ಕರಾವಳಿ

ಅಲ್ಪಸಂಖ್ಯಾತ ಅಭಿವೃದ್ಧಿ ಕಾಮಗಾರಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ 1.21 ಕೋಟಿ ಅನುದಾನ ಬಿಡುಗಡೆ – ಶಾಸಕ ಕಾಮತ್

Pinterest LinkedIn Tumblr

ಮಂಗಳೂರು : ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಸಾರ್ವಜನಿಕರ ಬೇಡಿಕೆ ಪ್ರಕಾರ ವಿವಿಧ ಅನುದಾನಗಳನ್ನು ಜೋಡಿಸಿ 1.21 ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ಶಾಸಕ ಡಿ.ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.

ಮಹಾನಗರ ಪಾಲಿಕೆಯಲ್ಲಿ ಕಾಂಗ್ರೇಸ್ ಆಡಳಿತಾವಧಿ ಪೂರ್ಣಗೊಂಡ ಬಳಿಕ ಸಾರ್ವಜನಿಕರು ನನ್ನ ಬಳಿ ಕಾಮಗಾರಿಗೆ ಮನವಿ ಸಲ್ಲಿಸಿದ ಸಂಧರ್ಭದಲ್ಲಿ ಕಾಮಗಾರಿ ಮಾಡಿಕೊಡುವ ಭರವಸೆ ನೀಡಿದ್ದೆ. ಆ ಪ್ರಕಾರ ವಿವಿಧ ಇಲಾಖೆಗಳಿಂದ ಅನುದಾನ ಒದಗಿಸಿಲಾಗಿದೆ ಎಂದು ಶಾಸಕರು ತಿಳಿಸಿದ್ದಾರೆ.

ಅಲ್ಪಸಂಖ್ಯಾತ ಕಲ್ಯಾಣ ನಿಧಿಯಿಂದ 15 ಲಕ್ಷ ಅನುದಾನ ನೀಡಲಾಗಿದೆ. ಬೆಂದೂರ್`ವೆಲ್ ಬಳಿಯಿರುವ ಸಿ.ಎಸ್.ಐ ಸುಶಾಂತಿ ಚರ್ಚ್`ಗೆ ಹೋಗುವ ಮುಖ್ಯರಸ್ತೆಯಿಂದ ದೇವಾಲಯಕ್ಕೆ ಹೋಗುವ ರಸ್ತೆ ಅಭಿವೃದ್ಧಿಗೆ 5 ಲಕ್ಷ, ಸುಶಾಂತಿ ಚರ್ಚ್ ಬಳಿ ರಸ್ತೆ ಅಭಿವೃದ್ಧಿಗೆ 5 ಲಕ್ಷ, ಬೆಂದೂರ್ 4ನೇ ಅಡೇಡರಸ್ತೆಯ ಏ.ಆರ್ ಡಿಸೋಜ ರಸ್ತೆ ಅಭಿವೃದ್ಧಿಗೆ 5 ಲಕ್ಷ ಅನುದಾನ ಒದಗಿಸಲಾಗಿದೆ ಎಂದಿದ್ದಾರೆ.

ಮಳೆಹಾನಿ ಪರಿಹಾರ ನಿಧಿಯಿಂದ 35 ಲಕ್ಷ ಅನುದಾನ ಒದಗಿಸಲಾಗಿದೆ. ಬೆಂದೂರ್ ಅಥೆನ ಆಸ್ಪತ್ರೆಯ ಬಳಿ ಪ್ಲಾಮಾ ಡೈಮಂಡ್ ಕಟ್ಟಡದ ಬಳಿ ರಸ್ತೆ ಅಭಿವೃದ್ಧಿಗೆ 5 ಲಕ್ಷ, ಅಥೆನ ಆಸ್ಪತ್ರೆಯ ಬಳಿ ಗುರುದೇವಾ ಅಪಾರ್ಟ್ಮೆಂಟ್ ಬಳಿ ರಸ್ತೆ ಅಭಿವೃದ್ಧಿಗೆ 5 ಲಕ್ಷ, ಅಥೆನ ಆಸ್ಪತ್ರೆಯ ಬಳಿ ಶಾಂತಿ ನಿಲಯ ಚರ್ಚ್ ಬಳಿ 5 ಲಕ್ಷ, ಗೋರಿಗುಡ್ಡ 2ನೇ ಅಡ್ಡರಸ್ತೆಯ ಅಭಿವೃದ್ಧಿ ಕಾಮಗಾರಿಗೆ 5 ಲಕ್ಷ, ಫಳ್ನೀರ್ ಜೋಸೆಫ್ ನಗರದ ಬಳಿ ರಸ್ತೆ ಅಭಿವೃದ್ಧಿಗೆ 5 ಲಕ್ಷ, ಅತ್ತಾವರ ನ್ಯೂರೋಡ್ ದುರಸ್ತಿ ಕಾಮಗಾರಿಗೆ 10 ಲಕ್ಷ ಅನುದಾನ ನೀಡಲಾಗಿದೆ.

