ಕರಾವಳಿ

ಮಂಗಳೂರು : ಕರಾವಳಿ ಉತ್ಸವದಲ್ಲಿ ಇಂದಿನ ಕಾರ್ಯಕ್ರಮಗಳು

Pinterest LinkedIn Tumblr

ಮಂಗಳೂರು  : ಜನವರಿ 18 ರಂದು ಕರಾವಳಿ ಉತ್ಸವದಲ್ಲಿ ನಡೆಯುವ ಕಾರ್ಯಕ್ರಮಗಳು ಇಂತಿವೆ.

ಜನವರಿ 18 ರಂದು ಕದ್ರಿ ಉದ್ಯಾನವನದಲ್ಲಿ: ಸಂಜೆ 6 ಗಂಟೆಯಿಂದ 7.30 ರವರೆಗೆ ಶ್ರೀ ರಂಜನೀ ಸಂತಾನಗೋಪಾಲನ್, ಚೆನೈ ಮತ್ತು ತಂಡದಿಂದ ಕರ್ನಾಟಕೀ ಶಾಸ್ತ್ರೀಯ ಗಾಯನ ಸಂಜೆ 7.30 ಗಂಟೆಯಿಂದ 9.30 ರವರೆಗೆ ಅವಿಭಜಿತ ದ.ಕ ಜಿಲ್ಲೆಯ ಹಿರಿಯ ಮತ್ತು ಕಿರಿಯ ನೃತ್ಯ ಗುರುಗಳಿಂದ ನೃತ್ಯ ಸಂಭ್ರಮ ಕಾರ್ಯಕ್ರಮ ನಡೆಯಲಿದೆ.

ವಸ್ತು ಪ್ರದರ್ಶನ ವೇದಿಕೆಯಲ್ಲಿ (ಕರಾವಳಿ ಉತ್ಸವ ಮೈದಾನ): ಸಂಜೆ 6 ಗಂಟೆಯಿಂದ 7 ರವರೆಗೆ ಜಗದೀಶ್ ಶಿವಪುರ ಮತ್ತು ತಂಡದಿಂದ ಸ್ವರ ಕಂಠೀರವ ಡಾ. ರಾಜ್ ಕುಮಾರ್ ಸವಿನೆನಪಿನ ಮಧುರಗೀತೆಗಳು ಹಾಗೂ ಮಿಮಿಕ್ರಿ, ಸಂಜೆ 7.30 ರಿಂದ 9 ಗಂಟೆವರೆಗೆ ಆರಾಧನ ಇನ್ಸ್‍ಸ್ಟಿಟ್ಯೂಟ್ ಆಫ್ ಪರ್‍ಫೋರ್ಮಿಂಗ್ ಆರ್ಟ್, ಬೆಂಗಳೂರು ಇವರಿಂದ ರಾಮಾಯಣ ನೃತ್ಯ ಕಾರ್ಯಕ್ರಮ ನಡೆಯಲಿದೆ.

ಜನವರಿ 18 ರಂದು ಪಣಂಬೂರು ಬೀಚಿನಲ್ಲಿ: ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆವರೆಗೆ ಬೀಚ್ ವಾಲಿಬಾಲ್ ಮತ್ತು ಥ್ರೋ ಬಾಲ್ ಸ್ಪರ್ಧೆ, ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆವರೆಗೆ ವಿದೇಶಿ ಹಾಗೂ ದೇಶಿ ಗಾಳಿಪಟ ಹಾರಾಟಗಾರರಿಂದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಕಾರ್ಯಗಾರ, ಸಂಜೆ 4 ರಿಂದ 5.30 ಗಂಟೆವರೆಗೆ ಕಿರುಚಿತ್ರ ಹಾಗೂ ಛಾಯಾಚಿತ್ರ ಸ್ಪರ್ಧೆ, 5.30 ಕ್ಕೆ ಸುಮಂತ್, ಎಸ್ ಸ್ಟುಡಿಯೋ, ಮಂಗಳೂರು ಇವರಿಂದ ಜೂಂಬಾ, 6 ಗಂಟೆಯಿಂದ 6.30 ರವರೆಗೆ ಪ್ರಗತಿ ಎ.ಪಿ ಇವರಿಂದ ಸ್ಯಾಕ್ಸೋಫೋನ್ ವಾದನ ಕಾರ್ಯಕ್ರಮ, ಸಂಜೆ 6.30 ರಿಂದ 8.30 ರವರೆಗೆ ಜೋಯಲ್ ರೆಬೆಲ್ಲೋ ಮತ್ತು ಬ್ಯಾಂಡ್ ತಂಡದವತಿಯಿಂದ “ಜೆ ಅಂಡ್ ಬಿ ವೈಬ್ಸ್” ತಂಡದ ವತಿಯಿಂದ ವೇದಿಕೆ ಕಾರ್ಯಕ್ರಮ ನಡೆಯಲಿದೆ.

Comments are closed.