ಮಾತಾ ಅಮೃತಾನಂದಮಯಿ ಮಠ ಸ್ವಚ್ಚತಾ ಸೇವೆಯಲ್ಲಿ ಜನಜಾಗೃತಿ ಮೂಡಿಸುವಲ್ಲಿ ಇತರರಿಗೆ ಮಾದರಿ : ಸಿಎ ಶಾಂತಾರಾಂ ಶೆಟ್ಟಿ
ಮಂಗಳೂರು : ಮಂಗಳೂರಿನ ಮಾತಾ ಅಮೃತಾನಂದಮಯಿ ಆಶ್ರಮದ ವತಿಯಿಂದ ಅಮಲ ಭಾರತ ಸ್ವಚ್ಚತಾ ಜನ ಜಾಗರಣ ಯಜ್ಞ ಹಮ್ಮಿಕೊಳ್ಳಲಾಯಿತು.ಮಂಗಳೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಯುವರೆಡ್ ಕ್ರಾಸ್ ಹಾಗೂ ಎಂ ಆರ್ ಪಿ ಎಲ್ ಇವರ ಸಹಭಾಗಿತ್ವದಲ್ಲಿ ಜರುಗಿದ ಈ ಸ್ವಚ್ಚತಾ ಜನ ಜಾಗರಣ ಯಜ್ಞಕ್ಕೆ ಅಮ್ಮನವರ ಅನುಗ್ರಹಕ್ಕಾಗಿ ಪ್ರಾರ್ಥನೆಗೈದು ,ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಮಂಗಳೂರಿನ ಮಾತಾ ಅಮೃತಾನಂದಮಯಿ ಮಠದ ಮುಖ್ಯಸ್ಥರಾದ ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯ ಚಾಲನೆ ನೀಡಿದರು.
ದಕ್ಷಿಣ ಕನ್ನಡ ಜಿಲ್ಲಾ ರೆಡ್ ಕ್ರಾಸ್ ಅಧ್ಯಕ್ಷ ಸಿಎ ಶಾಂತಾರಾಂ ಶೆಟ್ಟಿ ನೆರೆದಿದ್ದ ಸೇವಾರ್ಥಿಗಳನ್ನುದ್ದೇಶಿಸಿ ಮಾತನಾಡಿ ಸ್ವಚ್ಚತಾ ಸೇವೆಯಲ್ಲಿ ಜನಜಾಗೃತಿ ಮೂಡಿಸುವಲ್ಲಿ ಇತರರಿಗೆ ಮಾದರಿಯಾಗಿರುವ ಮಾತಾ ಅಮೃತಾನಂದಮಯಿ ಮಠ ಹಾಗೂ ಯುವ ವಿದ್ಯಾರ್ಥಿಗಳ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಅಲ್ಲದೆ ವೆನ್ಲಾಕ್ ಆಸ್ಪತ್ರೆಗೆ ಆಗಮಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಸದ್ಯದಲ್ಲೇ ಹೆಲ್ಪ್ ಡೆಸ್ಕ್ ಪ್ರಾರಂಭಿಸಲಾಗುವುದು ಎಂದರು.
ಜಿಲ್ಲಾ ಸರ್ಜನ್ ಡಾ.ರಾಜೇಶ್ವರಿ ದೇವಿ ಮಾತನಾಡಿ ಆಸ್ಪತ್ರೆ ಹಾಗೂ ಅದರ ಪರಿಸರದ ಸ್ವಚ್ಛತೆಯ ಬಗ್ಗೆ ನಮ್ಮಲ್ಲಿ ವಿಶೇಷ ಆದ್ಯತೆ ನೀಡಲಾಗುತ್ತದೆ, ನಮ್ಮ ಸ್ವಚ್ಚತಾ ಸೇವಾ ಸಿಬ್ಬಂದಿಗಳು ಕಾಯಕಲ್ಪ ಯೋಜನೆಯ ಅನುಷ್ಠಾನಕ್ಕೆ ತುಂಬು ಹೃದಯದಿಂದ ಸೇವೆಗೈಯುತ್ತಿದ್ದಾರೆ ಎಂದರು.ಅಮ್ಮನವರ ಆಶೀರ್ವಾದದೊಂದಿಗೆ ಈ ಆಸ್ಪತ್ರೆಗೆ ಆಗಮಿಸಿ ಸೇವೆಗೈಯುತ್ತಿರುವ ಅಮಲ ಭಾರತ ತಂಡದ ಸದಸ್ಯರು , ರೆಡ್ ಕ್ರಾಸ್ ಸಂಸ್ಥೆ ಮತ್ತು ರೆಡ್ ಕ್ರಾಸ್ ಯುವ ವಿದ್ಯಾರ್ಥಿಗಳ ಸೇವೆಗೆ ಕೃತಜ್ಞತೆ ಅರ್ಪಿಸಿದರು.
