ಕರಾವಳಿ

ಪೆರುವಾಯಿ ನಾರಾಯಣ ಶೆಟ್ಟಿಯವರಿಗೆ ಆಸ್ರಣ್ಣ ಪ್ರಶಸ್ತಿ ಪ್ರದಾನ 

Pinterest LinkedIn Tumblr

ಮಂಗಳೂರು : ಹಿರಿಯ ಯಕ್ಷಗಾನ ವೇಷಧಾರಿ ಪೆರುವಾಯಿ ನಾರಾಯಣ ಶೆಟ್ಟಿ ಅವರಿಗೆ ಕದ್ರಿಯ ಆಸ್ರಣ್ಣ ಶಿಷ್ಯ ಬಳಗದವರು ಕಟೀಲು ಗೋಪಾಲ ಕೃಷ್ಣ ಆಸ್ರಣ್ಣ ಪ್ರಶಸ್ತಿ_2019 ನ್ನು ಪಡುಬಿದ್ರೆಯ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಬಳಿ ಕಟೀಲು ಮೇಳದ ವೇದಿಕೆಯಲ್ಲಿ ನೀಡಿ ಗೌರವಿಸಿದರು.

ಪಡುಬಿದ್ರೆಯ ರಾಧಾ ವಿಠಲ ಶೆಟ್ಟಿ ಮತ್ತು ಮಕ್ಕಳ ಸೇವೆಯಾಡದಂದು ಕಟೀಲು ಲಕ್ಷೀನಾರಾಯಣ ಆಸ್ರಣ್ಣ ಅವರ ಉಪಸ್ಥಿತಿಯಲ್ಲಿ ಬಂಗಾರದ ಪದಕ ದೊಂದಿಗೆ ಪ್ರಶಸ್ತಿ ಪ್ರದಾನಿಸಲಾಯಿತು. ಎರ್ಮಾಳು ಉದಯ ಶೆಟ್ಟಿ,ಎರ್ಮಾಳು ಸತೀಶ ವಿಠಲ ಶೆಟ್ಟಿ, ಐಕಳ ವಿಶ್ವನಾಥ ಶೆಟ್ಟಿ ,ನಟರಾಜ ರಾವ್ ಉಪಸ್ಥಿತರಿದ್ದರು.

ಶಿಷ್ಯಬಳಗದ ಪ್ರದೀಪ ಕುಮಾರ ಕಲ್ಕೂರ ಅವರು ಕಟೀಲಿನಲ್ಲಿ ಮಹಾನೆರೆ ಬಂದಾಗ ಧೀರ ಭಕ್ತಿ ಮೆರೆದಿದ್ದ ಕಟೀಲು ಗೋಪಾಲ ಕೃಷ್ಣ ಆಸ್ರಣ್ಣರ ಸಂಸ್ಮರಣೆ ಮಾಡಿದರು.ಕದ್ರಿ ನವನೀತ ಶೆಟ್ಟಿ ನಿರೂಪಿಸಿದರು.

Comments are closed.