ಕರಾವಳಿ

ಬಾಂಬರ್ ಆದಿತ್ಯ ರಾವ್ ಕುಟುಂಬದವರಿಂದಲೂ ದೂರಾಗಿದ್ದ: ಆತನ ಕುಟುಂಬಿಕರು ಹೇಳೋದೇನು?

Pinterest LinkedIn Tumblr

ಉಡುಪಿ: ಬಾಂಬರ್ ಆದಿತ್ಯ ರಾವ್ ಬಂಧನವಾಗಿದೆ. ಇದೇ ಹಿನ್ನೆಲೆಯಲ್ಲಿ ಉಡುಪಿಯ ಮಣಿಪಾಲದ ಮಣ್ಣಪಳ್ಳದ ಅನಂತನಗರದಲ್ಲಿರುವ ಆದಿತ್ಯ ರಾವ್ ಮನೆಯಲ್ಲಿ ಸದ್ಯ ಯಾರೂ ವಾಸ್ತವ್ಯ ಮಾಡುತ್ತಿಲ್ಲ ಎಂಬುದು ಸ್ಥಳಕ್ಕೆ ತೆರಳಿದ ಮಾಧ್ಯಮಗಳಿಗೆ ತಿಳಿದಿದೆ. ಆದಿತ್ಯನ ತಂದೆ ಮಂಗಳೂರಲ್ಲಿದ್ದರೆ ಸಹೋದರ ಮೂಡಬಿದ್ರೆಯಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ. ಈ ಮೊದಲೇ ಮಣಿಪಾಲ ಬೆಂಗಳೂರು ಮುಂತಾದೆಡೆ ಸುತ್ತುತ್ತಿದ್ದ ಆದಿತ್ಯನ ಜೊತೆ ಮನೆಯವರು ಯಾವುದೇ ಸಂಪರ್ಕ ಇಟ್ಟುಕೊಂಡಿಲ್ಲ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ಆದಿತ್ಯ ಮಣಿಪಾಲದವನು ಎನ್ನುವ ವಿಷಯ ತಿಳಿದು ಸ್ಥಳೀಯರು ಆಶ್ಚರ್ಯಗೊಂಡಿದ್ದಾರೆ

ಆದಿತ್ಯನ ತಾಯಿ ಕೆಲ ಸಮಯದ ಹಿಂದೆ ಕ್ಯಾನ್ಸರ್ ನಿಂದ ಸತ್ತಿದ್ರು.ಬಳಿಕ ಇಡೀ ಕುಟುಂಬ ಮಣಿಪಾಲದಿಂದ ಮಂಗಳೂರಿನ ಚಿಲಿಂಬಿಗೆ ಶಿಫ್ಟ್ ಆಗಿದೆ.

ಬಾಂಬರ್ ಆದಿತ್ಯ ರಾವ್ ನನ್ನು ಇತ್ತೀಚೆಗೆ ಸ್ಥಳೀಯರು ನೋಡಿಯೇ ಇಲ್ಲ. ಎಂಬಿಎ ಮತ್ತು ಬಿಇ ಪದವಿಯೊಂದಿಗೆ ಡಬಲ್ ಡಿಗ್ರಿ ಪಡೆದ ಆದಿತ್ಯನನ್ನು ನೆರೆಹೊರೆಯವರು ನೋಡದೆಯೇ ಕೆಲವು ವರ್ಷಗಳಾಗಿವೆ ಎನ್ನುವ ಮಾತುಗಳನ್ನು ಸ್ಥಳಿಯ ಮಂದಿ ಹೇಳುತ್ತಾರೆ. ಆದಿತ್ಯನ ಕುಟುಂಬ ಬೇರೆಯವರ ಜೊತೆ ಬೆರೆಯುತ್ತಿರಲಿಲ್ಲ.ದೊಡ್ಡ ದೊಡ್ಡ ಮನೆಯಲ್ಲಿ ವಾಸಿಸುವ ಕಾರಣಕ್ಕಾಗಿಯೇ ಏನೋ ಸ್ನೇಹ ಸಂಬಂಧಗಳು ಅಷ್ಟರ ಮಟ್ಟಿಗೆ ಯಾರದ್ದೆ ನಡುವೆ ಇರಲಿಲ್ಲ. ಇನ್ನು ಆದಿತ್ಯನ ತಾಯಿ ತೀರಿಕೊಂಡಾಗ ಆದಿತ್ಯ ಜೈಲಿನಲ್ಲಿದ್ದು ತದನಂತರ ಮನೆಯವರ ಸಂಪರ್ಕದಲ್ಲೇ ಇರಲಿಲ್ಲ ಎನ್ನಲಾಗುತ್ತಿದೆ.

Comments are closed.