ಅಮಲ ಭಾರತ ಅಭಿಯಾನದ ಅಧ್ಯಕ್ಷ ಡಾ.ಜೀವರಾಜ್ ಸೊರಕೆ ಹಾಗೂ ಮುಖ್ಯ ಕಾರ್ಯಕ್ರಮ ನಿರ್ವಾಹಕ ಸುರೇಶ್ ಅಮಿನ್ ಮಾರ್ಗದರ್ಶನದಲ್ಲಿ ಆಸ್ಪತ್ರೆ ಪರಿಸರದಲ್ಲಿ ಸ್ವಚ್ಛತೆ, ನೆರಳಿನಾಶ್ರಯದ ಬೆಂಚುಗಳಿಗೆ ಪೈಂಟಿಂಗ್, ದಟ್ಟ ವಾಗಿ ಬೆಳೆದಿರುವ ಗಿಡಮರಗಳ ಗೆಲ್ಲುಗಳನ್ನು ಕಡಿದು ಸ್ವಚ್ಛ, ಸುಂದರ ಪರಿಸರವಾಗಿ ಮಾಡಲಾಯಿತು. ಆಸ್ಪತ್ರೆಯ ವೈದ್ಯಾಧಿಕಾರಿಗಳು, ಸ್ಟಾಫ್ ನರ್ಸ್ ಗಳು ವಿವಿಧ ತಂಡಗಳ ಮೂಲಕ ಈ ಸೇವೆ ಯಶಸ್ವಿಯಾಗಿ ನೆರವೇರಲು ಸಹಕರಿಸಿದರು.
ಈ ಸಂದರ್ಭದಲ್ಲಿರೆಡ್ ಕ್ರಾಸ್ ನ ಹಾಗೂ ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಉಪಾಧ್ಯಕ್ಷ ಶ್ರೀ ನಿತ್ಯಾನಂದ ಶೆಟ್ಟಿ, ನಿರ್ದೇಶಕ ರವೀಂದ್ರನಾಥ, ಶ್ರೀ ಮುಳೀಧರ ಶೆಟ್ಟಿ, ಮಾಧವ ಸುವರ್ಣ, ಡಾ.ದೇವದಾಸ್ ಕೃಷ್ಣ ಶೆಟ್ಟಿ, ಮೋಹನ್ ಬಂಗೇರ,ಪ್ರಕಾಶ್ ಕರ್ಕೇರ, ಪ್ರೇಮರಾಜ್,ನಿರಂಜನ್ ಅಡ್ಯಂತಾಯ,ಅಶೋಕ್,ಮಂಗಳೂರುಯುನಿವರ್ಸಿಟಿ ಯುವ ರೆಡ್ ಕ್ರಾಸ್ ನ ನೋಡಲ್ ಅಧಿಕಾರಿ ಶ್ರೀ ಗಣಪತಿ ಗೌಡ, ಎನ್ ಎಸ್ ಎಸ್ ಸಮನ್ವಯಾಧಿಕಾರಿ ಡಾ.ನಾಗರತ್ನ ಮೊದಲಾದವರು ಅಲ್ಲದೆ ಪಾರಾಮೆಡಿಕಲ್ ಮತ್ತು ನರ್ಸಿಂಗ್ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸೇವೆಗೈದು ಯಶಸ್ವಿಗೊಳಿಸಿದರು.
ವಿವಿಧ ಕಾಲೇಜುಗಳಾದ ಮಂಗಳೂರು ಯುನಿವರ್ಸಿಟಿ ಕಾಲೇಜು,ಕೆನರಾ ಕಾಲೇಜು,ಸೈಂಟ್ ಅಲೋಶಿಯಸ್ ಕಾಲೇಜು, ಸರಕಾರಿ ಪದವಿ ಪೂರ್ವ ಕಾಲೇಜು ಕಾವೂರು,ದಯಾನಂದ ಪೈ ಸತೀಶ್ ಪೈ ಸರಕಾರಿ ಪದವಿ ಪೂರ್ವ ಕಾಲೇಜು ಕಾರ್ ಸ್ಟ್ರೀಟ್,ಸರಕಾರಿ ಮಹಿಳಾ ಕಾಲೇಜು ಬಲ್ಮಠ, ಶ್ರೀ ರಾಮಕೃಷ್ಣ ಕಾಲೇಜು, ಶ್ರೀ ಗೋಕರ್ಣನಾಥ ಕಾಲೇಜು ವಿದ್ಯಾರ್ಥಿಗಳು ಸೇವಾರ್ಥಿಗಳಾಗಿದ್ದರು.

























Comments are closed.