ಕರಾವಳಿ

ಅನುಮತಿ ನಿರಾಕರಣೆ : ಇಂದಿನ ಪೌರತ್ವ ಕಾಯ್ದೆ ವಿರುದ್ಧದ ಪ್ರತಿಭಟನಾ ಸಮಾವೇಶ ರದ್ದು

Pinterest LinkedIn Tumblr

ಮಂಗಳೂರು, ಜನವರಿ.18: ಪಿಯುಸಿಎಲ್ ದ.ಕ. ಜಿಲ್ಲಾ ಸಮಿತಿ ಮತ್ತು ಎಸ್ಕೆಎಸ್ಸೆಸ್ಸೆಎಫ್ ದ.ಕ. ಜಿಲ್ಲಾ ಸಮಿತಿಯ ವತಿಯಿಂದ ಎನ್ ಆರ್ ಸಿ ಮತ್ತು ಸಿಎಎ ವಿರುದ್ಧ ಜ.18ರಂದು ಅಪರಾಹ್ನ ಬಲ್ಮಠ ಮೈದಾನದಲ್ಲಿ ನಡೆಸಲು ಉದ್ದೇಶಿಸಿದ್ದ ಪ್ರತಿಭಟನಾ ಸಮಾವೇಶಕ್ಕೆ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿರುವ ಹಿನ್ನೆಲೆಯಲ್ಲಿ ಪ್ರತಿಭಟನಾ ಸಮಾವೇಶವನ್ನು ರದ್ದು ಪಡಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಪ್ರತಿಭಟನಾ-ಜಾಗೃತಿ ಸಮಾವೇಶ ನಡೆಸುವ ಮೈದಾನದ ವಿವಾದವು ಸುಪ್ರೀಂ ಕೋರ್ಟ್ ನಲ್ಲಿದೆ. ಅಲ್ಲಿ ಕಾರ್ಯಕ್ರಮ ನಡೆಸಲು ನ್ಯಾಯಾಲಯದ ಅನುಮತಿ ಬೇಕಾಗಿದೆ. ಅಲ್ಲದೆ ಆಸುಪಾಸಿನ ಜನರ, ಸಂಸ್ಥೆಗಳ ಆಕ್ಷೇಪಣೆ ಇರುವುದರಿಂದ ಕಾರ್ಯಕ್ರಮ ನಡೆಸಲು ಅನುಮತಿ ಇಲ್ಲ ಎಂದು ಗುರುವಾರ ರಾತ್ರಿ ಪಿಯುಸಿಎಲ್ ಜಿಲ್ಲಾಧ್ಯಕ್ಷರಿಗೆ ಕದ್ರಿ ಠಾಣೆಯ ಇನ್ ಸ್ಪೆಕ್ಟರ್ ನೋಟಿಸ್ ಜಾರಿಗೊಳಿಸಿದ್ದಾರೆ.

ಬೆಂಬಲ ವಾಪಾಸ್ಸು ; SKSSF
ಜನವರಿ 18 ಶನಿವಾರ ದಿವಸ ಮಂಗಳೂರು ಬಲ್ಮಠ ಚರ್ಚ್ ಮೈದಾನದಲ್ಲಿ PUCL ಸಂಘಟನೆಯ ವತಿಯಿಂದ ನಡೆಯಲಿರುವ ಪ್ರತಿಭಟನಾ ಸಮಾವೇಶಕ್ಕೆ SKSSF ಜಿಲ್ಲಾ ಸಮಿತಿಯು ಬೆಂಬಲ ನೀಡಿತ್ತು. CAA, NPR, NRC ವಿರುದ್ಧ ನಡೆಯುವ ಹೋರಾಟಗಳಿಗೆ SKSSF ಸದಾ ಬೆಂಬಲ ನೀಡುತ್ತಿದ್ದು, ಕೆಲವೊಂದು ಕಾನೂನಿನ ತೊಡಕುಗಳು ಎದುರಾದ ಕಾರಣ ತಾ.18ರಂದು ಮಂಗಳೂರಿನ ಬಾಸಿಲ್ ಮಿಷನ್ ಚರ್ಚ್ ಮೈದಾನದಲ್ಲಿ PUCL ನಡೆಸುವ NRC ವಿಷದೀಕರಣ, NRC ಜಾಗೃತಿ ಸಮಾವೇಶಕ್ಕೆನೀಡಿರುವ ಬೆಂಬಲವನ್ನು ವಾಪಾಸ್ಸು ಪಡೆಯಲಾಗಿದೆ‌ ಎಂದು ಈ ಮೂಲಕ ತಿಳಿಯಪಡಿಸುತ್ತಿದ್ದೇವೆ. ಆದುದರಿಂದ ನಮ್ಮ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಅಗತ್ಯ ಇರುವುದಿಲ್ಲ ಎಂದು SKSSF ಜಿಲ್ಲಾ ಅಧ್ಯಕ್ಷರಾದ ಖಾಸಿಂ ದಾರಿಮಿ, ಇಸ್ಮಾಯಿಲ್ ಯಮಾನಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ.ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ಮಾಜಿ ಮೇಯರ್ ಅಶ್ರಫ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.