ಕರಾವಳಿ

ಹಾಕಿ ಸ್ಪರ್ಧೆ : ಮಂಗಳೂರು ವಿ.ವಿ ಮಹಿಳೆಯರ ತಂಡ ಅಖಿಲ ಭಾರತ ಮಟ್ಟಕ್ಕೆ ತೇರ್ಗಡೆ

Pinterest LinkedIn Tumblr

ಮಂಗಳೂರು, ಜನವರಿ, 03: ತಮಿಳುನಾಡು ಫಿಸಿಕಲ್ ಎಜುಕೇಶನ್ ಮತ್ತು ಸ್ಪೋರ್ಟ್ಸ್ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಡಿಸೆಂಬರ್ 28 ರಿಂದ 31ರವರೆಗೆ ನಡೆದ ದಕ್ಷಿಣ ವಲಯ ಅಂತರ ವಿಶ್ವವಿದ್ಯಾನಿಲಯ ಮಹಿಳೆಯರ ಹಾಕಿ ಸ್ಪರ್ಧೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ತಂಡ ಭಾಗವಹಿಸಿ ಜಯಶಾಲಿಯಾಗಿರುತ್ತದೆ.

ಮೊದಲ ಕ್ವಾರ್ಟರ್ ಫೈನಲ್‍ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ಮದ್ರಾಸ್ ವಿ.ವಿ. ಎದುರು 1-0 ಗೋಲು ಅಂತರಗಳಿಂದ ಜಯಿಸಿ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಹಾಕಿ ಪಂದ್ಯಾವಳಿಯಲ್ಲಿ ಭಾಗವಹಿಸಲು ಅರ್ಹತೆಯನ್ನು ಪಡೆದುಕೊಂಡಿದೆ. ತಂಡದ ತರಬೇತುದಾರರಾಗಿ ನಾಚಪ್ಪ ಹಾಗೂ ವ್ಯವಸ್ಥಾಪಕರಾಗಿ ಮಿಸ್. ಸಾಯಿರಬಾನು ಇದ್ದರು.

ತಂಡದಲ್ಲಿ ಭಾಗವಹಿಸಿದ ಸದಸ್ಯರು :

ಕುಮುದ ಸಿ.ಆರ್., ಪ್ರಿಯದರ್ಶಿನಿ, ಚೆಲುವಾಂಬ ಆರ್., ನಿವೇದಿತ ಎನ್., ದೀಪ್ತಿ ಕೆ.ಎ., ಪವಿತ್ರ ಪಿ.ಎ., ಸಂಗೀತ ಸಿ.ಜೆ., ಕೀರ್ತನ ಎಮ್.ಎಸ್., ಮಿಲನಾ ಕೆ.ಪಿ., ಆಗ್ನೇಸ್ ಜೆ., ಪಾರ್ವತಿ ಪಿ.ಎ., ಲಿಖಿತ ಎಸ್. ಪಿ., ಲೀಲಾವತಿ ಎಮ್.ಜೆ., ಸುಶ್ಮಿತ ಆರ್., ವಿದ್ಯಾ ಕೆ.ಎಸ್., ಪದ್ಮ ಪ್ರಿಯ, ನೀತು ಕೆ.ಎಸ್., ಪಾರ್ವತಿ ಎಮ್. ಭಾಗವಹಿಸಿರುತ್ತಾರೆ ಎಂದು ದೈಹಿಕ ಶಿಕ್ಷಣ ನಿರ್ದೇಶಕರು, ಮಂಗಳೂರು ವಿಶ್ವವಿದ್ಯಾನಿಲಯ ಇವರ ಪ್ರಕಟಣೆ ತಿಳಿಸಿದೆ.

Comments are closed.