ಕರಾವಳಿ

ನಾಳೆ ದ.ಕ.ಕಸಾಪ ವತಿಯಿಂದ ಪುರಭವನದಲ್ಲಿ ಗಣರಾಜ್ಯೋತ್ಸವ ಸಂದೇಶ- ಬಹುಬಾಷಾ ಕವಿಗೋಷ್ಠಿ

Pinterest LinkedIn Tumblr

ಜನವರಿ 25, ರವಿವಾರ‌ ಅಪರಾಹ್ನ 3ಗಂಟೆಗೆ ನಗರದ ಪುರಭವನದಲ್ಲಿದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ ಮತ್ತುಕನ್ನಡ ಸಂಸ್ಕೃತಿ‌ಇಲಾಖೆಯ‌ಆಶ್ರಯದಲ್ಲಿಗಣರಾಜ್ಯೋತ್ಸವಕಾರ್ಯಕ್ರಮಜರಗಲಿದೆ.

ಹಿರಿಯಯಕ್ಷಗಾನ ವಿದ್ವಾಂಸ, ಸಾಹಿತಿಪೊಳಲಿ ನಿತ್ಯಾನಂದಕಾರಂತ‌ಅವರುಗಣರಾಜ್ಯೋತ್ಸವ ಸಂದೇಶ ನೀಡಲಿದ್ದು,ಇದೇ ಸಂದರ್ಭ ಬಹುಭಾಷಾ ಕವಿಗೋಷ್ಠಿ ಆಯೋಜಿಸಲಾಗಿದೆ.

ಆಯ್ಕೆಗೊಂಡ ಕವಿಗಳಾದ ಉಷಾ ಮಂದಾರ (ಕನ್ನಡ), ಜಯಾನಂದ ಪೆರಾಜೆ(ಕನ್ನಡ), ಬಿ.ಸತ್ಯವತಿ ಭಟ್, ಕೊಳಚಪ್ಪು (ಕನ್ನಡ),ಶಾಂತಾ, ಪುತ್ತೂರು (ಕನ್ನಡ), ಪೂವಪ್ಪ, ನೇರಳಕಟ್ಟೆ (ತುಳು), ಶ್ರೀಕೃಷ್ಣ ಅಹಿತಾನಲ (ಸಂಸ್ಕೃತ),ಡಾ.ಪಿ.ವಿ.ಶೋಭಾ (ಹಿಂದಿ), ಜೆ.ಎ.ಎಂ.ಫೆರ್ನಾಂಡಿಸ್ (ಕೊಂಕಣಿ),ವ.ಉಮೇಶ ಕಾರಂತ(ಕುಂದಾಪ್ರಕನ್ನಡ),ರಮ್ಯಾಶ್ರೀ ನಡುಮನೆ(ಅರೆ ಭಾಷೆ), ಕೆ.ಪಿ.ಅಬ್ದುಲ್‌ಖಾದರ್, ಕುತ್ತೆತ್ತೂರು (ಬ್ಯಾರಿ)ತಮ್ಮ ಸ್ವರಚಿತ ಕವನಗಳನ್ನು ವಾಚಿಸಲಿದ್ದಾರೆ.

ಮಧ್ಯಾಹ್ನ ಪೊಲೀಸ್ ಬ್ಯಾಂಡ್‌ನೊಂದಿಗೆಕಾರ್ಯಕ್ರಮ ಆರಂಭಗೊಳ್ಳಲಿದ್ದು ವಿವಿಧ ಶಾಲಾ ಮಕ್ಕಳಿಂದ ವೈವಿಧ್ಯಮಯ ಕಾರ್ಯಕ್ರಮಗಳು ಜರಗಲಿದೆ‌ಎಂದುದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್‌ಅಧ್ಯಕ್ಷ‌ಎಸ್. ಪ್ರದೀಪಕುಮಾರಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.