃತೀಯ 40 ಸಾವಿರ, ಚತುರ್ಥ 20 ಸಾವಿರ ನಗದನ್ನು ಬಹುಮಾನವಾಗಿ ನೀಡಲಾಗುವುದು. ಸಮಾರಂಭದಲ್ಲಿ 5ರಿಂದ 6 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಈ ಸಂದರ್ಭ ಉದ್ಯಮ ಹಾಗೂ ಸಮಾಜ ಸೇವೆಗಾಗಿ ಕೆ. ಪ್ರಕಾಶ್ ಶೆಟ್ಟಿ, ಸಹಕಾರ ಕ್ಷೇತ್ರದ ಸೇವೆಗಾಗಿ ಡಾ. ಎಂ. ಎನ್. ರಾಜೇಂದ್ರ ಕುಮಾರ್, ಶಿಕ್ಷಣ ಕ್ಷೇತ್ರದ ಸೇವೆಗಾಗಿ ಸೀತಾರಾಮ ಜಾಣು ಶೆಟ್ಟಿ, ರಂಗಭೂಮಿ ಕಲಾವಿದ ಭೋಜರಾಜ್ ವಾಮಂಜೂರು, ಬಂಟರ ಸಂಘಗಳ ಸಂಘಟನೆಗಾಗಿ ಭಾಸ್ಕರ್ ಶೆಟ್ಟಿಯವರನ್ನು ಗೌರವಿಸಲಾಗುವುದು ಎಂದು ಸುದರ್ಶನ ಶೆಟ್ಟಿ ಪೆರ್ಮಂಕಿ ವಿವರಿಸಿದರು.

ಗುರುಪುರ ಬಂಟರ ಮಾತೃ ಸಂಘದ ಅಧ್ಯಕ್ಷ ರಾಜ್‍ಕುಮಾರ್ ಶೆಟ್ಟಿ ಅವರು ಮಾತನಾಡಿ, ಬೆಳಿಗ್ಗೆ 9 ಕ್ಕೆ ಆಸರೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಡಾ. ಆಶಾಜ್ಯೋತಿ ರೈ ಮತ್ತು ಶ್ರೀದೇವಿ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಮೈನಾ ಎಸ್. ಶೆಟ್ಟಿ ಉದ್ಘಾಟಿಸುವರು.

ಬಳಿಕ ಸ್ಪರ್ಧೆ ನಡೆಯಲಿದೆ, ನಡುವೆ ಮಧ್ಯಾಹ್ನ 1ರಿಂದ 2ರ ತನಕ `ಬಂಟರಿಂದ ಬಂಟರಿಗಾಗಿ ಬಂಟರಿಗೋಸ್ಕರ’ ಎಂಬ ಪರಿಕಲ್ಪನೆಯಲ್ಲಿ ಬಂಟರು ಎಂಬ ವಿಚಾರಗೋಷ್ಠಿ ನಡೆಯಲಿದೆ. ಸಂಜೆ 5.30ರಿಂದ 7.30ರ ತನಕ ಸಭಾ ಕಾರ್ಯಕ್ರಮ ನಡೆಯಲಿದೆ. ಗುರುಪುರದ ರಾಜಶೇಖರಾನಂದ ಸ್ವಾಮಿ ಆಶೀರ್ವಚನ ನೀಡುವರು.

ಸಮಾಜದ 50ಕ್ಕೂ ಅಧಿಕ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ನಂತರ ಸ್ಪರ್ಧೆ ಮುಂದುವರೆದು ರಾತ್ರಿ 10.30ಕ್ಕೆ ಸದ್ಯರಿಂದ `ಅಗ್ರಪೂಜೆ’ ಯಕ್ಷಗಾನ ನಡೆಯಲಿದೆ. ರಾತ್ರಿ 11.45ಕ್ಕೆ ಬಹುಮಾನ ವಿತರಣೆ ನಡೆಯಲಿದೆ. ಶ್ರೇಷ್ಠ ನಟ, ಶ್ರೇಷ್ಠ ನಟಿ, ಉತ್ತಮ ನಿರೂಪಣೆ ಹಾಗೂ ನೃತ್ಯ, ಹಾಡುಗಾರಿಕೆ, ಪ್ರಹಸನ, ವೇಷಭೂಷಣಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಭಾವೈಕ್ಯ ಸಂಗಮ ಸಮಿತಿಯ ಸೀತಾರಾಮ ಜಾಣು ಶೆಟ್ಟಿ, ಸತೀಶ್ ಶೆಟ್ಟಿ ಮೂಡುಜಪ್ಪುಗುತ್ತು, ದೇವಿಚರಣ್ ಶೆಟ್ಟಿ, ಚಂದ್ರಹಾಸ ಶೆಟ್ಟಿ ನಾರಳ ಮುಂತಾದವರು ಉಪಸ್ಥಿತರಿದ್ದರು.

Comments are closed.