ಮುಖ್ಯಮಂತ್ರಿ ವಿಶೇಷ ನಿಧಿಯಿಂದ 29.32 ಲಕ್ಷ ಅನುದಾನ ನೀಡಲಾಗಿದ್ದು, ಮಿತ್ತಮೊಗರು ಎಲ್.ಎಂ ಟವರ್ಸ್ ಬಳಿ ಬೃಹತ್ ತೋಡಿಗೆ ತಡೆಗೋಡೆ ನಿರ್ಮಾಣಕ್ಕೆ 5 ಲಕ್ಷ, ಕಾಪ್ರಿಗುಡ್ಡ ಬಳಿ ಬೃಹತ್ ಚರಂಡಿ ನಿರ್ಮಾಣ ಕಾಮಗಾರಿಗೆ 5 ಲಕ್ಷ, ಫಳ್ನೀರ್ ಮುಖ್ಯ ರಸ್ತೆಯ ದೋಸಾ ಕ್ಯಾಂಪ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ 19.32 ಲಕ್ಷ ಮೀಸಲಿಡಲಾಗಿದೆ ಎಂದಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆ ಸಾಮಾನ್ಯ ನಿಧಿಯಿಂದ 41.89 ಅನುದಾನ ನೀಡಲಾಗಿದೆ. ಲೋವರ್ ಬೆಂದೂರು 1ನೇ ಅಡ್ಡರಸ್ತೆಯ ಬಳಿ ಒಳಚರಂಡಿ ಕೊಳವೆ ಮಾರ್ಗ ಬದಲಾವಣೆ ಕಾಮಗಾರಿಗಳಿಗೆ 14.9 ಲಕ್ಷ, ಬೆಂದೂರು ನೀರು ಸರಬರಾಜು ಸ್ಥಾವರದ 50 ಲಕ್ಷ ಸಾಮರ್ಥ್ಯದ ಜಿ.ಎಲ್.ಎಲ್.ಆರ್ ದುರಸ್ತಿ ಹಾಗೂ ಇತರ ಕಾಮಗಾರಿಗಳಿಗೆ 5 ಲಕ್ಷ, ಬೆಂದೂರು ನೀರು ಶುದ್ಧೀಕರಣ ಮತ್ತು ರೇಚಕಸ್ಥಾವರದಲ್ಲಿ 2 (10 ಎಚ್.ಪಿ ಮೋಟರ್) ಪಂಪ್ ಸೆಟ್ ಹಾಗೂ ಪೂರಕ ಸಾಮಾಗ್ರಿಗಳನ್ನು ಅಳವಡಿಸುವ ಕಾಮಗಾರಿಗೆ 5 ಲಕ್ಷ, ಕಂಕನಾಡಿ ಹಳೇ ರಸ್ತೆಯಿಂದ ಬಾಲಿಕಾಶ್ರಮ ರಸ್ತೆಯ ವರೆಗೆ ಕುಡಿಯುವ ನೀರು ಪೂರೈಕೆ ಅಭಿವೃದ್ಧಿಗೆ ಹೊಸ ಹೆಚ್.ಡಿ.ಪಿ.ಇ ಕೊಳವೆ ಅಳವಡಿಕೆಗೆ 5 ಲಕ್ಷ, ಬಿಷಪ್ ಕಂಪೌಂಡ್ ಬಳಿ ಮುಚ್ಚು ಚರಂಡಿ ಕಾಮಗಾರಿ 5 ಲಕ್ಷ, ಬಿಷಪ್ ಕಂಪೌಂಡ್ ಬಳಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ 3 ಲಕ್ಷ, ವೆಲೆನ್ಸಿಯ ಸುವರ್ಣ ರಸ್ತೆಯ ಗೋರಿಗುಡ್ಡ ಅಡ್ಡರಸ್ತೆಗಳ ಅಭಿವೃದ್ಧಿ 1.06 ಲಕ್ಷ, ಎಸ್ ಎಲ್ ಮಥಾಯಸ್ ರಸ್ತೆಯಲ್ಲಿ ಕವಲೊಡೆದ ಅಡ್ಡರಸ್ತೆಗಳಲ್ಲಿ ಹಾದು ಹೋಗುವ ನಳ್ಳಿ ನೀರಿನ ಕೊಳವೆಗಳ ಲಿಂಕಿಂಗ್ ಕಾಮಗಾರಿ 1.62 ಲಕ್ಷ, ಸ್ಟರಕ್ ರಸ್ತೆ, ಸೆಮಿನರಿ 4ನೇ ಅಡ್ಡರಸ್ತೆ ಮತ್ತು ಕದ್ರಿ ಕಂಬ್ಳದಿಂದ ಕದ್ರಿ ದೇವಸ್ಥಾನದ ವರೆಗೆ ರಸ್ತೆ ಬದಿಗಳನ್ನು ಸಮತಟ್ಟುಗೊಳಿಸುವ ಕಾಮಗಾರಿಗೆ 1.31 ಲಕ್ಷ ಅನುದಾನ ನೀಡಲಾಗಿದೆ ಎಂದು ತಿಳಿಸಿದ್ದಾರೆ.

Comments are closed.