ಕರಾವಳಿ

ಕಟೀಲು ಬ್ರಹ್ಮ ಕಲಶೋತ್ಸವ ಹಿನ್ನೆಲೆ : ಕೋಪ್ಟಾ ಕಾಯಿದೆ ಸಕ್ರೀಯವಾಗಿ ಅನುಷ್ಠಾನಗೊಳಿಸಲು ನೋಟೀಸ್

Pinterest LinkedIn Tumblr

ಮಂಗಳೂರು :ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಮಕೃಷ್ಣ ರಾವ್ ಇವರ ನೇತೃತ್ವದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ COTPA -2003 ಕಾರ್ಯಚರಣೆ ನಡೆಸುವ ತಂಡವು ಮುಂಬರುವ ಬ್ರಹ್ಮ ಕಲಶೋತ್ಸವದ ಸಮಯದಲ್ಲಿ ಕಟೀಲು ದೇವಳ ಪರಿಸರದಲ್ಲಿ COTPA- 2003ರ ಉಲ್ಲಂಘನೆ ನಡೆಯದಂತೆ ಕಾಯಿದೆಯನ್ನು ಸಕ್ರೀಯವಾಗಿ ಅನುಷ್ಠಾನ ಗೊಳಿಸುವ ಸಲುವಾಗಿ ತಿಳುವಳಿಕೆ ನೋಟೀಸ್ ನೀಡಿ ಕಾರ್ಯಾಚರಣೆ ನಡೆಸಲಾಯಿತು.

COTPA -2003 ರ ಕಾಯಿದೆ ಕುರಿತಂತೆ ಅಂಗಡಿ ಹಾಗೂ ಹೋಟೇಲ್ ಮಾಲಿಕರಿಗೆ ಮಾಹಿತಿ ನೀಡುವುದರ ಜೊತೆಗೆ ಸೆಕ್ಷನ್ 4 ಬೋರ್ಡ್‍ಗಳನ್ನು ನೀಡಲಾಯಿತು. ಅಷ್ಟೇ ಅಲ್ಲದೆ ಇನ್ನು ಮುಂದಿನ ದಿನಗಳಲ್ಲಿ ಇದರ ಉಲ್ಲಂಘನೆ ನಡೆದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಲಾಯಿತು.

ಈ ತಂಡದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಕಾರ್ಯಕ್ರಮ ಅನುಷ್ಠಾಣಾಧಿಕಾರಿ ಡಾ. ಪ್ರವೀಣ್ ಕುಮಾರ್, ಸಮಾಜ ಕಾರ್ಯಕರ್ತೆ ಶ್ರುತಿ ಸಾಲ್ಯಾನ್, ಹಿರಿಯ ಆಹಾರ ಮತ್ತು ಗುಣಮಟ್ಟ ಅಧಿಕಾರಿ ರಾಜು, ಅಚ್ಯುತ್ ರವರು ಉಪಸ್ಥಿತರಿದ್ದರು.

Comments are closed.