ಕರಾವಳಿ

ಉತ್ತಮ ಆರೋಗ್ಯದಿಂದ ಸದೃಢ ಸಮಾಜ ನಿರ್ಮಾಣ:ಫಿಟ್ ಇಂಡಿಯಾ “ಸಕ್ಷಮ್ ಸೈಕಲ್ ರ್‍ಯಾಲಿ

Pinterest LinkedIn Tumblr

ಮಂಗಳೂರು : ಉತ್ತಮ ಆರೋಗ್ಯದಿಂದ ಸದೃಢ ಸಮಾಜ ನಿರ್ಮಾಣದ ಪರಿಕಲ್ಪನೆಯ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ಮುಖೇನ ದೇಶದ ಎಲ್ಲಾ ಭಾಗಗಳಲ್ಲಿ ಫಿಟ್ ಇಂಡಿಯಾ ಕಾರ್ಯಕ್ರಮ ನಡೆಸಲು ಕರೆ ನೀಡಲಾಗಿದೆ.

ಇದರ ಅಂಗವಾಗಿ ಭಾರತ ಸರಕಾರ ನೆಹರು ಯುವ ಕೇಂದ್ರ ಮಂಗಳೂರು, ಭಾರತ್ ಸ್ಕೌಟ್ಸ್ ಆಡ್ ಗೈಡ್ಸ್ ಮತ್ತು ಮಂಗಳೂರು ಸೈಕ್ಲಿಂಗ್ ಕ್ಲಬ್ ಇದರ ಆಶ್ರಯದಲ್ಲಿ “ಫಿಟ್ ಇಂಡಿಯಾ” “ಸಕ್ಷಮ್ ಸೈಕಲ್ ರ್‍ಯಾಲಿ” ನಡೆಯಿತು.

ಮಹಾನಗರ ಪಾಲಿಕೆ ಮುಂಭಾಗದಲ್ಲಿ ರ್‍ಯಾಲಿಯನ್ನು ಬೆಳ್ಳಿಗೆ ಮಂಗಳೂರು ಸಹಾಯಕ ಆಯುಕ್ತ ಮದನ್ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಶುಭಹಾರೈಸಿದರು. ರ್ಯಾಲಿಯು ಪಿ.ವಿ.ಎಸ್, ಹಂಪನಕಟ್ಟೆ, ಆರ್.ಟಿ.ಓ ಮೂಲಕ ಸಾಗಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಮುಕ್ತಾಯವಾಯಿತು.

ಜಿಲ್ಲಾ ಯುವ ಸಮನ್ವಯಾಧಿಕಾರಿ ರಘುವೀರ್ ಸೂಟರ್ ಪೇಟೆ, ಮಂಗಳೂರು ಸೈಕ್ಲಿಂಗ್ ಕ್ಲಬ್ ಅಧ್ಯಕ್ಷ ಅನಿಲ್ ಶೇಟ್, ನೆಹರು ಯುವ ಕೇಂದ್ರ ತಾಲೂಕು ಪ್ರತಿನಿಧಿ ವಿಕಾಸ್, ಕುಮಾರಿ ಸುಶ್ಮಿತ ಹಾಗೂ ಪ್ರೀತೇಶ್ ಉಪಸ್ಥಿತರಿದ್ದರು, ರ್ಯಾಲಿಯಲ್ಲಿ 8 ವರ್ಷದ ಬಾಲಕನಿಂದ 65 ರ ವಯೋಮಾನದ ಗೋಪಾಲಕೃಷ್ಣ ಬಾಳಿಗ ಭಾಗವಹಿಸಿದ್ದರು.

Comments are closed.